Belagavi News In Kannada | News Belgaum

ಈಜು ಸ್ಪರ್ಧೆಯಲ್ಲಿ ಕಂಚಿನ ಬೇಟೆಯಾಡಿದ ಜ್ಯೋತಿ

ಬೆಳಗಾವಿ;  ಪ್ಯಾನ್ ಇಂಡಿಯಾ ಮಾಸ್ಟರ್ ಗೇಮ್ಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಈಜು ಸ್ಪರ್ಧೆ  ಬೆಳಗಾವಿ ಅಧಿಕಾರಿಯೋಬ್ಬರು ಕಂಚಿನ ಬೇಟೆಯಾಡಿದ್ದಾರೆ.

ಪಡಕೊನೆ ದ್ರಾವಿಡ ಸ್ಪೋರ್ಟ್ಸ್ ಎಕ್ಸಲನ್ಸ ಸೆಂಟರ್ ಬೆಂಗಳೂರು ನಲ್ಲಿ  ಮೇ 14  ಹಾಗೂ 15  ,2022 ರಂದು   ಜರುಗಿದ ಈಜು   ಸ್ಪರ್ಧೆಯಲ್ಲಿ ಬೆಳಗಾವಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಡೋಲಿ  ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳಾದ   ಜ್ಯೋತಿ ಕೋರಿ ಅವರು  ವೈಯಕ್ತಿಕ ಸ್ಪರ್ಧೆಯಲ್ಲಿ 4 ಬಂಗಾರದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಿಕ್ಸ ರಿಲೆನಲ್ಲಿ ನಲ್ಲಿ   ಒಂದು ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ ಅವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಎಸ ವ್ಹಿ ಮುನ್ಯಾಳ ಅವರು ಸಾಧನೆಗೆ ಶುಭ ಹಾರೈಸಿ ಅಭಿನಂದಿಸಿದ್ದಾರೆ.

ಅವರ ಸಾಧನೆಗೆ ಶ್ರಮಿಸಿದ ತರಬೇತಿದಾರರು ,ಅವರಿಗೆ ಸಹಕರಿಸಿದ ಕುಟುಂಬ ವರ್ಗದವರಿಗೊ ಅಭಿನಂದನೆ ಸಲ್ಲಿಸಿದ್ದಾರೆ/////