ವಿದ್ಯುತ್ ತಂತಿ ತಗುಲಿ ತಾಯಿ-ಇಬ್ಬರು ಮಕ್ಕಳು ಧಾರುಣ ಸಾವು

ಕೊಪ್ಪಳ: ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಇಬ್ಬರು ಮಕ್ಕಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದಿದೆ.
ಹುಲಿಹೈದರ್ ಗ್ರಾಮದ ಮನೆಯಲ್ಲಿ ಬಟ್ಟೆ ಒಣ ಹಾಕುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ತಾಯಿ ಶೈಲಮ್ಮ (28), ಮಕ್ಕಳಾದ ಪವನ್ (2) ಹಾಗೂ ಸಾನ್ವಿ (3) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿ ಶೈಲಮ್ಮ ಬಟ್ಟೆ ಒಣಗಾಗುವ ವೇಳೆಯಲ್ಲಿ 2 ವರ್ಷದ ಮಗ ಪವನ್ ಅನ್ನು ಎತ್ತಿಕೊಂಡು, ಪಕ್ಕದಲ್ಲೇ ಇದ್ದಂತ ಮತ್ತೊಬ್ಬ ಮೂರು ವರ್ಷದ ಮಗಳು ಸಾನ್ವಿಯನ್ನು ಇಟ್ಟುಕೊಂಡು ಒಣ ಹಾಕುತ್ತಿದ್ದರು. ಈ ವೇಳೆ ಹಸಿ ಬಟ್ಟೆ ವಿದ್ಯುತ್ ತಂತಿ ತಾಗಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.