Belagavi News In Kannada | News Belgaum

ಅಥಣಿ ಗಚ್ಚಿನಮಠದ ಶ್ರೀ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಹಾಗೂ ಶ್ರೀ ಶಿವಬಸವ ಸ್ವಾಮಿಗಳ ನಿರಂಜನ ಚರಪಟ್ಟಾಧಿಕಾರ ಷಟ್ಫಲದೀಕ್ಷೆ ಸಮಾಜಸೇವಾ ದಿಕ್ಷೆಯ ಪತ್ರಿಕಾ ಗೋಷ್ಠಿ

ಅಥಣಿ : ಪಟ್ಟಣದ ಗಚ್ಚಿನಮಠದಲ್ಲಿ ಅಥಣಿ ಗಚ್ಚಿನಮಠದ ಶ್ರೀ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಹಾಗೂ ಶ್ರೀ ಶಿವಬಸವ ಸ್ವಾಮಿಗಳ ನಿರಂಜನ ಚರಪಟ್ಟಾಧಿಕಾರ ಷಟ್ಫಲದೀಕ್ಷೆ ಸಮಾಜಸೇವಾ ದಿಕ್ಷೆಯ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಹಳ ಅರ್ಥಪೂರ್ಣವಾಗಿ ಶತಮಾನೋತ್ಸವ ಮಾಡಬೇಕೆಂಬ ಸಂಕಲ್ಪ ಇದ್ದು ಚಿತ್ರದುರ್ಗದ ಮುರುಘಾ ಶರಣರು ಮತ್ತು ಕರ್ನಾಟಕ ಹಾಗೂ ಪರರಾಜ್ಯಗಳ ನೂರಾರು ಸ್ವಾಮಿಜಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತ ಇರುತ್ತಾರೆ.ಒಂದೇ ವೆದಿಕೆಯಲ್ಲಿ ಎಲ್ಲ ಮಹಾತ್ಮರ ದರ್ಶನದ ಸೌಭಾಗ್ಯ ಸಿಗಲಿದೆ ಎಂದರು.ಒಂದು ತಿಂಗಳ ಕಾಲ ಹಳ್ಳಿಗಳಲ್ಲಿ ಪಟ್ಟಣದಲ್ಲಿ ಬಸವಣ್ಣನವರ ವಿಚಾರ ಮತ್ತು ಆದರ್ಶಗಳ ವಿನಮಯ ಮತ್ತು 20 ರಿಂದ ನಾಲ್ಕು ದಿನ ವಿಶೇಷ ಕಾರ್ಯಕ್ರಮ ಇರಲಿದೆ.ಮಹಾತಪಶ್ವಿ ಶಿವಯೋಗಿಗಳ ಮಠದಲ್ಲಿ ಯಾವುದೇ ಕೊರತೆಯಿಲ್ಲ ಎಲ್ಲ ಕೊರತೆಗಳನ್ನು ಚಿತ್ರದುರ್ಗ ಮುರುಘಾ ಶರಣರು ಶಿವಬಸವ ಸ್ವಾಮೀಜಿ ಅವರನ್ನು ಮಠಕ್ಕೆ ದಯಪಾಲಿಸಿದ್ದು ಶಿವಬಸವ ಸ್ವಾಮೀಜಿ ಪಟ್ಟಾಭಿಷೇಕ ನಡೆಯಲಿದೆ.ಮೈಸೂರಿನ ಪರಮಪುಜ್ಯರು,ತುಮಕೂರಿನ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿ,ಆದಿಚುಂಚನಗಿರಿ ಪರಮಪೂಜ್ಯರು ಸೇರಿದಂತೆ ಹಲವರು ಆಗಮಿಸಿ ಪಟ್ಟಾಧಿಕಾರ ನೆರವೇರಿಸಲಿದ್ದು ಜಾತಿ ಮತ ಪಂಥಗಳನ್ನು ಪಕ್ಕಕ್ಕೆ ಇಟ್ಟು ಕಾರ್ಯಕ್ರಮ ಜರುಗಲಿದೆ.ಮುರುಘೇಂದ್ರ ಶಿವಯೋಗಿಗಳ ಮಠ ಜಾತ್ಯಾತೀತ ಮಠವಾಗಿದೆ ಅನೇಕ ಭಕ್ತರು ತನುಮನಧನದ ಸಹಾಯ ಸಹಕಾರ ಮತ್ತು ಚಿಕ್ಕವರಿಂದ ದೊಡ್ಡವರವರೆಗೆ ಶ್ರಮದಾನ ಮಾಡುತ್ತಿದ್ದು ಅನೇಕ ಕಡೆ ದಾಸೋಹ ಮತ್ತು ಧನಸಹಾಯ ಹರಿದು ಬರುತ್ತಿದ್ದು ಹಿಂದೆಂದೂ ಆಗಿರದ ಕಾರ್ಯಕ್ರಮ ಅಥಣಿಯಲ್ಲಿ ಜರುಗಲಿದೆ.ಎಲ್ಲ ವರ್ಗದ ಜನರು ಭಾಗಿಯಾಗಿದ್ದು ಎಲ್ಲ ಪಕ್ಷದ ಮುಖಂಡರು ಭಾಗವಜಿಸುತ್ತಿದ್ದಾರೆ.ಮಹಿಳಾ ಗೋಷ್ಠಿ, ಕೃಷಿ ಕಾರ್ಯಕ್ರಮ, ಕಲೆ ಮತ್ತು ಸಂಸ್ಕೃತಿ ಹಾಗೂ ರಂಗಭೂಮಿ ಮತ್ತು ಹಾಸ್ಯ ಕಲಾವಿದರು ಹಾಗೂ ಖ್ಯಾತ ಗಾಯಕರಾದ ವಿಜಯ ಪ್ರಕಾಶ ಮತ್ತು ಝೀ ಕನ್ನಡ ಕಲಾವಿದರು ಕೂಡ ಕಾರ್ಯಕ್ರಮ ನಡೆಸಿಕೊಡಲಿದ್ದು ಎಲ್ಲ ರಾಜಕೀಯ ಪಕ್ಷಗಳ ಮಾಜಿ ಮತ್ತು ಹಾಲಿ ಶಾಸಕ ಸಚೀವರು ಕೇಂದ್ರ ಸಚೀವರು ಸೇರಿದಂತೆ ಹಲವರು ಭಾಗವಹಿಸಿ ನಾಡಿನ ಜನರಿಗೆ ಉತ್ತಮ ಸಂದೇಶ ಕೊಡಲಿದ್ದಾರೆ.ತಾಲ್ಲೂಕಿನ ಜನರಿಗೆ ಮನವಿ ಮಾಡುತ್ತೇನೆ.ಈ ಸತ್ಕಾರ್ಯಕ್ಕೆ ತನುಮನಧನ ಸಹಾಯ ಸಹಕಾರ ನೀಡುವದರ ಜೊತೆಗೆ ಮಹಾತ್ಮರ ದರ್ಶನ ಪಡೆದು ಪುನೀತರಾಗುವಂತೆ ತಿಳಿಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಕಾರ್ಯಕ್ರಮ ಅಂಗವಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕಾರ್ಯಾಧ್ಯಕ್ಷತೆಯಲ್ಲಿ ನ ಭೂತೋ ನ ಭವಿಷ್ಯತಿ ಎಂಬಂತೆ ಕಾರ್ಯಕ್ರಮ ಯಶಸ್ವಿಗೊಳಿಸಲು ಪಕ್ಷಾತೀತವಾಗಿ ಶ್ರಮಿಸೋಣ ಎಂದರು.
ಈ ವೇಳೆ ಮಾತನಾಡಿದ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಐತಿಹಾಸಿಕವಾದ ಕಾರ್ಯಕ್ರಮ ಇದಾಗಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಭವ್ಯ ಪರಂಪರೆಯ ಮಠದಲ್ಲಿ ಈ ಕಾರ್ಯಕ್ರಮ ನೂರು ವರ್ಷಗಳಲ್ಲಿ ಈ ನಾಡಿನಲ್ಲಿ ವಿಶಿಷ್ಟ ,ವಿಧಾಯಕ ಮತ್ತು ಅರ್ಥಪೂರ್ಣ ಆಚರಣೆಗೆ ನಾಲಕೈದು ತಿಂಗಳ ತಯಾರಿ ಮಾಡಿದ್ದು ಇನ್ನೂ ಎಂಟು ದಿನಗಳ ಅಂತರದಲ್ಲಿ ಸುತ್ತೂರು,ಸಿದ್ದಗಂಗಾ,ಆದಿಚುಂಚನಗಿರಿ ಜಗದ್ಗುರುಗಳು ಮತ್ತು ನೂರಾರು ಮಠಾಧೀಶರ  ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದ್ದು ಸಾಹಿತಿಗಳು,ಸಂಗೀತ ಕಲಾವಿದರು ಮತ್ತು ರಾಜಕೀಯ ಮುತ್ಸದ್ದಿಗಳು ಸೇರಿದಂತೆ ಹಲವರು ಭಾಗವಹಿಸಲಿದ್ದು ಇಂದು ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ್ದು ಎಲ್ಲರ ಸಹಾಯ ಸಹಕಾರ ಅಗತ್ಯವಿದೆ ಎಂದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಕಾರ್ಯಕ್ರಮ ಅಂಗವಾಗಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಕಾರ್ಯಾಧ್ಯಕ್ಷತೆಯಲ್ಲಿ ನ ಭೂತೋ ನ ಭವಿಷ್ಯತಿ ಎಂಬಂತೆ ಕಾರ್ಯಕ್ರಮ ಯಶಸ್ವಿಗೊಳಿಸಲು ಪಕ್ಷಾತೀತವಾಗಿ ಶ್ರಮಿಸೋಣ ಎಂದರು.
ಈ ವೇಳೆ ಕೊಪ್ಪಳದ ಸಿದ್ದಲಿಂಗದೇವರು ಸ್ವಾಮೀಜಿ ಚಳ್ಳಕೆರಿಯ ಬಸವ ಕಿರಣ ಸ್ವಾಮೀಜಿ ಚೆಳ್ಳಕೆರಿ, ಮತ್ತು ಬ್ಯಾಡಗಿಯ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ
ಗಜಾನನ ಮಂಗಸೂಳಿ, ಶಿವು ದಿವಾನಮಳ,ರಾಮನಗೌಡ ಪಾಟೀಲ, ಅಮೋಘ ಕೊಬ್ರಿ,ಸಂತೋಷ ಸಾವಡಕರ,ರಾಮಣ್ಣ ಧರಿಗೌಡರ,ಬಸವರಾಜ ಕೋಟಿ,ಅಣ್ಣಪ್ಪ ಸವದಿ,ರಾಜಣ್ಣ ಬಿಳ್ಳೂರ,ಹನಮಂತ ಕಾಲ್ವೆ,ಶಂಕರ ಹಳ್ಳದಮಳ,ಸೋಮು ವಾಂಗಿ,ಸತೀಶ ಕಾವೆರಿ,ಸತೀಶ ಪಾಟೀಲ,ಪ್ರಮೋದ ಬಿಳ್ಳೂರ, ಸೇರಿದಂತೆ ಇನ್ನೂ
ಹಲವರು ಉಪಸ್ಥಿತರಿದ್ದರು.