Belagavi News In Kannada | News Belgaum

ಬಿರುಗಾಳಿ-ಮಳೆಗೆ ನೆಲಕಚ್ಚಿದ ಮಾವಿನ ಬೆಳೆ

ರಾಯಚೂರು: ಬಿರುಗಾಳಿ, ಗುಡುಗು ಸಹಿತ ಸೋಮವಾರ ಸಂಜೆ ಸುರಿದ ಆಲಿಕಲ್ಲಿನ ಮಳೆಯಿಂದ ರೈತರ ಮಾವು ತೋಟಗಳು ನೆಲಕೆಚ್ಚಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ರಾಯಚೂರು ತಾಲೂಕಿನ ವಡ್ಲುರು, ಹನುಮನದೊಡ್ಡಿ , ದೇವಸೂಗೂರು , ಯದ್ಲಾಪುರ, ಶಕ್ತಿನಗರ, ಕೊರವಿಹಾಳ್, ಕೊರ್ತಕುಂದಾ ಗ್ರಾಮಗಳಲ್ಲಿ ಬಿರುಗಾಳಿ, ಗುಡುಗು ಸಹಿತಿ ಆಲಿಕಲ್ಲು ಮಳೆ ಸುರಿದಿದೆ.
ಆ ಸೀಮಾಂತರದ ಪ್ರದೇಶದ ಜಮೀನುಗಳಲ್ಲಿ ಬೆಳೆದಿದ್ದ ಮಾವು ತೋಟಗಳು ಹಾಳಾಗಿರುವುದರಿಂದ ಸಾಲ ಮಾಡಿ ಬೆಳೆದಿದ್ದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು , ಅಕಾಲಿಕ ಮಳೆಗೆ ಬೇಸಿಗೆಯ ನಡುವೆಯೂ ನೀರುಣಿಸಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತರಿಗೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಸತತ ನಾಲ್ಕು ವರ್ಷಗಳ ಬರಕ್ಕೆ ಮಂಕಾಗಿದ್ದ ಮಾವು ಬೆಳೆಗಾರರ ಮುಖದಲ್ಲಿ ಈ ಬಾರಿ ಮಂದಹಾಸ ಮೂಡಿತ್ತು. ಹೀಗಾಗಿ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಸಿಡಿಲು ಬಡಿದಂತಾಗಿದೆ.