Belagavi News In Kannada | News Belgaum

ಸಂವಿಧಾನದ ಮಾರ್ಗದಲ್ಲಿ ನಡೆದಾಗ ಮಾತ್ರ ನಾಡಿನಲ್ಲಿ ಶಾಂತಿ, ನೆಮ್ಮದಿ: ವಿಪಕ್ಷನಾಯಕ

ಬೆಳಗಾವಿ: “ಸರ್ವ ಧರ್ಮಗಳು ಸಮಾನತೆಯಿಂದ ಬಾಳಬೇಕೆಂದು ಬಸವಣ್ಣನವರು ಹೇಳಿದ್ದಾರೆ. ಅಸಮಾನತೆ ಹೋಗಲಾಡಿಸಲು ಅನೇಕರು ಪ್ರಯತ್ನ ಮಾಡಿದ್ದಾರೆ.   ಜಗತ್ತಿನಲ್ಲಿ ಯಾವ ಧರ್ಮ ಮನುಷ್ಯತ್ವವನ್ನ ಪ್ರತಿಪಾದಿಸುತ್ತೆ ಅದೇ ಶ್ರೇಷ್ಠವಾದ ಧರ್ಮ “ಎಂದು ವಿಪಕ್ಷನಾಯಕ ಸಿದ್ಧರಾಮಯ್ಯ ಹೇಳಿದರು.

ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೋಂಟದಾರ್ಯ ಮಠದ ಶಿವಮೂರ್ತಿ ದೇವರ ಪಟ್ಟಾಧಿಕಾರ ಕಾರ್ಯಕ್ರಮ ಭಾಗಿಯಾಗಿ ಮಾತನಾಡಿದ ಅವರು, ಮಹಾಪುರುಷರು ಹೇಳಿದ ಮಾತುಗಳನ್ನು ಈಗಿನ ಜನರು ಅರಿತುಕೊಳ್ಳಬೇಕಾಗಿದೆ. ಎಲ್ಲವನ್ನು ಬಿಟ್ಟು ಧರ್ಮಗಳ ನಡುವೆ ತುಪ್ಪ ಸುರಿಯುವುದಲ್ಲ ಎಂದು ಕಿಡಿಕಾರಿದರು.

ಮನುಷ್ಯ ಮನುಷ್ಯರಾಗಿ ಬದುಕಬೇಕೆಂದು ಕನಸು ಕಂಡಿದ್ದರು.  ಅವರ ವ್ಯಾಖ್ಯಾನಗಳು  ಒಂದು ಪಾಲನೆಯಾಗುತ್ತಿಲ್ಲ. ನಾವು ಆಚರಿಸುವ ಧರ್ಮವನ್ನ ವೈಭವೀಕರಿಸಲಾಗುತ್ತಿದೆ ಇವೆಲ್ಲವೂ ಬಿಟ್ಟು ಒಂದಾಗಿ ಬಾಳಬೇಕಾಗಿದೆ.  ಸಂವಿಧಾನದಲ್ಲಿ ಧರ್ಮ, ಜಾತಿ ಆಧಾರದ ಮೇಲೆ ಮನುಷ್ಯರನ್ನ ವಿಂಗಡಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಹೇಳಿದರು.

ಯಾವುದೇ ಪಕ್ಷದ ಸರ್ಕಾರ ಬರಲಿ ಸಂವಿಧಾನದ ಮಾರ್ಗದಲ್ಲಿ ನಡೆಯಬೇಕಿದೆ. ನಾಡಿನಲ್ಲಿ  ಶಾಂತಿ ನಿರ್ಮಾಣ ಮಾಡುವ ಕೆಲಸವಾಗಬೇಕು  ಹೊರತು  ಅಶಾಂತಿ, ಹಿಂಸೆಗೆ  ಸರ್ಕಾರ ಅವಕಾಶ  ನೀಡಬಾರದು ಎಂದರು.

ಮನುಷ್ಯರಲ್ಲಿ ಹರಿಯುವ ರಕ್ತ ಒಂದೇ: ಸಿದ್ದರಾಮಯ್ಯ

ಹಿಂದೂ,  ಮುಸ್ಲಿಂ, ಕ್ರಿಶ್ಚಿಯನ್   ಧರ್ಮಗಳ ಬೇರೆ ಬೇರೆ ಆದರೂ,  ಮನುಷ್ಯರಲ್ಲಿ ಹರಿಯುವ ರಕ್ತ ಒಂದೇ,  ತನಗೆ ಆಪರೇಷನ್ ಮಾಡಿಸಿಕೊಂಡ್ರೇ ಕುರುಬರ ರಕ್ತ ಕೊಡಿ ಅಂತಾ ಕೇಳ್ತೆನಾ? ಎಂದು  ಸರ್ಕಾರಕ್ಕೆ ಚಾಟಿ ಬಿಸಿದರು.

ಇತ್ತೀಚಿನ ಬೆಳವಣಿಗೆ ಸಂವಿಧಾನದ ವಿರುದ್ಧವಾಗಿದೆ.  ಸಂವಿಧಾನ ಉಳಿದ್ರೇ ಎಲ್ಲಾ ಸಮುದಾಯದವರು ಉಳಲು ಸಾಧ್ಯ.   ಅಸಮಾನತೆ ಹೋಗದೇ ನಾಡಿನಲ್ಲಿ ಶಾಂತಿ, ಸುವ್ಯವಸ್ಥೆಯಿಂದ ಇರಲು ಸಾಧ್ಯವಿಲ್ಲ ಎಂದು  ಬಿಜೆಪಿ ಸರ್ಕಾರಕ್ಕೆ  ಸಿದ್ದರಾಮಯ್ಯ  ಟಾಂಗ್‌ ಕೊಟ್ಟಿದ್ದಾರೆ.