ಶರದ್ ಪವಾರ್ ಕುರಿತು ಅವಹೇಳನಕಾರಿ ಪೋಸ್ಟ್ : ಮರಾಠಿ ನಟಿ ಅರೆಸ್ಟ್

ಮುಂಬೈ : ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಕುರಿತು ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಮರಾಠಿ ನಟಿ ಕೇತಕಿ ಚಿತಳೆರನ್ನು ಠಾಣೆ ಪೊಲೀಸರು ಅರೆಸ್ಟ್ ಮಾಡಲಾಗಿದೆ.
ಮರಾಠಿ ಭಾಷೆಯಲ್ಲಿರುವ ನಟಿ ಚಿತಳೆ ಪವಾರ್ ಹೆಸರನ್ನು ನಮೂದಿಸಿ ನಿಮಗೆ ನರಕ ಕಾಯುತ್ತಿದೆ’ ಎಂದು ಬರೆಯಲಾಗಿದೆ. ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ’ ಎಂದೂ ಆರೋಪಿಸಲಾಗಿದೆ.
ಸ್ವಪ್ನಿಲ್ ನೆಟ್ಕೆ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಕಲ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಚಿತಳೆ ಅವರನ್ನು ಶನಿವಾರ ಬಂಧಿಸಲಾಗಿದೆ.