Belagavi News In Kannada | News Belgaum

ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಎಫ್ಐಆರ್ ದಾಖಲು

ಬೆಳಗಾವಿ: ಕರ್ನಾಟಕ ಗಡಿ ಭಾಗ ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ವಿವಾದಿತ ನಕ್ಷೆ ತಯಾರಿಸಿ ,ಈ ನಕ್ಷೆಯಲ್ಲಿ ಬೆಳಗಾವಿ, ಬೀದರ್ ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಿಸಿದ ನಕ್ಷೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕರವೇ ಕಾರ್ಯಕರ್ತ ವಿನಾಯಕ ಭೋವಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಎಂಇಎಸ್ ಮುಖಂಡ ಶುಭಂ ಶೆಳಕೆ ವಿವಾದಿತ ಪೋಸ್ಟ್ ಹಾಕುವ ಮೂಲಕ ಗಡಿ ಖ್ಯಾತೆ ತೆಗೆದಿದ್ದ, ವಿವಾದಾತ್ಮಕ ವಿಡಿಯೋ ಸಹ ಪೋಸ್ಟ್ ಮಾಡಿದ್ದ. ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ‌ ಗ್ರಾಫಿಕ್ ವಿಡಿಯೋ, ಫೋಟೋ ಪೋಸ್ಟ್ ಮಾಡಿ ಪುಂಡಾಟಿಕೆ ಪ್ರದರ್ಶಿಸಿದ್ದ, ಅಲ್ಲದೇ ನಾಡದ್ರೋಹಿ ಎಂಇಎಸ್‌ ಮುಖಂಡ ಶುಭಂ ಶೆಳಕೆಗೆ ಪೋಸ್ಟ್ ಡಿಲೀಟ್ ಮಾಡುವಂತೆ ಠಾಣೆಗೆ ಕರೆಸಿ ಪೋಲೀಸರು ವಾರ್ನಿಂಗ್ ಮಾಡಿದ್ದರು. ಪೊಲೀಸರು ಎಚ್ಚರಿಕೆ ನೀಡಿದ್ದರೂ ಪೋಸ್ಟ್ ಡಿಲೀಟ್ ಮಾಡದೇ ಉದ್ಧಟತನ ಮೆರೆದಿದ್ದ ಶುಭಂ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ.