ಚಿಕ್ಕೋಡಿಯಲ್ಲಿ ಪೊಲೀಸ್ ವಾಹನದ ಮೇಲೆ ಕಲ್ಲುತೂರಿದ ಕಿಡಿಗೇಡಿಗಳು

ಬೆಳಗಾವಿ: ಬಸವ ಜಯಂತಿ ನಿಮಿತ್ತ ತಡರಾತ್ರಿವರೆಗೂ ಡಿಜೆ ಸದ್ದಿಗೆ ಕುಣಿಯುತ್ತಿದ್ದ ಯುವಕರನ್ನು ತಡೆದಿದ್ದಕ್ಕೆ ಪೊಲೀಸ್ ವಾಹನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ನಡೆದಿದೆ.
ತಡರಾತ್ರಿವರೆಗೂ ನಡದ ಡಿಜೆ ಮೆರವಣಿಗೆಗೆ ಸಾರ್ವಜನಿಕ ಅಡಚಣೆ ಉಂಟಾ ಮಾಡುತ್ತಿದೆ ಎಂದು ಯುವಕರಿಗೆ ಬುದ್ದಿ ಹೇಳಿ ಡಿಜೆ ನಿಲ್ಲಿಸುವಂತೆ ಪೊಲೀಸರು ತಡದಿದ್ದಕ್ಕೆ ಕಿಡಿಗೇಡಿಗಳು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಇನ್ನೂ ಸ್ಥಳಕ್ಕೆ ಚಿಕ್ಕೋಡಿ ಠಾಣೆ ಪೊಲೀಸರು ಭೇಟಿ ನೀಡಿ ಕಿಡಿಗೇಡಿಗಳ ವಿರುದ್ಧ ಪರಿಶೀಲನೆ ನಡೆಸುತ್ತಿದ್ದಾರೆ. /////