Belagavi News In Kannada | News Belgaum

ಬಸ್’ ಬಾಡಿಗೆ ಪಡೆಯೋರಿಗೆ ‘ಕಿಲೋಮೀಟರ್ ದರ’ ಏರಿಕೆಗೆ ಕೆಎಸ್‌ ಆರ್‌ಟಿಸಿ ಅಸ್ತು

ಬೆಂಗಳೂರು: ನಿರಂತರವಾಗಿ ಏರಿಕೆಯಾಗುತ್ತಿರುವ ತೈಲ ದರಗಳ ಹೆಚ್ಚಳದ ಬೆನ್ನಲ್ಲೇ, ಕೆ ಎಸ್ ಆರ್ ಟಿ ಸಿ ಕೂಡ ವಿವಿಧ ಕಾರ್ಯಗಳಿಗೆ ಬಾಡಿಗೆ ಪಡೆಯುವಂತ ಬಸ್ ಗಳ ಕಿಲೋಮೀಟರ್ ದರ ಹೆಚ್ಚಿಸಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಬಸ್ ( KSRTC Bus ) ಬಾಡಿಗೆ ಪಡೆಯೋರಿಗೆ ಬಿಗ್ ಶಾಕ್ ನೀಡಿದೆ.

ಈ ಕುರಿತಂತೆ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ನಿಗಮದ ಬಸ್ಸುಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸಲು ವಿಧಿಸಬೇಕಾಗದ ದರ, ಕಿಲೋಮೀಟರ್ ಷರತ್ತು, ನಿಬಂಧನೆಗಳ ಸಂಬಂಧ ಸಾಮಾನ್ಯ ಸ್ಥಾಯಿ ಆದೇಶ ಹಾಗೂ ಸುತ್ತೋಲೆಗಳಲ್ಲಿ ನಿರ್ದೇಶನಗಳನ್ನು ನೀಡಲಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳದಿಂದಾಗಿ ನಿಗಮದ ವಾಹನಗಳ ಕಾರ್ಯಾಚರಣಾ ವೆಚ್ಚ ಹೆಚ್ಚಳವಾಗಿರೋ ಕಾರಣದಿಂದಾಗಿ, ಈ ಕೆಳಗಿನಂತೆ ನಿಗಮದ ಬಸ್ ಗಳ ವರ್ಗದ ಅನುಸಾರ, ಸಾಂದರ್ಭಿಕ ಒಪ್ಪಂದದ ದರಗಳನ್ನು ಪರಿಷ್ಕರಿಸಿ ಆದೇಶಿಸಿದ್ದಾರೆ.

ಕರ್ನಾಟಕ ಸಾರಿಗೆ – 55,47,49 ಆಸನ – ಕನಿಷ್ಠ 300 ಕಿಮೀ – ರಾಜ್ಯದೊಳಗೆ ರೂ.42 ಪ್ರತಿ ಕಿಲೋಮೀಟರ್ ದರ, ಅಂತರರಾಜ್ಯ ರೂ.45. ರಾಜಹಂಸ ಎಕ್ಸಿಕ್ಯೂಟಿವ್ – 36 ಆಸನಗಳು, ಕನಿಷ್ಠ 300 ಕಿಮೀ – ರಾಜ್ಯದೊಳಗೆ ರೂ.43, ಹೊರರಾಜ್ಯ ರೂ.48
ರಾಜಹಂಸ – 39 ಆಸನ, 300 ಕಿಮೀ – ರಾಜ್ಯ ರೂ.46, ಹೊರರಾಜ್ಯ ರೂ.50
ರಾಜಹಂಸ ( 12 ಮೀಟರ್ ಚಾಸಿಸ್ ) – 44 ಆಸನ, 300 ಕಿಮೀ – ರಾಜ್ಯ ರೂ.48, ಹೊರರಾಜ್ಯ ರೂ.52 ಮೈಸೂರು ನಗರ ಸಾರಿಗೆ – 42 ಆಸನ, 250 ಕಿಮೀ – ರೂ.40 ಪ್ರತಿ ಕಿಲೋಮೀಟರ್ ಮಿನಿ ಬಸ್ಸು – 30 ಆಸನಗಳು, 250 ಕಿಮೀ – ಪ್ರತಿ ಕಿ.ಮೀ ರೂ.35
ಇನ್ನೂ ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ. ಆದ್ರೇ ಈ ಆದೇಶಕ್ಕೂ ಮೊದಲು ಬುಕ್ಕಿಂಗ್ ಮಾಡಿದವರಿಗೆ ಹಳೆಯ ದರಗಳೇ ಅನ್ವಯಿಸಲಿವೆ.//////