Belagavi News In Kannada | News Belgaum

ಹಳೆಯ ವೈಷಮ್ಯ; ವ್ಯಕ್ತಿ ಬರ್ಬರ ಹತ್ಯೆ

ಬೀದರ್: ಹಳೆಯ ವೈಷಮ್ಯದ ಹಿನ್ನೆಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಗ್ರಾಮದ ಬಳಿ ನಡೆದಿದೆ.

ಹೈದ್ರಾಬಾದ್‍ನಲ್ಲಿ ವಾಸವಾಗಿದ್ದ ಚಂಡಕಾಪುರ ಗ್ರಾಮದ ನಿವಾಸಿ ಆಲೋಕ್ ಜಾಧವ್‌(35)  ಊರಿಗೆ ಬಂದಿದ್ದರು. ವಿಷಯ ತಿಳಿದ ದುಷ್ಕರ್ಮಿಗಳು ಹಳೆಯ ಹಗೆತನದಿಂದ ಮಾರಕಾಸ್ತ್ರಗಳನ್ನು ಬಳಸಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಅದೇ ಗ್ರಾಮದ ಆರೋಪಿ ಅಂಬಾದಾಸ್ ಮತ್ತು ಅವರ ಗುಂಪಿನ ಜನರು ಆಲೋಕ್‍ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.//////