Belagavi News In Kannada | News Belgaum

50 ಲಕ್ಷ ರೂ. ವೆಚ್ಚದಲ್ಲಿ ಗಾರ್ಡನ್ ಅಭಿವೃದ್ಧಿ – ಮೃಣಾಲ ಹೆಬ್ಬಾಳಕರ್

ಬೆಳಗಾವಿ –  ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹೆಚ್ಚು ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು. ನಮ್ಮ ಸುತ್ತಲಿನ ಉದ್ಯಾನಗಳ ನಿರ್ವಹಣೆಗೆ ನಾವೇ ಮುಂದಾಗೋಣ ಎಂದು ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಕರೆ ನೀಡಿದರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಿರ್ಮಾಣವಾಗಲಿರುವ ನಗರದ ಕುಮಾರಸ್ವಾಮಿ ಲೇ ಔಟ್‌ನ ಗಾರ್ಡನ್ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

 50 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನ ನಿರ್ಮಾಣವಾಗಲಿದೆ. ಸ್ಥಳೀಯರು ಹೆಚ್ಚು ಮುತುವರ್ಜಿ ವಹಿಸಿ ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡಿಸಿಕೊಳ್ಳಬೇಕು. ಮಾದರಿ ಉದ್ಯಾನವಾಗಿ ಅಭಿವೃದ್ಧಿಯಾಗಲು ಜನರು ಆಸಕ್ತಿ ವಹಿಸಿದಾಗ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
ಉದ್ಯಾನಗಳಿದ್ದರೆ ಸುತ್ತಲಿನ ಪರಿಸರ ಅಹ್ಲಾದಕರವಾಗಿರುತ್ತದೆ. ಉಸಿರಾಡುವ ಗಾಳಿ ಶುದ್ಧವಾಗಿರುತ್ತದೆ. ಹಾಗಾಗಿ ಉದ್ಯಾನಗಳನ್ನು ಸರಿಯಾಗಿ ನಿರ್ವಹಣೆ ಮಾಡುವ, ಸಂಬಂಧಿಸಿದವರಿಂದ ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ನಾವೆಲ್ಲರೂ ತೆಗೆದುಕೊಳ್ಳಬೇಕು ಎಂದು ಮೃಣಾಲ ಹೇಳಿದರು.

 ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.