Belagavi News In Kannada | News Belgaum

ಘಟಪ್ರಭಾದಲ್ಲಿ ಅದ್ಧೂರಿಯಾಗಿ ಕಾಳಿಕಾದೇವಿ ಜಾತ್ರೆ ಆಚರಣೆ

ಘಟಪ್ರಭಾದಲ್ಲಿ ಅದ್ಧೂರಿಯಾಗಿ ಕಾಳಿಕಾದೇವಿ ಜಾತ್ರೆ ಆಚರಣೆ
ಘಟಪ್ರಭಾ- ಪಟ್ಟಣದ ಆರಾಧ್ಯ ದೇವತೆಯಾಗಿರುವ ಶ್ರೀ ಕಾಳಿಕಾ ದೇವಿಯ ಜಾತ್ರೆ ಶುಕ್ರವಾರ ದಿನಾಂಕ 13-05-2022 ರಂದು ಅದ್ದೂರಿಯಾಗಿ ಆಚರಿಸಲಾಯಿತು.

ಘಟಪ್ರಭಾದ ಮೃತ್ಯುಂಜಯ ವೃತ್ತದಿಂದ ನಗರದ ಕಾಳಿಕಾ ದೇವಸ್ಥಾನದವರೆಗೆ ಸಕಲ ವಾದ್ಯ ವೈಭವದೊಂದಿಗೆ ಮುತ್ತೈದೆಯರ ಮಂಗಳಾರತಿ ಕುಂಭದೊಂದಿಗೆ ಬಂದರು.

ಧ್ವಜಾರೋಹಣ ಹಾಗೂ ಮಹಾರುದ್ರಾಭಿಷೇಕ ನೇರವೆರಿಸಿ ನಂತರ ವಿಶ್ವಕರ್ಮ ಸಮಾಜದ ಮಕ್ಕಳಿಗೆ ಮುಂಜವಿ ಮಾಡಿದರು, ಊರಿನ ಪ್ರಮುಖರಾದ ಡಾ.ವಿ ಐ ಪತ್ತಾರ ಅವರು ಜಾತ್ರೆಯ ಉಸ್ತುವಾರಿ ವಹಿಸಿಕೊಂಡು ಚಿಕ್ಕ ಹುಡುಗನ ಥರಹ ಕೆಲಸ ಮಾಡುತ್ತಿರುವುದು ಎಲ್ಲರ ಗಮನ ಸೆಳೆಯಿತು.

ಜಾತ್ರೆಗೆ ಶ್ರೀ ಮಳೆರಾಯಪ್ಪಯ್ಯಾ ಸ್ವಾಮಿಗಳ ಸಾನಿಧ್ಯವಿತ್ತು, ಮುಖ್ಯ ಅತಿಥಿಯಾಗಿ ಬಿಜೆಪಿಯ ಭೀಷ್ಮ ಶಂಕರಗೌಡ ಪಾಟೀಲ,ಬಿಜೆಪಿಯ ರಾಜ್ಯ ದೆಹಲಿಯ ಪ್ರತಿನಿಧಿ, ಬಾಬು ಪತ್ತಾರ, ವಿಶ್ವಕರ್ಮ ನಿಗಮ ಮಂಡಳಿಯ ಅಧ್ಯಕ್ಷರು, ಸಂತೋಷ‌ ಪಿಕೆ, ನವೀನ ಕಡೇಲಿ ಉಪಸ್ಥಿತರಿದ್ದರು.

ಡಾ.ಮೃತ್ಯುಂಜಯ ಹೂಗಾರ,ಡಾ.ರಾಘವೇಂದ್ರ ಪತ್ತಾರ,ಶ್ರೀಶೈಲ ವರ್ಜಿ, ಡಾ.ಶಿವಯೋಗಿ ಕೋನಿನ,ಡಾ.ಮೋಹಮ ಬಡಿಗೇರ, ಗಣಪತಿ ತುಕ್ಕಾನಟ್ಟಿ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.