Belagavi News In Kannada | News Belgaum

ಸಲ್ಮಾನ್ ಖಾನ್ ಗೆ ಸಾರ್ವಜನಿಕವಾಗಿ ಕಿಸ್ ಕೊಟ್ಟ ನಟಿ ಶೆಹನಾಜ್ ಗಿಲ್:‌ ವಿಡಿಯೋ ವೈರಲ್

ಮುಂಬೈ: ಬಿಗ್ ಬಾಸ್ ಖ್ಯಾತಿಯ, ಕಿರುತೆರೆ ಮತ್ತು ಹಿರಿತೆರೆ ನಟಿ ಶೆಹನಾಜ್ ಗಿಲ್ ಕಳೆದ ಹಲವು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.  ಪ್ರಿಯಕರ, ನಟ ಸಿದ್ಧಾರ್ಥ ಶುಕ್ಲಾ ನಿಧನದ ನಂತರ ಅವರು ಯಾವುದೇ ಕಾರ್ಯಕ್ರಮಗಳಲ್ಲೂ ಭಾಗಿಯಾಗಿರಲಿಲ್ಲ. ಮೊನ್ನೆಯಷ್ಟೇ ಸಲ್ಮಾನ್ ಖಾನ್ ಸಹೋದರಿ ಆಯೋಜನೆ ಮಾಡಿದ್ದ ಇಫ್ತಾರ ಕೂಟದಲ್ಲಿ ಪಾಲ್ಗೊಂಡಿದ್ದ ಶೆಹನಾಜ್ ಗಿಲ್, ನಟ ಸಲ್ಮಾನ್ ಖಾನ್ ಗೆ ಸಾರ್ವಜನಿಕವಾಗಿ ತಬ್ಬಿಕೊಂಡು, ಕಿಸ್ ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾದಲ್ಲಿ ಶೆಹನಾಜ್ ಗಿಲ್ ಕೂಡ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಅದೊಂದು ಪ್ರಮುಖ ಪಾತ್ರ ಎನ್ನಲಾಗುತ್ತಿದೆ. ಅಲ್ಲದೇ, ಮೊದಲಿನಿಂದಲೂ ಸಲ್ಮಾನ್ ಖಾನ್ ಜತೆ ಆತ್ಮೀಯ ಸಂಬಂಧ ಹೊಂದಿದ್ದ ಶೆಹನಾಜ್ ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ಆತಿಥ್ಯ ಸ್ವೀಕರಸಿದ್ದಾರೆ.
ಇಫ್ತಾರ್ ಕೂಟ ಮುಗಿದ ಬಳಿಕ ಮನೆಗೆ ತೆರಳು ಹೊರಟ ಶೆಹನಾಜ್ ಅವರು, ಸಲ್ಮಾನ್ ಖಾನ್ ಅವರನ್ನು ತಬ್ಬಿಕೊಂಡೆ ಆಚೆ ಬರುತ್ತಾರೆ. ಕ್ಯಾಮೆರಾಗಳಿಗೆ ಫೋಸ್ ಕೊಡುತ್ತಿದ್ದಾರೆ. ಎರಡೆರಡು ಬಾರಿ ತಬ್ಬಿಕೊಳ್ಳುತ್ತಾರೆ. ನಂತರ ಬಿಗಿಯಾಗಿ ತಬ್ಬಿಕೊಂಡು ಕಿಸ್ ಕೊಟ್ಟು, ಅಲ್ಲಿಂದ ಕಾರಿನತ್ತ ಹೊರಡುತ್ತಾರೆ. ಸಲ್ಮಾನ್ ಖಾನ್ ಕೂಡ ಆತ್ಮೀಯವಾಗಿಯೇ ಶೆಹನಾಜ್ ಅವರನ್ನು ಬೀಳ್ಕೊಡುತ್ತಾರೆ.
ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಹಂಚಿಕೊಂಡಿದ್ದು, ಇಬ್ಬರ ಆತ್ಮಿಯತೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಪ್ರಿಯಕರನ ಸಾವಿನ ನೋವಿನಿಂದ ಆಚೆ ಬಂದ ಶೆಹನಾಜ್ ಗಿಲ್, ಹೀಗೆಯೇ ಖುಷಿ ಖುಷಿಯಾಗಿಯೇ ಇರಿ ಎಂದು ಹಾರೈಸಿದ್ದಾರೆ./////