Belagavi News In Kannada | News Belgaum

ವ್ಯಕ್ತಿ ನಾಪತ್ತೆ ಹಾಗೂ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ: ಆಯುಧಗಳ ಠೇವಣಿಗೆ ಡಿಸಿ ಸೂಚನೆ

ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ: ಆಯುಧಗಳ ಠೇವಣಿಗೆ ಡಿಸಿ ಸೂಚನೆ

ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ: ಆಯುಧಗಳ ಠೇವಣಿಗೆ ಡಿಸಿ ಸೂಚನೆ

ಬೆಳಗಾವಿ,ಮೇ.05  : ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಒಟ್ಟು 21 ಸ್ಥಾನಗಳಲ್ಲಿ ಮೇ.20ರಂದು ಉಪ ಚುನಾವಣೆಯ ಮತದಾನ ನಡೆಯಲಿದೆ. ಹೀಗಾಗಿ ಶಾಂತಿ, ಸುವ್ಯವಸ್ಥಿತ ಮತದಾನದ ದೃಷ್ಠಿಯಿಂದ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಯುಧ/ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಲೈಸೆನ್ಸ್‍ದಾರರು ತಕ್ಷಣವೇ ಆಯಾ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶಿಸಿದ್ದಾರೆ.
ಸಂಕೇಶ್ವರ ಪುರಸಭೆಯ ವಾರ್ಡ್ ಸಂಖ್ಯೆ 13ರ ಚುನಾವಣೆ ನಡೆಯಲಿರುವ ಹಿನ್ನೆಲೆ ಈ ವಾರ್ಡ್ ವ್ಯಾಪ್ತಿಯಲ್ಲಿ ಆಯುಧಗಳನ್ನು ಹೊಂದಿರುವ ಎಲ್ಲ ಲೈಸೆನ್ಸ್‍ದಾರರು ತಮ್ಮ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರಗಳ್ನು ತಕ್ಷಣ ಠೇವಣಿ ಇಡಬೇಕು ಎಂದು ತಿಳಿಸಲಾಗಿದೆ.
ಚುನಾವಣೆ ಮುಗಿಯುವ ತನಕ ಲೈಸೆನ್ಸ್‍ದಾರರು ಶಸ್ತ್ರಾಸ್ತ್ರಗಳನ್ನು ಹೊತ್ತು ತಿರುಗಾಡುವಂತಿಲ್ಲ. ಅಲ್ಲದೇ ಎಲ್ಲ ಲೈಸೆನ್ಸ್‍ದಾರರು ಹೊಂದಿರುವ ಆಯುಧಗಳನ್ನು ಠೇವಣಿ ಮಾಡಿದ ಬಗ್ಗೆ ಸ್ವೀಕೃತಿ ಪತ್ರ ನೀಡುವುದಕ್ಕೆ ಮತ್ತು ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಂಬಂಧಿಸಿದವರಿಗೆ ಆಯುಧವನ್ನು ವಾಪಸ್ಸು ನೀಡುವುದಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಆರಕ್ಷಕ ಅಧೀಕ್ಷಕರರು ಕ್ರಮ ಕೈಗೊಳ್ಳಲಿದ್ದಾರೆ. ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.
ಈ ಆದೇಶವು ಯಾವುದೇ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್ ಅಥವ ಸಂಸ್ಥೆಗಳು ಅದರ ಕಚೇರಿ ಮತ್ತು ಆಸ್ತಿಗಳ ಸಂರಕ್ಷಣೆಗಾಗಿ ಅವುಗಳ ಹೆಸರಿನಲ್ಲಿ ಹೊಂದಿರುವಂತಹ ಆಯುಧ ಅನುಜ್ಞಾ ಪತ್ರದಾರರಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಮೇ.6 ರಂದು ಶ್ರೀ ಶಂಕರಾಚಾರ್ಯ ಜಯಂತಿ ಉತ್ಸವ

 

ಬೆಳಗಾವಿ,ಮೇ.5: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ, ಶುಕ್ರವಾರ (ಮೇ.6) ಬೆಳಿಗ್ಗೆ 11 ಗಂಟೆಗೆ ನಗರದ ಕಟ್ಟಿಮನಿ ಸಭಾಂಗಣದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ ಉತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಕಾರ್ಯಕ್ರಮ ಉದ್ಘಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಹಾಗೂ ಮುಜರಾಯಿ, ಹಾಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ಭಾಗವಹಿಸಲಿದ್ದಾರೆ.
ಬೆಳಗಾವಿ ಉತ್ತರ ವಿಧಾನಸಭಾ ಮತ ಕ್ಷೇತ್ರದ ಶಾಸಕರಾದ ಅನೀಲ ಬೆನಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಸಭಾಧ್ಯಕ್ಷರಾದ ವಿಶ್ವನಾಥ್ ಮಾಮನಿ, ಕರ್ನಾಟಕ ಕೊಳಗೇರಿ ಅಭವೃದ್ಧಿ ಮಂಡಳಿಯ ಅಧ್ಯಕ್ಷರಾದ ಮಹೇಶ ಕುಮಟಳ್ಳಿ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ದುರ್ಯೋಧನ ಐಹೊಳೆ ಹಾಗೂ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಪಿ. ರಾಜೀವ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜಿಲ್ಲಾಧಿಕರಿ ಎಂ. ಜಿ ಹಿರೇಮಠ, ಪೆÇಲೀಸ್ ಆಯುಕ್ತರಾದ ಡಾ. ಎಂ. ಬಿ ಬೋರಲಿಂಗಯ್ಯ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಾದ ದರ್ಶನ್ ಹೆಚ್. ವಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ವ್ಯಕ್ತಿ ನಾಪತ್ತೆ

ಬೆಳಗಾವಿ,ಮೇ.05: ಖಾನಾಪೂರ ತಾಲೂಕಿನ ಕಾಪೊಲಿ ಗ್ರಾಮದ 84 ವರ್ಷದ ವೃದ್ಧ ವೆಂಕಟರಾವ ಬಾಬರ ಎಂಬ ವ್ಯಕ್ತಿ ಮಾರ್ಚ್ 13 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾರೆ.
ನಾಪತ್ತೆ ವ್ಯಕ್ತಿಯ ಚಹರೆ:
5 ಅಡಿ 7 ಇಂಚು ಎತ್ತರ, ಸದೃಢ ಮೈಕಟ್ಟು, ಗೋದಿಗೆಂಪು ಮೈ ಬಣ್ಣ, ಕೋಲು ಮುಖ ಹೊಂದಿರುವ ಈತ 7ನೇ ತರಗತಿ ಓದಿದ್ದಾನೆ. ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ. ಈತ ನಾಪತ್ತೆಯಾದ ಸಂದರ್ಭದಲ್ಲಿ ಬಿಳಿ ಶರ್ಟ್, ಬಿಳಿ ಪೈಜಾಮ ಧರಿಸಿರುತ್ತಾನೆ.
ವ್ಯಕ್ತಿಯ ಸುಳಿವು ಸಿಕ್ಕವರು ಕೂಡಲೇ ನಂದಗಡ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 0836-236633 ಹಾಗೂ ಪಿಐ ಅವರ ಮೊಬೈಲ್ ಸಂಖ್ಯೆ 9480804087ನ್ನು ಸಂಪರ್ಕಿಸಬಹುದು ಎಂದು ನಂದಗಡ ಪೊಲೀಸ್ ಠಾಣೆಯ ಪಿಎಸ್‍ಹೆಚ್‍ಒ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////