ಖಾಕಿ ಡ್ರೀಲ್, ರಹಸ್ಯ ಬಾಯ್ಬಿಟ್ಟ ಆರೋಪಿ, ಮೋಬೈಲ್ ಡ್ಯಾಂಗೆ ಎಸದೇ ಅಂದ..!

ಕಲಬುರಗಿ: ಬಂಧನ ಭೀತಿ ಎದುರಾಗುತ್ತಿದಂತೆ ಆರೋಪಿ ಮಹ್ವತದ ಸಾಕ್ಷಿಯೊಂದು ಕಲಬುರಗಿಯ ಆಳಂದ ಅಮರ್ಜಾ ಡ್ಯಾಂಗೆ ಮೊಬೈಲ್ ಎಸೆಯಲಾಗಿದೆ ಎಂದು ಪೊಲೀಸ್ ರಿಗೆ ಬಾಯ್ಬಿಟ್ಟಿದ್ದಾನೆ.
ಸಿಐಡಿ ಕೈಗೆ ತಗಲ್ಲಾಕ್ಕೊಂಡ್ರೆ ಮುಗೀತು ಕಥೆ ಎಂದು ಭಯಗೊಂಡ ಅಕ್ರಮದ ಪ್ರಮುಖ ಆರೋಪಿ ಮಂಜುನಾಥ ಮೇಲ್ಕುಂದಿ, ತನ್ನ ಮೊಬೈಲ್ ಅನ್ನೇ ಡ್ಯಾಂಗೆ ಎಸೆದಿದ್ದಾನೆ.
ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾಗುವ ಮುನ್ನವೇ ಮೊಬೈಲ್ ಅನ್ನು ಡ್ಯಾಂಗೆ ಎಸೆದು ಬಂದಿದ್ದ. ಹಲವು ಅಭ್ಯರ್ಥಿಗಳ ವ್ಯವಹಾರ ಕುದುರಿಸಿದ್ದ ಮಂಜುನಾಥನ ಜೊತೆ ಪ್ರಮುಖ ಘಟಾನುಘಟಿ ರಾಜಕಾರಣಿಗಳೂ ಲಿಂಕ್ನಲ್ಲಿದ್ದರು. ಬಂಧನ ಆಗೋದು ಕನ್ಫರ್ಮ್ ಆಗ್ತಿದಂತೆ ಭಯಗೊಂಡ ಆತ, ಅರೆಸ್ಟ್ ಆದಾಗ ಪೊಲೀಸರಿಗೆ ಮೊಬೈಲ್ ಸಿಕ್ರೆ ತನ್ನ ಬಂಡವಾಳ ಬಯಲಿಗೆ ಬರುತ್ತೆ ಅಂತ ಡ್ಯಾಂಗೆ ಎಸೆದಿದ್ದಾನೆ.
ವಿಚಾರಣೆ ವೇಳೆ ಮೊಬೈಲ್ ಎಲ್ಲಿದೆ ಅಂತ ಸಿಐಡಿ ಅಧಿಕಾರಿಗಳು ಲೆಫ್ಟ್ ರೈಟ್ ತೆಗೆದುಕೊಳ್ಳುತ್ತಿದ್ದಂತೆ ಆರೋಪಿ ಬಾಯ್ಬಿಟ್ಟಿದ್ದಾನೆ. ಮೊಬೈಲ್ಗಾಗಿ ಸಿಐಡಿ ಅಧಿಕಾರಿಗಳು ಸೋಮವಾರ ನುರಿತ ಈಜುಗಾರರನ್ನು ಕರೆದೊಯ್ದು ದಿನವಿಡೀ ಹುಡುಕಾಡಿದ್ರೂ ಸಿಕ್ಕಿಲ್ಲ.