Belagavi News In Kannada | News Belgaum

ಪಿಎಸ್​ಐ ಹಗರಣ: ಧಾರವಾಡಕ್ಕೂ ಕಾಲಿಟ್ಟ ಸಿಐಡಿ

ಧಾರವಾಡ: 545 ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣ ದಿನೇ ದಿನೆ ಗಂಭೀರವಾಗುತ್ತಿದ್ದು, ಬಗೆದಷ್ಟೂ ಆಳ ಎಂಬಂತಾಗಿದೆ. ಈ ಮಧ್ಯೆ ಕೆಎಎಸ್​ ಕೋಚಿಂಗ್ ಸೆಂಟರ್​​ನ ವ್ಯಕ್ತಿಯೊಬ್ಬನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆ ಇದ್ದಂತಿದೆ.

ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಸಂಬಂಧ ಧಾರವಾಡ ಜಿಲ್ಲೆಯ ಖಾಸಗಿ ಕೋಚಿಂಗ್ ಸೆಂಟರ್​​ನ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ. ಕೆಎಎಸ್​ ಕೋಚಿಂಗ್ ಸೆಂಟರ್​ನ ಈ ವ್ಯಕ್ತಿ ಇಂಜಿನಿಯರಿಂಗ್ ಹಿನ್ನೆಲೆಯವನಾಗಿರುತ್ತಾನೆ.

ವಿಚಾರಣೆಗೆ ಒಳಗಾಗಿರುವ ಈ ವ್ಯಕ್ತಿ ಕೆಲವು ದಿನಗಳ ಹಿಂದೆ ಕೆಎಎಸ್​ ಕೋಚಿಂಗ್ ಪಡೆಯಲೆಂದು ಧಾರವಾಡಕ್ಕೆ ಆಗಮಿಸಿದ್ದು, ಪ್ರಕರಣಕ್ಕೂ ಈತನಿಗೂ ಸಂಬಂಧ ಇರುವ ಸಂದೇಹದ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಈತನನ್ನು ಧಾರವಾಡದಲ್ಲಿ ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.