Belagavi News In Kannada | News Belgaum

ಅಥಣಿ ಪಟ್ಟಣದ ವಿವಿಧ ವಾರ್ಡಗಳಲ್ಲಿ 2 ಕೋಟಿ 30 ಲಕ್ಷದ ಕಾಮಗಾರಿಗೆ ಚಾಲನೆ

ಅಥಣಿ: ಪಟ್ಟಣದ ಹದಿನೆಂಟು ವಾರ್ಡಗಳಲ್ಲಿ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಮಹೇಶ ಕುಮಠಳ್ಳಿ ಚಾಲನೆ ನೀಡಿದರು.
ಈ ವಿವಿಧ ವಾರ್ಡಗಳಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ವಾರ್ಡಗಳ ಜನರು ಮನವಿ ಮಾಡಿದ್ದು ಕಂಡು ಬಂತು.
ಈ ವೇಳೆ ಮಾತನಾಡಿದ ಶಾಸಕ ಮಹೇಶ ಕುಮಠಳ್ಳಿ ಬಹಳ ದಿನಗಳಿಂದ ವಿವಿಧ ವಾರ್ಡಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದ್ದರು ಕೂಡ ಕಾಲಾಂತರದಲ್ಲಿ ಶಿಥಿಲಗೊಂಡಿರುವ ಮತ್ತು ಕಾಮಗಾರಿ ಬಾಕಿ ಉಳಿದಿರುವ ವಾರ್ಡಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ, ರಸ್ತೆ ಚರಂಡಿ, ಮತ್ತು ಕುಡಿಯುವ ನೀರಿನ ಪೈಪಲೈನ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗಿದ ಎಂದರು.
ಈ ವೇಳೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ, ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ವಿದ್ಯಾ ಐಹೊಳೆ, ರಾಜು ಗುಡೊಡ್ಡಗಿ, ಮಲ್ಲಿಕಾರ್ಜುನ ಬುಟಾಳಿ, ವೀಲಿದರಾಜ ಯಳಮಲ್ಲೆ, ಬಸವರಾಜ ನಾಯಿಕ, ಮುಖಂಡರಾದ ಡಾ. ಅನಿಲ ಸೌದಾಗರ, ಶಿವಕುಮಾರ ಅಪರಾಜ, ನಿಂಗಪ್ಪ ನಂದೇಶ್ವರ, ಇನ್ನೂ ಹಲವರು ಮುಖಂಡರು ಉಪಸ್ಥಿತರಿದ್ದರು./////