Belagavi News In Kannada | News Belgaum

ರಾಯಬಾಗದ ಮುಖ್ಯಾಧಿಕಾರಿ ಸಂಜು ಮಾಂಗ ಇವರಿಗೆ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ತಲಾ ರೂ 10.000/- ದಂಡ ವಿದಿಸಿದೆ.

ರಾಯಬಾಗದ ಮುಖ್ಯಾಧಿಕಾರಿ ಸಂಜು ಮಾಂಗ ಇವರಿಗೆ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ತಲಾ ರೂ 10.000/- ದಂಡ ವಿದಿಸಿದೆ.

 

ಬೆಳಗಾವಿ: ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಜು ಮಾಂಗ ಇವರಿಗೆ ಮೂರು ಪ್ರತ್ಯೇಕ ಪ್ರಕರಣಗಳ ರಾಜ್ಯ ಮಾಹಿತಿ ಆಯೋಗ ಬೆಳಗಾವಿ ಪೀಠ ದಂಡ ವಿದಿಸಿ ಆದೇಶ ಹೊರಡಿಸಿದೆ.

ವಕೀಲ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಇವರು ಪಟ್ಟಣ ಪಂಚಾಯತ ರಾಯಬಾಗದಲ್ಲಿ ಮೂರು ಅರ್ಜಿಗಳನ್ನು ಸಲ್ಲಿಸಿದ್ದರು. ಮಾಹಿತಿ ಕೊಡದೇ ಇದ್ದರಿಂದ ರಾಜ್ಯ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು. ರಾಜ್ಯ ಮಾಹಿತಿ ಆಯೋಗ ಬೆಳಗಾವಿ ಪೀಠವು ಪ್ರಕರಣವನ್ನು ಕೈಗೆತ್ತಿಕೊಂಡು ಸದರಿ ಪ್ರಕರಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳದ್ದು ತಪ್ಪು ಕಂಡು ಬಂದಿದ್ದರಿಂದ ಮೂರು ಪ್ರಕರಣಗಳಲ್ಲಿ ತಲಾ 10.000/- ದಂಡ ವಿದಿಸಿ ಆದೇಶ ಹೊರಡಿಸಿದೆ‌ ಹಾಗೂ ಸದರಿ ದಂಡದ ಮೊತ್ತವನ್ನು ಅವರ ವೇತನದಲ್ಲಿ ಕಡಿತ ಮಾಡಿ ಸರಕಾರಕ್ಕೆ ಜಮಾ ಮಾಡಲು ಆದೇಶ ನಿಡಿದೆ.

ಇದಕ್ಕೆ ಸಂಬಂದಿಸಿದಂತೆ ವಕೀಲ ಉಗಾರೆ ಇವರು ಮೊದಲ ಸಲ ಆಯೋಗವು ಒಬ್ಬ ಸಾರ್ವಜನಿಕ ಅಧಿಕಾರಿಗೆ ಒಂದೇ ಸಲ ಮೂರು ಪ್ರಕರಣಗಳಲ್ಲಿ ದಂಡ ವಿಧಿಸಿದೆ ಎಂದು ಹೇಳಿದ್ದಾರೆ.