ಮೇ. 19ಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಮೇ. 19 ರಂದು ಮಧ್ಯಾಹ್ನ 1 ಗಂಟೆ ವೇಳೆಗೆ ಹೊರ ಬೀಳಲಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು 2021-22 ನೇ ಶೈಕ್ಷಣಿಕ ಸಾಲಿನ ಫಲಿತಾಂಶವನ್ನು ಪ್ರಕಟ ಮಾಡಲಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಸೆಕೆಂಡಿಗೆ ಇಬ್ಬರ ಫಲಿತಾಂಶ ಸಂದೇಶ: ರಾಜ್ಯದಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶ ಪ್ರಕಟವಾಗಲಿದೆ. ಪ್ರತಿ ಸೆಕೆಂಡಿಗೆ ಇಬ್ಬರಿಗೆ ಫಲಿತಾಂಶದ ವಿವರ ಮೊಬೈಲ್ಗೆ ರವಾನೆಯಾಗಲಿದೆ. ಮೇ. 19 ಸಂಜೆ ವೇಳೆಗೆ ಫಲಿತಾಂಶದ ವಿವರಗಳು ವಿದ್ಯಾರ್ಥಿಗಳ ಮೊಬೈಲ್ ಗಳಿಗೆ ಹೋಗಲಿದೆ.
ವೆಬ್ ತಾಣದಲ್ಲಿ ಪ್ರಕಟ: ಎಸ್ಎಸ್ಎಲ್ಸಿ ಫಲಿತಾಂಶ ಕುರಿತು ಅಧಿಕೃತ ವೆಬ್ ತಾಣ
https://sslc.karnataka.gov.in/ ಹಾಗೂ https://karresults.nic.in/ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಅಧಿಕೃತವಾಗಿ ಫಲಿತಾಂಶ ಪ್ರಕಟವಾದ ಕೂಡಲೇ ವೆಬ್ ತಾಣದಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಸರ್ಕಾರದ ಈ ಅಧಿಕೃತ ವೆಬ್ ತಾಣದಲ್ಲಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ನಂಬರ್ ಹಾಕಿದರೆ ಸಾಕು ವಿಷಯವಾರು ಫಲಿತಾಂಶ ಹಾಗೂ ಗಳಿಸಿದ ಒಟ್ಟು ಅಂಕದ ವಿವರ ಪ್ರಕಟವಾಗಲಿದೆ. ಒಂದೇ ಸಲ ವಿದ್ಯಾರ್ಥಿಗಳು ಫಲಿತಾಂಶದ ವಿವರ ನೋಡುವ ಕಾರಣಕ್ಕೆ ಕೆಲವೊಮ್ಮೆ ಫಲಿತಾಂಶ ತೋರಿಸದಿದ್ದರೂ, ವಿದ್ಯಾರ್ಥಿಗಳು ತಾಳ್ಮೆ ಕಳೆದುಕೊಳ್ಳಬಾರದು. ಮಿಗಿಲಾಗಿ ಮೇ. 20 ರಂದೇ ಫಲಿತಾಂಶದ ವಿವರಗಳು ಆಯಾ ಶಾಲೆಗಳಿಗೆ ರವಾನೆಯಾಗಲಿದೆ.//////