Belagavi News In Kannada | News Belgaum

ಪಂಚಮಸಾಲಿ ಸಮಾಜದಿಂದ 2ಎ ಮಿಸಲಾತಿಗಾಗಿ ಪ್ರತಿಭಟನೆ

ಹುಣಸಗಿ: ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಮಾಜದಿಂದ 2ಎ ಮೀಸಲಾತಿ ನೀಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ಹೊನ್ನಕೇಶವ ದೇಸಾಯಿ ಮಾತನಾಡಿ, ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಫೆಬ್ರುವರಿಯ ಅಧಿವೇಶದಲ್ಲಿ ಕರ್ನಾಟಕದ ಸುಮಾರು 1ಕೋಟಿ ಜನಸಂಖ್ಯೆ ಹೊಂದಿದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಎಪ್ರೀಲ್ 14ರೊಳಗಾಗಿ ನೀಡುವುದಾಗಿ ಭರವಸೆ ನೀಡಿದ್ದರು. ಇನ್ನೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿಲ್ಲ, ಸಮಾಜದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನಾವು ಸುಮಾರು 16 ತಿಂಗಳ ನಿರಂತರ ಹೋರಾಟ ಕೂಡಲಸಂಗಮದಿಂದ ಜನೆವರಿ 14 ರಿಂದ ಪೆಬ್ರುವರಿ 21ರ ವರಗೆ (712ಕಿಮೀ) ಬೆಂಗಳೂರು ಅರಮನೆ ಮೈದಾನದವರಗೆ ಪಾದಯಾತ್ರೆ ಮಾಡಿ ಪೆಬ್ರುವರಿ 22 ಅರಮನೆ ಮೈದಾನದಲ್ಲಿ 10ಲಕ್ಷ ಹೆಚ್ಚು ಪಂಚಮಸಾಲಿ ಸಮಾಜ ಬಾಂದವರು ಸೇರಿ ಬೃಹತ ಸಮಾವೇಶ ಮಾಡಿ, ಇನ್ನೂ ಹಲವಾರು ಕಾರ್ಯಕ್ರಮ ಮಾಡಿ ಸರಕಾರದ ಗಮನಕ್ಕೆ ತಂದರೂ ಪ್ರಯೋಜನವಾಗದಿರುವುದು ವಿಪರ್ಯಾಸವೇ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ಸರಕಾರ ಮಾತು ನೀಡಿದಂತೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲಿ, ಇಲ್ಲದಿದ್ದರೆ ಈ ಬಾರಿ ರಾಜ್ಯಾದ್ಯಂತ ಇನ್ನಷ್ಟು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ನಂತರ ತಹಸೀಲ್ದಾರ ಅಶೋಕ ಸುರಪುರಕರ್ ಅವರಿಗೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಬಸವರಾಜ್ ಮಲಗಲದಿನ್ನಿ, ವೀರೇಶ ಚಿಂಚೋಳಿ, ಮಹಾದೇವಪ್ಪ ಬೂದಿಹಾಳ್. ಭೀಮನಗೌಡ, ಅಂಬರೀಷ್ ದೇಸಾಯಿ, ರಾಜಶೇಖರ ದೇಸಾಯಿ, ರವಿ ಬಂಟನೂರ, ಶಾಂತಗೌಡ ಪಾಟೀಲ್, ರಾಕೇಶ್ ಬಳೂರಗಿ, ಬಸನಗೌಡ ತಾಳಿಕೋಟಿ, ಮಲ್ಲಿಕಾರ್ಜುನ ಕವಿತಾಳ್, ಗೌಡಪ್ಪಗೌಡ ಬಿರಾದಾರ್, ಮಲ್ಲನಗೌಡ, ಸತೀಶ್ ಬಿರಾದಾರ, ಕಿರಣ ಕುಮಾರ ಸೇರಿದಂತೆ ಅನೇಕ ಸಮಾಜ ಬಾಂಧವರು ಇದ್ದರು.