Belagavi News In Kannada | News Belgaum

ಹುಣಸಗಿ ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಿದ ಬಸವ ಜಯಂತಿ

ಹುಣಸಗಿ: 12ನೇ ಶತಮಾನದ ಬಸವಣ್ಣನ ವಚನಗಳು ಎಂಟನೂರು ವರ್ಷವಾದರೂ ಇಂದಿಗೂ ಎಲ್ಲಾ ಜಾತಿ ಜನರ ಮನಸ್ಸಿನಲ್ಲಿ ಉಳಿದಿರುವುದು ವಿಶೇಷ ಎಂದು ಉಪನ್ಯಾಸಕ ಐ ಬಿ ಹಿರೇಮಠ ಹೇಳಿದರು.

ತಾಲೂಕು ಆಡಳಿತ ವತಿಯಿಂದ ಜಗಜ್ಯೋತಿ ಬಸವೇಶ್ವರರ 889 ನೇ ಜಯಂತಿಯನ್ನು ಆಚರಿಸಲಾಯಿತು
ಈ ವೇಳೆ ಅತಿಥಿ ಉಪನ್ಯಾಸಕರಾಗಿ ಐ ಬಿ ಹಿರೇಮಠ ಮಾತನಾಡಿ, ೧೨ನೇ ಶತಮಾನ ಕಾಲದ ಬಸವಣ್ಣನವರು ವಚನಗಳಿಂದ ಸಮಾಜವನ್ನು ತಿದ್ದುವ ಕೆಲಸದ ಜತೆ ಎಲ್ಲಾ ಜಾತಿ ಜನಾಂಗದವರು ಕಾಯಕದಿಂದ ಸಹ ಬಾಳ್ವೆ ಮಾಡಲು ಹೇಳಿದರು.

ಅಧ್ಯಕ್ಷತೆ ವಹಿಸಿ ತಹಸೀಲ್ದಾರ ಅಶೋಕಕುಮಾರ ಸುರಪುಕರ ಮಾತನಾಡಿ, ರಂಜಾನ ಹಾಗು ಬಸವ ಜಯಂತಿ ಯನ್ನು ಶಾಂತಿ ಸೌಹಾರ್ದಯುತವಾಗಿ ಆವರಿಸಿದ್ದು ತುಂಬಾ ಸಂತೋಷ ಎಂದರು.

ಸಿ.ಪಿ.ಐ ಎನ್.ಕೆ ದೌಲತ್ , ವಿರೇಶ ಚಿಂಚೋಳಿ, ಎಮ್.ಎಸ್. ಚಂದಾ, ಬಿ.ಎಲ್.ಹಿರೇಮಠ, ಹೊನ್ನಪ್ಪ ದೇಸಾಯಿ,ಸಿದ್ರಾಮಪ್ಪ ಮುದಗಲ್, ಸಿದ್ದು ರೇವಡಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ ಸ್ಥಾವರಮಠ, ಬಸವರಾಜ ಮಲಗಲದಿನ್ನಿ, ಸಂಗಣ್ಣ ವೈಲಿ, ಶಿವಲಿಂಗಸ್ವಾಮಿ, ಹನೀಫ್ ಬೆಣ್ಣೂರು ಸೇರಿದಂತೆ ಬಸವಾಭಿಮಾನಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಅಕ್ಕಮಹಾದೇವಿ, ಶ್ರೀದೇವಿ ಬಂಡೋಳಿ ಇವರಿಂದ ಬಸವಣ್ಣನವರ ವಚನಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು. ಬಸವರಾಜ ಬಿರಾದಾರ ಸ್ವಾಗತಿಸಿದರು. ನಾಗನಗೌಡ ಪಾಟೀಲ್ ನಿರೂಪಿಸಿದರು. ಅಮರೇಶ ಮಾಲಗತ್ತಿ ವಂದಿಸಿದರು.

ಪ್ರಸ್ತಾವಿಕ ನುಡಿ ಸಣ್ಣಕ್ಕೇಪ್ಪ ಕೊಂಡಿಕಾರ ಮಾತನಾಡಿದರು. ಬಸವಣ್ಣ ಕಟ್ಟಿದ ನಾಡು ನಮ್ಮದು ಕಲ್ಯಾಣ ಕರ್ನಾಟಕದಲ್ಲಿ ಹುಟ್ಟಿರುವ ನಾವೇ ಧನ್ಯರು, ಸಮಾಜದಲ್ಲಿ ಕಲ್ಯಾಣವನ್ನು ಸೃಷ್ಟಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮುಂಚೂಣಿಯಲ್ಲಿ ಬಂದಂತಹ ಬಸವಣ್ಣನವರ ವಚನಗಳೇ ಸಾಕ್ಷಿ ಎಂದರು.

ಹಿಂದು ಮುಸ್ಲಿಮ್ ಬಾಂಧವರು ರಂಜಾನ ಮತ್ತು ಬಸವ ಜಯಂತಿ ಯನ್ನು ಸೌಹಾರ್ದಯುತವಾಗಿ ಆಚರಿಸಿದರು.

ಪಟ್ಟಣದಲ್ಲಿ ಬಸವ ಯುವ ಬ್ರೀಗೇಡ ಹಾಗೂ ಪಟ್ಟಣದ ಬಸವ ಧರ್ಮ ಅನುಯಾಯಿಗಳಿಂದ ಬಸವ ಜಯಂತಿ ಆಚರಣೆ ನಿಮಿತ್ಯ ಬಸವಣ್ಣನವರ ಭಾವ ಚಿತ್ರವನ್ನು ತೆರೆದ ವಾಹನದಲ್ಲಿ ಇರಿಸಿ ಉತ್ಸವವು ಅದ್ದೂರಿಯಾಗಿ ನಡೆಯಿತು. ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಬಸವೇಶ್ವರ ವೃತ್ತದವರೆಗೆ ಭಟ್ಕಳದ ವಾಧ್ಯಮೇಳ, ತಮಟೆ, ಡೊಳ್ಳು ಕುಣಿತ,ಹಲಿಗೆ ಮೇಳ, ಡಿಜೆಗಳೊಂದಿಗೆ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಮುಖಂಡ ವಿರೇಶ ಚಿಂಚೋಳಿ, ಬಸವರಾಜಸ್ವಾಮಿ ಸ್ಥಾವರಮಠ, ಬಸವರಾಜ ಬಳಿ,ಎಮ್ ಎಸ್ ಚಂದಾ, ಮಂಜುನಾಥ ಬಳಿ, ರಾಕೇಶ ಬಳೂರಗಿ, ರುದ್ರೇಶ ಪಡಶೆಟ್ಟಿ, ಅರುಣ ಮಲಗಲದಿನ್ನಿ, ಹೊನ್ನಕೇಶವ ದೇಸಾಯಿ, ಸಿದ್ದು ಮುದಗಲ್, ಶರಣು ದಂಡಿನ, ಅನಿಲ ಬಳಿ, ಹೊನ್ನಪ್ಪ ದೇಸಾಯಿ, ಮುರುಗೆಣ್ಣ ದೇಸಾಯಿ, ರವಿ ಪುರಾಣಿಕಮಠ, ರವಿ ಬಂಟನೂರ, ಬಸಲಿಂಗಯ್ಯ ಮಠ, ವಿಜಯಕುಮಾರ ಬಂಡೋಳಿ, ಸಿದ್ದು ರೇವಡಿ,ಶ್ತೀಕಾಂತ ದೇಸಾಯಿ ಹಾಗೂ ಬಸವ ಬಳಗದ ಪದಾಧಿಕಾರಿಗಳು ಸೇರಿದಂತೆ ಪಟ್ಟಣದ ಪ್ರಮುಖರು ಇದ್ದರು. ಸಿಪಿಐ ದೌಲತ್ ಎನ್ಕೆ, ಮತ್ತು ಪಿಎಸ್ಐ ಚಿದಾನಂದ ಸೌದಿ ಸೇರಿದಂತೆ ಪೋಲಿಸ್ ಸಿಬ್ಬಂದಿ ಸೂಕ್ತ ಬಂದೊಬಸ್ತ ವ್ಯವಸ್ಥೆ ಮಾಡಿದರು.
ಮೆರವಣಿಗೆ ಉದ್ದಕ್ಕೂ ಬಿಸಲಿನ ಬೆಗೆಯನ್ನು ತಣಿಸಲು ತಂಪು ನೀರಿನ ವ್ಯವಸ್ಥೆಯನ್ನು ಸಿದ್ದನಗೌಡ ಬಿರಾದರ ಮಾಡದರೆ, ಪಾನಕದ ವ್ಯವಸ್ಥೆಯನ್ನು ಪ್ರಕಾಶ ಅಂಗಡಿ ವೆಂಕಟೇಶ್ವರ ಮೋಟಾರ್ಸನವರು ಮಾಡಿದರು.