Belagavi News In Kannada | News Belgaum

11ನೇ ದಿನದ ಲಿಂಗಾಯತ ಧರ್ಮ ಜಾಗೃತಿ ಪಾದಯಾತ್ರೆ

 

ಬೆಳಗಾವಿ 16: ಮಹಾಂತೇಶ ನಗರದಲ್ಲಿ 11ನೇ ದಿನದ ಲಿಂಗಾಯತ ಧರ್ಮ ಜಾಗೃತಿ ಪಾದಯಾತ್ರೆ

889 ನೇ ಬಸವ ಜಯಂತಿಯ ನಿಮಿತ್ಯ ಮಹಾಂತೇಶ ನಗರದಲ್ಲಿ 11 ನೇ ದಿನದ ಧರ್ಮ ಜಾಗೃತಿ ಸದ್ಭಾವಣೆ ಪಾದಯಾತ್ರೆಯು ನಾಗನೂರು ರುದ್ರಾಕ್ಷಿ ಮಠದ ಪರಮ ಪೂಜ್ಯ ಅಲ್ಲಮ ಪ್ರಭು ಸ್ವಾಮಿಜಿಗಳ ನೇತೃತ್ವದಲ್ಲಿ ಮಹಾಂತೇಶ ನಗರದ ಎಲ್ಲ ಬಡಾವಣೆಗಳಲ್ಲಿ ಜರುಗಿತು.

ಧರ್ಮ ಜಾಗೃತಿ ಪಾದಯಾತ್ರೆಯು ಶಿವಾನಂದ ಮಹಾಸ್ವಾಮೀಜಿ ಹಂದಿಗುಂದ ಹಾಗೂ ಡಾ. ಬಸವಾನಂದ ಸ್ವಾಮಿಜಿ, ಪೂಜ್ಯ ಓಂ ಗುರುಜಿ, ಕಾರಂಜಿಮಠದ ಪೂಜ್ಯ ಶಿವಯೋಗಿ ದೇವರು ಮತ್ತು ಇತರ ಸ್ವಾಮಿಜೀಗಳ ನೇತೃತ್ವದಲ್ಲಿ ಪ್ರಾರಂಭವಾಗಿದ್ದು. ನಂತರದಲ್ಲಿ ಪರಮ ಪೂಜ್ಯ ಅಲ್ಲಮ ಪ್ರಭು ಸ್ವಾಮಿಜಿಗಳು ಎಲ್ಲರಿಗೂ ರುದ್ರಾಕ್ಷಿ ಧಾರಣೆ ಮಾಡುವುದರೊಂದಿಗೆ ಮಹಾಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

11 ನೇ ದಿನದ ಪಾದಯಾತ್ರೆಯಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ನಗರ ಸೇವಕರು, ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ಬಸವರಾಜ ರೊಟ್ಟಿ, ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಮಹಾಂತೇಶ ಗುಡಸ, ರಾಜು ಪದ್ಮನ್ನವರ, ಶಿವಾನಂದ ವಾಗರವಾಡಿ, ಸಂಜು ಮರಡಿ, ಮಹಾಲಿಂಗ ತಂಗಡಗಿ, ನಗರ ಸೆವಕ ರಾಜಶೇಖರ ಡೋಣಿ ಮತ್ತು ಬಸವಾದಿ ಭಕ್ತರುಗಳು ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಜರುಗಿತು.