Belagavi News In Kannada | News Belgaum

ಸರ್ಕಾರ ಕಣ್ಣು ತೆರೆಸಲು ಹೋರಾಟ ಅನಿರ್ವಾಯ: ಅಲ್ಲಮಪ್ರಭು ಶ್ರೀ

ಚಿಕ್ಕೋಡಿ: ಈ  ಆಧುನಿಕ ಯುಗದಲ್ಲಿ  ಸಂಘಟಿತ ಹೋರಾಟಕ್ಕೆ ನಿಜವಾದ ಶಕ್ತಿಯಿದೆ. ಮತ್ತೊಮ್ಮೆ ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯವನ್ನು ಮತ್ತೋಮ್ಮೆ ಸಂಗ್ರಹಿಸಿ, ಸಂವಿಧಾನಾತ್ಮಕ ಹೋರಾಟಕ್ಕೆ  ಮಾಡಿದಾಗ ಮಾತ್ರ ಸರ್ಕಾರ  ಕಣ್ಣು ತೆರೆಸಲು ಸಾಧ್ಯ ಎಂದು ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.

ಇಲ್ಲಿನ ಐಎಂಎ ಸಭಾಭವನದಲ್ಲಿ ಬುಧುವಾರ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಆಯೋಜಿಸಿಲಾಗಿದ್ದ, ಚಿಕ್ಕೋಡಿ ಜಿಲ್ಲೆಗಾಗಿ ಹಕ್ಕೋತ್ತಾಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮೂರು ದಶಕದಿಂದ ಚಿಕ್ಕೋಡಿ ಜಿಲ್ಲೆಗೆ ಹೋರಾಟ ನಡೆದು ಬಂದಿದೆ. ಆದರೆ ಇಂದಿಗೂ ಜನಪ್ರತಿನಿಧಿಗಳು ಕಾಳಜಿ ತೋರದಿರುವದು ದುರ್ದೈವ ಎಂದು ವಿಷಾದ ವ್ಯಕ್ತಪಡಿದರು.

ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮಿಗಳು ಮಾತನಾಡಿ, ಚಿಕ್ಕೋಡಿ ಜಿಲ್ಲೆಗಾಗಿ ಪತ್ರ ಚಳುವಳಿ ಆಂದೋಲನ ಆರಂಭಿಸುವ ಮುಖಾಂತರ ನೇರವಾಗಿ ಮುಖ್ಯಮಂತ್ರಿಗಳಿಗೆ ನಮ್ಮ ಹೋರಾದ ಬಿಸಿ ಮುಟ್ಟಿಸಲು ಮುಂದಾಗಬೇಕಾಗಿದೆ ಎಂದರು.

ಅಂಕಲಿಯ ಗೋಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಎನ್.ಎ. ಮಗದುಮ್ ಮಾತನಾಡಿ, ಈ ಬಾಗದ ಬಡ ಜನರ ಬಗ್ಗೆ ಕಾಳಜಿ ಇಲ್ಲದಿದ್ದಲ್ಲಿ, ಈ ಭಾಗದ ಮುಖಂಡರು ಯಾವ ಪುರುಷಾರ್ಥಕ್ಕೆ ರಾಜಕಾರಣ ಮಾಡುತ್ತಿದ್ದೀರಿ.  ಜನರ ಸಮಸ್ಯೆಯ ಅರಿವು ನಿಮಗೆ ಇದ್ದಲ್ಲಿ ಕೂಡಲೇ ಎಲ್ಲರೂ ಒಂದಾಗಿ ಪಕ್ಷಾತೀತ ಹೋರಾಟ ಮಾಡಿ ಚಿಕ್ಕೋಡಿ ಜಿಲ್ಲೆ ಮಾಡಿಸಿ ಇಲ್ಲವಾದಲ್ಲಿ ಎಲ್ಲ ಜನಪ್ರತಿನಿಧಿಗಳು ರಾಜಕೀಯಕ್ಕೆ ರಾಜೀನಾಮೆ ನೀಡಿ ಮನೆಗೆ ತೆರಳಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ರಾಯಭಾಗ ವಕೀಲ ಸಂಘದ ಅಧ್ಯಕ್ಷ ಆರ್.ಎಚ್.ಗೊಂಡೆ ಮಾತನಾಡಿ,  ಚಿಕ್ಕೋಡಿ ಜಿಲ್ಲೆ ಮಾಡುವ ಬಗ್ಗೆ ಸರಕಾರಕ್ಕೆ  ಇಚ್ಛಾಶಕ್ತಿ ಇದೆ. ಆದರೆ ಈ ಬಾಗದ ಜನಪ್ರತಿನಿಧಿಗಳು ಅದಕ್ಕೆ,  ಸ್ಥಳಿಯ ಜಿಲ್ಲಾ ಮುಖಂಡರು ಅಡ್ಡಗಾಲು ಹಾಕುತ್ತಿರುವುದು ವಿಷಾದನೀಯ ಸಂಗತಿ ಎಂದರು.  ನ್ಯಾಯವಾದಿ ಎಂ.ಬಿ ಪಾಟೀಲ ಮಾತನಾಡಿ, ಇಂದಿನ ನಿಂದ ಹೋರಾಟ ಸಂವಿಧಾನಾತ್ಮಕ ಸರ್ಕಾರದ ವಿರುದ್ದ ನಡೆಸುತ್ತೇವೆ. ನ್ಯಾಯಾಲಯದ ಮೂಲಕವೇ ಹೋರಾಟಕ್ಕೆ ಇಳಿಯುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕಡು ಬಡ ಕುಟುಂಬದಿಂದ ಶಿಕ್ಷಣ ಪಡೆದು   ಎರ್  ಪೆಪರ್ಸ್‌  ಪೈಲೇಟ್ ಆಗಿ ಆಯ್ಕೆಯಾಗಿರುವ ಬೆಳಗಾವಿಯ ತನುಶ್ರೀ ಸುತಾರ ಅವರನ್ನು ಸನ್ಮಾನಿಸಿ,  ಗೌರವಿಸಲಾಯಿತು.

ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಕಾಶಿನಾಥ ಕುರಣೆ ,   ಚಿಕ್ಕೋಡಿ ಪತ್ರಕರ್ತ ಸಂಘದ ಅಧ್ಯಕ್ಷ ರಾಜೇಂದ್ರ ಕೋಳಿ, ಹಿರಿಯ ಪತ್ರಕರ್ತ ವಿರುಪಾಕ್ಷ ಕವಟಗಿ, ರವಿ ಹಂಪನ್ನವರ, ಚಂದ್ರಕಾಂತ ಹುಕ್ಕೇರಿ, ಮುಂತಾದವರು ಉಪಸ್ಥಿತರಿದ್ದರು.  ಕರವೆ ಮುಖಂಡ ಸಂಜು ಬಡಿಗೇರ ಸ್ವಾಗತಿಸಿದರು. ಶಿಕ್ಷಕ ಗಿರೀಶ ಬಿಸಲನಾಯಕ ನಿರೂಪಿಸಿದರು. ಶೋಭಾ ತಳವಾರ ವಂದಿಸಿದರು.