Belagavi News In Kannada | News Belgaum

ಹುಣಸಗಿಯಲ್ಲಿ ಯಾದಗಿರಿ ಜಿಲ್ಲಾ ಮಟ್ಟದ ಗಾಣಿಗ ಸಮಾಜದ ಸಮಾವೇಶ ಯಶಸ್ವಿ

ಹುಣಸಗಿ: ಜಿಲ್ಲೆಯಲ್ಲಿ ಗಾಣಿಗ ಸಮಾಜದ ಜನಸಂಖ್ಯೆಯು ಕಡಿಮೆ ಇದ್ದರೂ ಸಹ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಇಷ್ಟೋಂದು ಜನಸಂಖ್ಯೆ ಸೇರಿರುವದು ಅತ್ಯಂಥ ಸಂತೋಷದಾಯಕ ಇದರ ಜೊತೆಗೆ ಗಾಣಿಗ ಸಮಾಜ ಜಮಖಂಡಿ ತಾಲೂಕಿನಲ್ಲಿನ ಅಭಿವೃದ್ಧಿಗೆ ಸಿದ್ದು ನ್ಯಾಮಗೌಡ ಅವರು ಸಾಕಷ್ಟು ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದಾರೆ ಎಂದು ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆ ಮುಂಬಾಗದಲ್ಲಿರುವÀ ಕೆ.ಬಿ.ಜೆ.ಎನ್.ಎಲ್ ಆವರಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಗಾಣಿಗ ಸಂಘದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸಮಾವೇಶದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಗಾಣಿಗ ಸಮಾಜದ ಅಭಿವೃದ್ಧಿಗಾಗಿ ಸಮಾಜದ ಹಲವಾರು ಮುಖಂಡರು ಶ್ರಮಪಡುತ್ತಿದ್ದಾರೆ. ಅವರ ಜೊತೆಗೆ ಇಲ್ಲಿ ನೆರೆದಿರುವಂತಹ ಸಮಾಜದ ಪ್ರತಿಯೊಬ್ಬ ಮುಖಂಡರು ಸಾಥ್ ನೀಡಿದಾಗ ಸಮಾಜವು ಏಳಿಗೆಯನ್ನು ಹೊಂದಲು ಸಹಕಾರಿಯಾಗುತ್ತದೆ ಈ ನಿಟ್ಟಿನಲ್ಲಿ ಸುರಪುರ ಶಾಸಕರು ಕೂಡಾ ನಮ್ಮ ಗಾಣಿಗ ಸಮಾಜದ ಏಳಿಗೆಗೆ ಸಹಾಯ ಸಹಕಾರ ನೀಡಲು ಮುಂದಾಗಿದ್ದು ಸಮಾಜಕ್ಕೆ ಮತ್ತಷ್ಟು ಬಲ ತಂದುಕೊಟ್ಟಂತಾಗಿದೆ ಎಂದು ಹೇಳಿದರು.
ನಂತರ ಸಿಂದಗಿ ಶಾಸಕ ರಮೇಶ ಭೂಸನೂರ ಮಾತನಾಡಿ, ಇಂದಿನ ಪ್ರಸ್ತುತ ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಜಾತಿಯ ಪ್ರಾಬಲ್ಯವನ್ನು ಬೆಳೆಸಿಕೊಳ್ಳಲು ಹಗಲು ರಾತ್ರಿಯನ್ನದೇ ಹೋರಾಟವನ್ನು ಮಾಡುತ್ತಿದ್ದಾರೆ ಈ ಹಿನ್ನೇಲೆಯಲ್ಲಿ ನಮ್ಮ ಗಾಣಿಗ ಸಮಾಜವು ಆರ್ಥಿಕ, ರಾಜಕೀಯ, ಶೈಕ್ಷಣಿವಾಗಿ ಬಹಳಷ್ಟು ಹಿಂದುಳಿದಿದ್ದು ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಲಹೆ, ಸಹಾಯ, ಸಹಕಾರವನ್ನು ಪಡೆದುಕೊಂಡು ಮುಂದೆ ಹೋಗಬೇಕೆಂದು ಹೇಳಿದರು.
ತದನಂತರ ಶಾಶಕ ರಾಜುಗೌಡ ಮಾತನಾಡಿ ಗಾಣಿಗ ಸಮಾಜವು ಯಾವುದೇ ರೀತಿಯಿಂದಲೂ ಹಿಂದೆ ಇಲ್ಲ ಅವರ ಕೊಡುಗೆ ಇತರೆ ಸಮಾಜಕ್ಕೆ ಮಾದರಿಯಾಗಿದೆ ಯಾಕೆಂದರೆ ಗಾಣಿಗ ಮಾಡಿದ ಎಣ್ಣೆಯಿಂದ ದೀಪ ಬೇಳಗುವ ಜಗತ್ತು, ಸಮಾಜದ ಆರೋಗ್ಯವನ್ನು ಕಾಪಾಡುವ ಗಾಣಿಗ ಸಮಾಜದ ಅಭಿವೃದ್ಧಿಗೆ ಯಾವಗಲು ನಾನು ಸದಾ ಸಿದ್ಧನಿರುತ್ತೇನೆ. ಮತ್ತು ಸಮಾಜವು ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಜಾಗದ ಸಮಸ್ಯೆ ಇರುವ ಕಾರಣ ನಮ್ಮ ತಾಲೂಕಿನಲ್ಲಿ ಇರುವ ಸರಕಾರಿ ಜಾಗೆಯಲ್ಲಿ 2 ಎಕರೆ ಜಾಗವನ್ನು ಮಂಜೂರಿ ಮಾಡಿಸಿಕೊಡುತ್ತೇನೆಂದು ಹೇಳಿದರು.
* ಪ್ರತ್ಯೇಕ ಗಾಣಿಗ ಸಮಾಜ ನಿಗಮ ಸ್ಥಾಪನೆಗೆ ಬೇಡಿಕೆ: ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಾತನಾಡಿದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಸಂಘದ ಉಪಾಧ್ಯಕ್ಷ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ ಸಜ್ಜನ ಮಾತನಾಡಿ ಗಾಣಿಗ ಸಮಾಜವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸಮಾಜದ ಏಳಿಗೆಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿಯನ್ನು ಸ್ಥಾಪಿಸಲು ಸರಕಾರಕ್ಕೆ ಒತ್ತಾಯ ಮಾಡಬೇಕೆಂದು ರಾಜಕೀಯ ಗಣ್ಯವ್ಯಕ್ತಿಗಳ ಗಮನಕ್ಕೆ ತಂದರು. ಜೊತೆಗೆ ಗಾಣಿಗ ಸಮಾಜದ ಸಾಂಸಕೃತಿಕ ಚಟುವಟಿಕೆಗಳನ್ನು ನಡೆಸಲು ಸ್ಥಳಾವಕಾಶವಿಲ್ಲದ್ದರಿಂದ ತೊಂದರೆಯಾಗಿದ್ದು ತಾಲೂಕಿನಲ್ಲಿ ಇರುವ ಸರಕಾರಿ ಜಾಗೆಯಲ್ಲಿ 2 ಎಕರೆ ಜಾಗವನ್ನು ಸಮಾಜದ ಅಭಿವೃದ್ಧಿಗೆ ಮಂಜೂರಿ ಮಾಡಿಸಿಕೊಡಬೇಕೆಂದು ಶಾಸಕ ರಾಜುಗೌಡ ಅವರಿಗೆ ಹೇಳಿದರು.
ದಿವ್ಯ ಸಾನಿಧ್ಯವನ್ನು ವಹಿಸಿದ ಪ.ಪೂ.ಡಾ|| ಜಯಬಸವ ಕುಮಾರ ಮಹಾಸ್ವಾಮಿಗಳು ಗಾಣಿಗ ಗುರುಪೀಠ ವಿಜಯಪುರ, ಹಾಗೂ ಜೆ.ಎಸ್.ನ್ಯಾಮಗೌಡ್ರು, ಮತ್ತು ಡಿ.ಎಸ್.ಮ್ಯಾಕ್ಸ್ ವ್ಯವಸ್ಥಾಪಕ ಡಾ|| ಎಸ್.ಪಿ. ದಯಾನಂದ ಅವರುಗಳು ಗಾಣಿಗ ಸಮಾಜದ ಅಭಿವೃದ್ಧಿ ಹೊಂದಬೇಕಾದರೆ ಪ್ರತಿಯೊಬ್ಬರೂ ಜಾತಿ ಬೇಧವೆನ್ನದೇ ಎಲ್ಲ ಸಮಾಜ ಬಾಂಧವರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಸಮಾಜದ ಅಭಿವೃದ್ಧಿಗೆ ಸಹಕರಿಬೇಕೆಂದು ಹೇಳಿದರು.
ಇದೇ ವೇಳೆ ವಿವಿಧ ಸಮಾಜ ಸೇವೆಯಲ್ಲಿ ತೊಡಗಿದ ಸಾಧಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ, ಸೈನಿಕರಿಗೆ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಸಂಘಧ ತಾಲೂಕು ಅಧ್ಯಕ್ಷ ಚಂದ್ರಶೇಖರ ಬೊರಮಗುಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಮಹಾಂತಸ್ವಾಮಿ ವೃತ್ತದಿಂದ ಗಾಣದೇವತೆ ಭಾವಚಿತ್ರದೊಂದಿಗೆ ಪೂರ್ಣ ಕುಂಭ ಮೇರವಣಿಗೆ ಕಾರ್ಯಕ್ರಮದ ಸ್ಥಳದವರೆಗೆ ಜರುಗುತಿ.
ಬಾಕ್ಸ್: ದೊರನಳ್ಳಿ ಗ್ಯಾಸ್ ಸಿಲಿಂಡರ್ ಅಪಘಾತದಲ್ಲಿ ಮೃತಪಟ್ಟ ಕುಟುಂಬಳಿಗೆ ಸಮಾಜದ ವತಿಯಿಂದ ಆಯಾ ಕುಟುಂಬಳಿಗೆ 25 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಯಿತು.
ಇದೇ ಸಂದರ್ಭದಲ್ಲಿ ಪ.ಪೂ. ಅಡವಿಲಿಂಗ ಮಹಾರಾಜರು ವೀರಗೂಟ, ಪ.ಪೂ. ಶಿವಮೂರ್ತಿ ಶಿವಾಚಾರ್ಯರು ದೇವಾಪೂರ, ಪ.ಪೂ. ಮರಿಹುಚ್ಚೇಶ್ವರ ಸ್ವಾಮಿಗಳು ಗುಳಬಾಳ, ಶಿವಕುಮಾರ ಮಹಾಸ್ವಾಮಿಗಳು ದುರುದುಂಡೇಶ್ವರ ಮಠ ಕೊಡೇಕಲ್, ವೃಷಬೇಂಧ್ರ ಮಹಾಸ್ವಾಮಿಗಳು ಮಹಲಿನಮಠ, ಸಣ್ಣಕ್ಕೇಪ್ಪ ಮುತ್ಯಾ ಬಂಡೇಪ್ಪನಹಳ್ಳಿ, ಹಾಗೂ ಅಮರಗುಂಡಪ್ಪ ಮೇಟಿ, ಚಂದ್ರಶೇಖರ ಸಜ್ಜನ್, ಮಲ್ಲಿನಾಥಗೌಡ ಪಾಟೀಲ್, ಶಿವಕುಮಾರ ಸಜ್ಜನ್, ಉಮೇಶ ಸಜ್ಜನ್, ತೋಟಪ್ಪ ಕಾಮನೂರು, ರಾಜಶೇಖರಗೌಡ ಪಾಟೀಲ್ ವಜ್ಜಲ್, ಬಸವರಾಜ ಸ್ಥಾವರಮಠ, ಬಸನಗೌಡ ಯಡಿಯಾಪೂರ, ಸಿದ್ದನಗೌಡ ಪಾಟೀಲ್, ಎಚ್.ಸಿ.ಪಾಟೀಲ್. ಡಾ. ಎಸ್.ಡಿ.ಕದಂಪೂರ, ಸಂಗಣ್ಣ ವೈಲಿ, ಬಿ.ಎಮ್. ಹಳ್ಳಿಕೋಟಿ, ಶರಣು ದಂಡಿನ, ಸಿ.ಪಿ.ಐ ದೌಲತ್ ಎನ್.ಕೆ. ಪಿ.ಎಸ್.ಐ ಚಿದಾನಂದ ಸೌದಿ ಚಂದ್ರಶೇಖರ ಸಜ್ಜನ್, ಗುರುಲಿಂಗಪ್ಪ ಸಜ್ಜನ್, ನಾಗಪ್ಪ ಸಜ್ಜನ್, ಬಸವರಾಜ ಸಜ್ಜನ್, ಗುರುಸಿದ್ದಪ್ಪ ಸಜ್ಜನ್, ಬಸಣ್ಣ ಕ್ವಾಟಿ, ದೇವಿಂಧ್ರಪ್ಪ ಕಕ್ಕೇರಾ, ಗೊಲ್ಲಾಳಪ್ಪಗೌಡ ಹಂದ್ರಾಳ, ಮಲ್ಲಣ್ಣ ನಾಗರಾಳ, ಭೀಮರಾಯ ಬೊರಮಗುಂಡ, ಭೀಮಣ್ಣ ದ್ಯಾಮಗುಂಡ, ಪರಮಾನಂದ ಚಟ್ಟಿ, ವಿಜಯಕುಮಾರ ಗುಡಗುಂಟಿ, ನಿಂಗನಗೌಡ ಗುಡಗುಂಡ ಸೇರಿದಂತೆ ಗಾಣಿಗ ಸಮಾಜದ ಮುಖಂಡರು ಕಾರ್ಯಕರ್ತರು ಇದ್ದರು. ಎಸ್ ಎಸ್ ಮಾರನಾಳ ನಿರೂಪಿಸಿದರು. ಸಂಗಮ್ಮ ಸಜ್ಜನ್ ವಂದಿಸಿದರು.