Belagavi News In Kannada | News Belgaum

ಪ್ರಮಾಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ

ಚಿಕ್ಕೋಡಿ: ಪಾನ್ ಮಸಾಲಾ ಕಾರ್ಖಾನೆಗೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳಿಗೆ  ಎಸಿಬಿ ಶಾಕ್‌ ನೀಡಿದೆ.  ಲಂಚ ಪಡೆಯುವಾಗ  ಅಧಿಕಾರಿಗಳು ರೆಡ್ ಹ್ಯಾಂಡ್   ಸಿಕ್ಕಿಬಿದಿದ್ದಾರೆ.

ಮಾಲಿನ್ಯ ನಿಯಂತ್ರಣಾಧಿಕಾರಿ( ಪ್ರಭಾರಿ) ಪ್ರದೀಪ ಮಮದಾಪುರೆ, ವಿಜಯ್ ಶೆಂಡುರೆ ಅಧಿಕಾರಿಗಳ ಮೇಲೆ ದಾಳಿ  ಮಾಡಲಾಗಿದೆ.


ಪಾನ್ ಮಸಾಲಾ ಕಾರ್ಖಾನೆಗೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ನೀಡಲು ಲಂಚಕ್ಕೆ ಬೇಡಿಕೆ  ಇಟ್ಟು, ರಾಜು ಪಾಶ್ಚಾಪುರೆ ಎಂಬುವವರಿಂದ ೭೫ ಸಾವಿರ ರೂ. ಸ್ವೀಕರಿಸುತ್ತಿರುವ ವೇಳೆ  ದಾಳಿ ನಡೆಸಿದ್ದಾರೆ. ಈ ಕುರಿತು  ರಾಜು ಪಾಶ್ಚಾಪುರೆ ಎಸಿಬಿಗೆ ದೂರು ನೀಡಿದ್ದರು ಎನ್ನಲಾಗಿದೆ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ./////