Belagavi News In Kannada | News Belgaum

ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಚಿಕ್ಕೋಡಿ: ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ

ಬೆಳಗಾವಿ, ಮೇ 17: ತಾಲ್ಲೂಕುಮಟ್ಟದ ಅಧಿಕಾರಿಗಳು ಪ್ರತಿದಿನ ಕಡ್ಡಾಯವಾಗಿ ಸಾರ್ವಜನಿಕರ ಭೇಟಿಗೆ ಸಮಯ ಮೀಸಲಿಡಬೇಕು. ತಮ್ಮ ವ್ಯಾಪ್ತಿಯ ಕಚೇರಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಜನರ ದೂರುಗಳನ್ನು ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ (ನೇ 17) ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕು ಮಟ್ಟದಲ್ಲಿ ಜನರ ದೂರುಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾ ಮಟ್ಟಕ್ಜೆ ದೂರುಗಳು ಬರುತ್ತವೆ. ಆದ್ದರಿಂದ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು.
ಯಾವುದೇ ಕೆಲಸ ಬಾಕಿ ಉಳಿಯದಂತೆ ನಿಯಮಿತವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು.
ಮಳೆಗಾಲ ಆರಂಭಗೊಳ್ಳಲಿರುವುದರಿಂದ ಪ್ರವಾಹ ನಿರ್ವಹಣೆಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.

ತಾಂತ್ರಿಕ ದೋಷದ ಸಬೂಬು ಬೇಡ:

ತಾಂತ್ರಿಕ ದೋಷಗಳನ್ನು ಸಬೂಬು ಹೇಳದೇ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಪ್ರಾಮಾಣ ಕವಾಗಿ ಸಕಾರಾತ್ಮಕವಾಗಿ ಪ್ರಯತ್ನಿಸಬೇಕು. ಸ್ಥಳೀಯವಾಗಿ ಸಮಸ್ಯೆ ಪರಿಹರಿಸಿದರೆ ಸರಕಾರ ಹಾಗೂ ಅಧಿಕಾರಿಗಳಿಗೂ ಉತ್ತಮ ಹೆಸರು ಬರುತ್ತದೆ. ಆದ್ದರಿಂದ ಈ ನಿಟ್ಟಿಯ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ.
ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದಾರ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.////

 

ಚಿಕ್ಕೋಡಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಡಿಸಿ
—ಸ್ಥಳದಲ್ಲೇ ಸಮಸ್ಯೆ ಬಗೆಹರಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

 

ಬೆಳಗಾವಿ, ಮೇ 17: ಪಹಣ ದೋಷ, ಪರಿಹಾರ ವಿಳಂಬ, ಮನೆ ಸಮೀಕ್ಷೆ ದೋಷ, ಎಬಿ-ಆರ್.ಕೆ. ರೆಫರಲ್ ನೀಡಲು ಸತಾಯಿಸುತ್ತಿರುವ ದೂರುಗಳ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಅಧಿಕಾರಿಗಳನ್ನು ಕರೆಸಿ ಹಲವಾರು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ (ನೇ 17) ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ರಾಯಬಾಗ ತಾಲ್ಲೂಕಿನ ವ್ಯಕ್ತಿಯೊಬ್ಬರು ತಮ್ಮ ಜಮೀನು ಸರ್ವೆ ಮಾಡಿ ನಮಗೆ ಗೊತ್ತಿಲ್ಲದೇ ಹೈಕೋರ್ಟಿನಲ್ಲಿ ಪ್ರಕರಣ ಇರುವಾಗಲೇ ಹೆಸರು ಕಡಿಮೆ ಮಾಡಲಾಗಿದೆ ಎಂದು ಅಹವಾಲು ಹೇಳಿಕೊಂಡರು.
ಹೈಕೋರ್ಟ್ ಆದೇಶ ಪ್ರತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಟ್ರಿಬ್ಯುನಲ್ ನಲ್ಲಿ ಪ್ರಕರಣ ನಡೆಯುತ್ತಿದೆ.
ಟ್ರಿಬ್ಯುನಲ್ ಅಂತಿಮ ಆದೇಶ ಆದರೆ ನಿಮ್ಮ ಪರವಾಗಿ ಜಮೀನು ನೋಂದಣ ಮಾಡಿ ಉತಾರ ನೀಡಲಾಗುವುದು. ಎಂದು ಡಿಸಿ ಭರವಸೆ ನೀಡಿದರು.

ಕನ್ನಡ ಶಾಲೆಗೆ ಶಿಕ್ಷಕರ ನಿಯೋಜನೆಗೆ ಕ್ರಮ;

ಚಿಕ್ಕೋಡಿ ತಾಲ್ಲೂಕಿನಲ್ಲಿ ಶಿರಗಾಂವ ಗ್ರಾಮದಲ್ಲಿ ಕನ್ನಡ ಶಾಲೆಯಲ್ಲಿ 500 ಕ್ಕೂ ಅಧಿಕ ಮಕ್ಕಳಿದ್ದಾರೆ. ಐದು ಜನ ಶಿಕ್ಷಕರಿದ್ದಾರೆ. ಶಿಕ್ಷಕರ ಕೊರತೆ ಇರುವುದರಿಂದ ಒಂದೇ ಕೊಠಡಿಯಲ್ಲಿ ಮೂರ್ನಾಲ್ಕು ತರಗತಿಯ ಮಕ್ಕಳನ್ನು ಓದಿಸುತ್ತಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಸೆಳೆದರು.

ಇದಕ್ಕೆ ಸ್ಪಂದಿಸಿದ ಅವರು, ಕೂಡಲೇ ಹೆಚ್ಚುವರಿ ಶಿಕ್ಷಕರ ನಿಯೋಜನೆಗೆ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

ವ್ಯಕ್ತಿಯೊಬ್ಬರ ಆಸ್ತಿ ಉತಾರದಲ್ಲಿ ಸರ್ವೆ ನಂಬರ್ ತಪ್ಪಾಗಿ ನಮೂದಾಗಿರುವುದು ಪರಿಶೀಲಿಸಿದ ಅವರು, ಆ ವ್ಯಕ್ತಿಯಿಂದ ಸೂಕ್ತ ಅರ್ಜಿ ಪಡೆದುಕೊಂಡು ಪಹಣ ತಿದ್ದುಪಡಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕಾಗಿ ಈಗಾಗಲೇ ಅರ್ಜಿ ನೀಡಿದಾಗ್ಯೂ ವಿಳಂಬ ಮಾಡಿರುವ ಸ್ಥಳೀಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಮನೆಹಾನಿ; ಹೆಸರು ಸೇರ್ಪಡೆಯ ಭರವಸೆ:

ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡ ಇಂಗಳಿ ಗ್ರಾಮದ ವಿವಿಧ ಕುಟುಂಬಗಳ ಅಹವಾಲು ಆಲಿಸಿದ ಡಿಸಿ ಅವರು ಮೊದಲ ಸಮೀಕ್ಷೆಯಲ್ಲಿ ಹೆಸರಿದ್ದು ನಂತರ ಹೆಸರು ಇಲ್ಲದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
2019 ರಲ್ಲಿ ಐವತ್ತು ಸಾವಿರ ಪರಿಹಾರ ಪಡೆದುಕೊಂಡು ಪುನಃ 2021 ರಲ್ಲಿ ಸಂಪೂರ್ಣ ಮನೆ ಕಳೆದುಕೊಂಡು ಐದು ಲಕ್ಷ ರೂಪಾಯಿ ಪರಿಹಾರ ಕೇಳುತ್ತಿರುವ ಕೆಲ ಕುಟುಂಬಗಳ ಅಹವಾಲು ಆಲಿಸಿದರು.

ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಕೂಡ ಸ್ಥಳಕ್ಕೆ ಕರೆಸಿದ ಜಿಲ್ಲಾಧಿಕಾರಿ, ಜಂಟಿ ಸಮೀಕ್ಷೆ ನಡೆಸಿದ ಬಳಿಕವೂ ಕೆಲವು ಕುಟುಂಬಗಳ ಸೇರ್ಪಡೆ ಯಾಕಾಗಿಲ್ಲ ಎಂದು ಪ್ರಶ್ನಿಸಿದರು.
ಮೊದಲ ಬಾರಿ ಪರಿಹಾರ ಪಡೆದಾಗ ಹಾಗೂ ನಂತರದ ಪ್ರವಾಹ ಸಂದರ್ಭದಲ್ಲಿ ಬೇರೆ ಹೆಸರಿನಲ್ಲಿ ಅರ್ಜಿ ನೀಡಿದ್ದರಿಂದ ತಿರಸ್ಕರಿಸಲಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ಸ್ಪಷ್ಟಪಡಿಸಿದರು.

ಲಾಗಿನ್ ಗೆ ಅವಕಾಶ ಕಲ್ಪಿಸಿದಾಗ ಇಂಗಳಿ ಗ್ರಾಮದ ಈ ಕುಟುಂಬಗಳ ಹೆಸರು ಸೇರ್ಪಡೆ ಮಾಡಲಾಗುವುದು ಎಂದು ಭರವಸೆ ನೀಡಿದ ಜಿಲ್ಲಾಧಿಕಾರಿ, ಲಾಗಿನ್ ಆರಂಭಗೊಂಡ ಮೊದಲ ದಿನವೇ ಹೆಸರು ಸೇರ್ಪಡೆಗೊಳಿಸಬೇಕು ಎಂದು ಅಧಿಕಾರಿಗಳಿಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕೆಲ ಅರ್ಜಿದಾರರ ಮೊಬೈಲ್ ಸಂಖ್ಯೆಯನ್ನು ಸ್ವತಃ ಬರೆದು ಇಂದೇ ಕೆಲಸ ಮಾಡಿಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮ ಒನ್ ಕೇಂದ್ರ ಮಂಜೂರಾತಿ ಮರುಪರಿಶೀಲನೆಗೆ ಸೂಚನೆ:

ನಾಗರಾಳ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ಮಂಜೂರು ಮಾಡುವಾಗ ಸ್ಥಳೀಯ ಅಭ್ಯರ್ಥಿ ಬೀರಪ್ಪ ಹೆಗ್ಗಣ್ಣವರ ಅವರ ಆಯ್ಕೆಯಾಗದಿರುವ ಕುರಿತು ದೂರು ಆಲಿಸಿದರು.
ಈ ಬಗ್ಗೆ ಆಯ್ಕೆ ಪ್ರಕ್ರಿಯೆ ಕುರಿತು ಆಕ್ಷೇಪಣೆ ಅರ್ಜಿ ಪಡೆದುಕೊಂಡು ಮರು ಪರಿಶೀಲನೆ ನಡೆಸುವಂತೆ ತಿಳಿಸಿದರು.

ಸ್ಥಳದಲ್ಲೇ ವೈದ್ಯರಿಂದ ಸಹಿ ಹಾಕಿಸಿದ ಡಿಸಿ:

ಒಂದು ವಾರದ ಮಗುವಿಗೆ ಎಬಿ-ಆರ್ ಕೆ. ಯೋಜನೆಯಡಿ ರೆಫರಲ್ ನೀಡಲು ವಿನಾಕಾರಣ ಸತಾಯಿಸಲಾಗುತ್ತಿದೆ ಎಂಬ ದೂರು ಆಲಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಯ ಸಿಎಂಓ ಅವರಿಗೆ ದೂರವಾಣ ಕರೆ ಮಾಡಿ ಕರೆಸಿದರು.

ಒಮ್ಮೆ ಡಿಸ್ ಚಾರ್ಜ್ ಆಗಿರುವ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಬೇಕಾದರೆ ಪತ್ರ ನೀಡಬೇಕಾಗುತ್ತದೆ. ಅದನ್ನು ಆಧರಿಸಿ ರೆಫರಲ್ ನೀಡಲಾಗುತ್ತದೆ. ಆದರೆ ಕುಟುಂಬದವರು ಎಂಟು ದಿನದ ಮಗುವನ್ನು ಚಿಕಿತ್ಸೆಗಡ ಕರೆದೊಯ್ಯುವ ಬಗ್ಗೆ ಪತ್ರ ನೀಡದಿರುವುದರಿಂದ ರೆಫರಲ್ ನೀಡಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿಯೇ ವೈದ್ಯಾಧಿಕಾರಿಯನ್ನು ಕರೆಸಿ ರೆಫರಲ್ ದಾಖಲೆಗಳಿಗೆ ಸಹಿ ಮಾಡಿಸಿದರು.
ಒಂದು ವೇಳೆ ಖಾಸಗಿ ಆಸ್ಪತ್ರೆ ವೈದ್ಯರು ಮಗುವಿನ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರೆ ಅವರ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೇ ಈ ಕುರಿತು ಪರಿಶೀಲನೆ ನಡೆಸುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಮೀರಾಪುರ ಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮ ಎಂದು ಘೋಷಿಸುವ ಕುರಿತು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಸದರಿ ಗ್ರಾಮ ಈಗಾಗಲೇ ಕಂದಾಯ ಗ್ರಾಮ ಎಂದು ಘೋಷಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದರು.

ಮಾಂಜರಿ ಗ್ರಾಮದಲ್ಲಿ ಪ್ರವಾಹ ಸಂದರ್ಭದಲ್ಲಿ ಸಂಪೂರ್ಣ ಕುಸಿದ ಕೆಲ ಮನೆಗಳನ್ನು ಮೊದಲ ಸಮೀಕ್ಷೆಯಲ್ಲಿ ಹೆಸರು ಸೇರ್ಪಡೆ ಮಾಡಲಾಗಿತ್ತು. ಆದರೆ ಎರಡನೇ ಸಮೀಕ್ಷೆಯಲ್ಲಿ ಹೆಸರು ಕೈಬಿಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರು ನೀಡಿದರು.
ಮತ್ತೇ ಸೇರ್ಪಡೆಗೆ ಅವಕಾಶ ಕಲ್ಪಿಸಿದಾಗ ಪುನಃ ಹೆಸರು ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.

42 ಕುಟುಂಬಗಳಿಗೆ ತಕ್ಷಣವೇ ಹತ್ತು ಸಾವಿರ ಜಮಾ:

ಮಾಂಜರಿಯಲ್ಲಿ ಪ್ರವಾಹ ಸಂದರ್ಭದಲ್ಲಿ ಮನೆಗೆ ನೀರು ನುಗ್ಗಿದ ಪ್ರತಿ ಮನೆಗೆ ಹತ್ತು ಸಾವಿರ ನೀಡಲಾಗಿತ್ತು. ಆದರೆ ಬ್ಯಾಂಕ್ ಐಎಫ್ಎಸ್ಸಿ ಬದಲಾವಣೆಯ ತಾಂತ್ರಿಕ ತೊಂದರೆ ಕಾರಣಕ್ಕೆ 41 ಕುಟುಂಬಗಳಿಗೆ ಹಣ ಜಮಾ ಆಗದಿರುವ ಬಗ್ಗೆ ಗ್ರಾಮಸ್ಥರು ದೂರಿದರು.
ಈ ಬಗ್ಗೆ ಪರಿಶೀಲಿಸಿದ ಡಿಸಿ ಅವರು, ಬ್ಯಾಂಕ್ ಎಫ್.ಎಸ್.ಸಿ. ಕೋಡ್ ಬದಲಾಯಿಸಿ ಕೂಡಲೇ ಹಣ ಜಮಾ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಇದಕ್ಕೂ ಮುಂಚೆ ಉಪ ನೋಂದಣಾಧಿಕಾರಿ ಕಚೇರಿ, ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಕಾರ್ಯವೈಖರಿಯನ್ನು ಪರಿಶೀಲಿಸಿದರು.////

 

ಚುನಾವಣೆ ಕರ್ತವ್ಯ ನಿಯೋಜಿತ ಅಧಿಕಾರಿಗಳ ತರಬೇತಿ

ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: ಎನ್. ವ್ಹಿ ಶಿರಗಾಂವಕರ

 

ಬೆಳಗಾವಿ, ಮೇ.17: ನಿಯೋಜಿತ ಅಧಿಕಾರಿಗಳು ಯಾವುದೇ ಗೊಂದಲವಿಲ್ಲದೆ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಲಿದ್ದು ಅಭ್ಯರ್ಥಿಗಳ ಸಭೆ, ಸಮಾರಂಭಗಳ ಕುರಿತು ನಿರಂತರ ಪರಿಶೀಲನೆ ನಡೆಸಿ ನಿಗಾ ವಹಿಸಬೇಕು ಎಂದು ತರಬೇತುದಾರ ಎನ್. ವ್ಹಿ ಶಿರಗಾಂವಕರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ (ಮೇ.17) ನಡೆದ ಕರ್ನಾಟಕ ವಾಯುವ್ಯ ಪದವೀಧರ ಹಾಗೂ ವಾಯುವ್ಯ ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2022 ರ ಕರ್ತವ್ಯ ನಿರ್ವಹಣೆಯ ಕುರಿತು ಅಧಿಕಾರಿಗಳಿಗೆ ಅವರು ತರಬೇತಿ ನೀಡಿದರು.

ಮಾದರಿ ನೀತಿ ಸಂಹಿತೆ ಜಾರಯಲ್ಲಿರುವುದರಿಂದ ನಿಯೋಜಿತ ಅಧಿಕಾರಿಗಳು ಅಭ್ಯರ್ಥಿಗಳ, ಸಭೆ ಸಮಾರಂಭಗಳ ಕುರಿತು ನಿರಂತರ ಪರಿಶೀಲನೆ ನಡೆಸಬೇಕು. ಅಭ್ಯರ್ಥಿಗಳ ಪರ ಪ್ರಚಾರ ಹಾಗೂ ಕಾರ್ಯಕ್ರಮಗಳನ್ನು ನಡೆಸುವುದು ಕಂಡುಬಂದಲ್ಲಿ ವಿಡಿಯೋ ಸಂಗ್ರಹಣ ಮೂಲಕ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಎಂದು ತಿಳಿಸಿದರು.

ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮತಾರರನ್ನು ಕುರಿತು ಭಾಷಣ ಮಾಡುವುದು ಸರ್ಕಾರಿ ಸೌಲಭ್ಯಗಳ ವಿಸ್ತರಣೆ, ಮತ್ತು ನೀತಿ ನಿರ್ದೇಶನಾತ್ಮಕ ವಿಷಯಗಳ ಕುರಿತು ಭರವಸೆ ನೀಡುವುದು ಕಂಡು ಬಂದಲ್ಲಿ, ತಕ್ಷಣ ಸ್ಥಳೀಯ ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ನಿರ್ದೇಶನದಂತೆ ದೂರು ದಾಖಲಿಸಬೇಕು ಎಂದು ತಿಳಿಸಿದರು.

ಪ್ರತಿ ಸ್ಪರ್ಧಿಗಳ ಚಾರಿತ್ರ್ಯ ಹರಣ, ಅವಹೇಳನ, ಪ್ರಚೋದನಕಾರಿ ಭಾಷಣ ಮಾಡುವುದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಸಾಮಾಜಿಕ ಶಾಂತಿ ಕೆದಾಡುವ ತೀಕ್ಷ್ಣ ಹೇಳಿಕೆಗಳು ನೀಡುವುದು ಹಾಗೂ ಹೊಸ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳಾಗಿವೆ.

ಅದೇ ರೀತಿಯಲ್ಲಿ ನೈಸರ್ಗಿಕ ವಿಕೋಪ ಮತ್ತು ಕುಡಿಯುವ ನೀರಿನ ವಿಷಯಗಳನ್ನು ಹೊರತುಪಡಿಸಿ ಅಧಿಕಾರಿಗಳ ಸಭೆ ಜರುಗಿಸುವುದು. ಕಚೇರಿ ಕೆಲಸಗಳನ್ನು ಹೊರತುಪಡಿಸಿ ಪಕ್ಷದ ಅಥವಾ ಸ್ವಂತದ ಕೆಲಸಗಳಿಗೆ ಸರ್ಕಾರಿ ವಾಹನಗಳನ್ನು ಬಳಸುವುದು ಕೂಡ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.

ಕೋವಿಡ್ ನಿಯಮ ಪಾಲನೆಗೆ ಸೂಚನೆ:

ಚುನಾವಣೆ ಕರ್ತವ್ಯದ ಜೊತೆಗೆ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಪ್ರತಿ ಕಂದಾಯ ತಾಲೂಕಿನಲ್ಲಿ ಕನಿಷ್ಠ ಮೂರು ಎಫ್.ಎಸ್.ಟಿ ತಂಡಗಳು ಇರುತ್ತವೆ. ಎಲ್ಲ ನಿಯೋಜಿತ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಚುನಾವಣೆ ಘೋಷಣೆಯಾದ ಕ್ಷಣದಿಂದ ಮತದಾನ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾಗುವ ವರೆಗೂ ಯೋಜಿತ ತಂಡಗಳು 24*7 ಕಾರ್ಯ ನಿರ್ವಹಿಸಬೇಕು.

ಹಣ, ಮದ್ಯ ಹಂಚಿಕೆ ಹಾಗೂ ಬೆದರಿಕೆ ಸೇರಿದಂತೆ ಅನೇಕ ಸವಾಲುಗಳು ಎದುರಾಗಬಹುದು. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುವುದು ಹಾಗೂ ಮತದಾರರಿಗೆ ಹಣದ ಆಮಿಷ ಒಡ್ಡುವುದು ಕಂಡುಬಂದಲ್ಲಿ ತಕ್ಷಣ ಮೇಲಾಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ದೂರುಗಳಿಗೆ ತಕ್ಷಣ ಸ್ಪಂದಿಸಬೇಕು:

ಪಕ್ಷ ಮತ್ತು ಸ್ಪರ್ಧಾಳು ಅಭ್ಯರ್ಥಿಗೆ ಸಂಬಂಧಿಸಿದ ನಿಯಮಬಾಹಿರ ಖರ್ಚುವೆಚ್ಚಗಳ ಕುರಿತು ದೂರುಗಳು ಸ್ವೀಕರಿತಗೊಂಡಲ್ಲಿ, ತಕ್ಷಣವೇ ಅಂತಹ ದೂರುಗಳನ್ನು ಪರಿಶೀಲನೆ ನಡೆಸಿ ನಿಜ ಎಂದು ಕಂಡುಬಂದಲ್ಲಿ, ನಿಯಮಾನುಸಾರ ಸಂಬಂಧಿಸಿದ ವ್ಯಾಪ್ತಿ ಪ್ರದೇಶದ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಕ್ರಮವಹಿಸಬೇಕು ಎಂದು ನಿಯೋಜಿತ ಅಧಿಕಾರಿಗಳಿಗೆ ತಿಳಿಸಿದರು.

ನಿರಂತರ ಪರಿಶೀಲನೆ ನಡೆಸಬೇಕು:

ಸಭೆ, ಸಮಾರಂಭ ಹಾಗೂ ಸಾಮೂಹಿಕವಾಗಿ ಮತದಾರರು ಸೇರುವ ಸ್ಥಳಗಳನ್ನು ಪರಿಶೀಲನೆ ನಡೆಸಬೇಕು. ಅನಾಮಧೇಯ ಕರೆಗಳು ಮತ್ತು ದೂರುಗಳು ಬಂದಲ್ಲಿ ಅವುಗಳಿಗೆ ತಕ್ಷಣವೇ ಸ್ಪಂದಿಸಿ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ವಿಡಿಯೋಗ್ರಾಫಿ ಸಾಕ್ಷಿ ಸಮೇತ ಪ್ರತಿನಿತ್ಯ ನಮೂನೆಗಳಲ್ಲಿ ವರದಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು

ಪಕ್ಷಗಳು ಮತ್ತು ಅಭ್ಯರ್ಥಿಗಳು ಧರ್ಮ, ಜಾತಿ, ಭಾμÉ ಸೇರಿದಂತೆ ವಿವಿಧ ನಿಯಮ ಬಾಹಿರ ರೀತಿಯಲ್ಲಿ ಮತ ಯಾಚನೆ ಮಾಡಬಾರದು ಹಾಗೂ ಪ್ರಚೋದನಕಾರಿ ಹೇಳಿಕೆಯ ಮೂಲಕ ಮತದಾರರನ್ನು ಪೂರೈಸುವುದು ಕಂಡುಬಂದಲ್ಲಿ ತಕ್ಷಣ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತರಬೇತಿಯಲ್ಲಿ ಶಿರಗಾಂವಕರ ತಿಳಿಸಿದರು.

ಈ ವೇಳೆ ಮಾತನಾಡಿದ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಅವರು ಸೆಕ್ಟರ್ ಅಧಿಕಾರಿಗಳು, ಪ್ಲೇಯಿಂಗ್ ಸ್ಕಾಡ, ವಿಡಿಯೋ ವಿವಿಂಗ್ ಟಿಮ್ ಹಾಗೂ ವಿಡಿಯೋ ಸರ್ವೆಲೆನ್ಸ್ ಟೀಮ್ ಗಳು ನಿರಂತರ ಸಕ್ರಿಯವಾಗಿರಬೇಕು. ಪರಿಶೀಲನೆಯ ಪ್ರತಿ ಸಾಕ್ಷಿಗಳನ್ನು ವಿಡಿಯೋ ಮೂಲಕ ತಪ್ಪದೇ ಸಂಗ್ರಹಿಸಬೇಕು.

ಯಾವುದೇ ತೊಂದರೆಗಳು ಎದುರಾದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಸಂಬಂಧಿಸಿದ ತಹಶೀಲ್ದಾರ ಕಚೇರಿಯಲ್ಲಿ ದೂರು ನೋಂದಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ರವೀಂದ್ರ ಗಡಾದಿ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿಲಾದ ವಿವಿಧ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.////

 

ಅಕ್ರಮ ತಂಬಾಕು ಮಾರಾಟ: 47 ಪ್ರಕರಣಗಳು ದಾಖಲು

ಬೆಳಗಾವಿ,ಮೇ.17: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸೋಮವಾರ(ಮೇ.16) ಬೆಳಗಾವಿ ನಗರದ ಆರ್‍ಟಿಒ ಸರ್ಕಲ್ ಹತ್ತಿರ ಅಕ್ರಮವಾಗಿ ತಂಬಾಕು ಮಾರಾಟ ಮಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ದಾಳಿ ನಡೆಸಿ ದಂಡ ವಿಧಿಸಿದ ಅಧಿಕಾರಿಗಳು ಒಟ್ಟು 47 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಜನರಲ್ಲಿ ತಂಬಾಕು ದುಷ್ಪರಿಣಾಮ, ಅಕ್ರಮ ಮಾರಾಟದ ಬಗ್ಗೆ ಜಾಗೃತಿ ಮೂಡಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣಾಧಿಕಾಗಳ ಮಾರ್ಗದರ್ಶನದಡಿ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಬಿ.ಎನ್. ತುಕ್ಕಾರ, ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ, ಸಮಾಜ ಕಾರ್ಯಕರ್ತೆ ಕವಿತಾ ರಾಜನ್ನವರ, ಆರೋಗ್ಯ ಇಲಾಖೆ ಸಿಬ್ಬಂದಿ ಉದಯ ಹೀರೆಮಠ ಹಾಗೂ ಪೊಲೀಸ ಸಿಬಂದ್ದಿಗಳು ಜೆ. ಎಮ್ ಮಗದುಮ್ ಭಾಗಿಯಾಗಿದ್ದರು.////

 

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಕಾಮಗಾರಿ: ಸೆ.24 ರಿಂದ ಕೇಂದ್ರಗುಣ ನಿಯಂತ್ರಣ ಪರಿವೀಕ್ಷಕರಿಂದ ಪರಿಶೀಲನೆ

 

ಬೆಳಗಾವಿ,ಮೇ.17: ಬೆಳಗಾವಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪರಿವೀಕ್ಷಣೆಗಾಗಿ ರಾಷ್ಟ್ರೀಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ನಿಯೋಜಿತರಾಗಿರುವ ಕೇಂದ್ರ ಗುಣ ನಿಯಂತ್ರಣ ಪರಿವೀಕ್ಷಕರಾದ ಶೇಖ ಎ.ಎಚ್ ಇವರು ಮೇ.19 ರಿಂದ ಮೇ.25 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ.

ಪ್ಯಾಕೇಜ್ ನಂಬರ್ ಕೆ.ಎನ್.04-104ಎಂ.ಆರ್.ಎಲ್03 ರಾಯಬಾಗ ಅಂಬೇಡ್ಕರ ನಗರದಿಂದ ಚಿಂಚಲಿ ವ್ಹಾಯಾ ಜಲಾಲಪೂರ, ಭೀರಡಿ ಕೆಎನ್04-116ಎಂಆರ್‍ಎಲ್18-ಚಿಕ್ಕಲಾಗುಡ್ಡದಿಂದ ಅಂದಾಪೂರ ಆರ್.ಸಿ.ವ್ಹಾಯಾ ತುದಿಮಳ ತೋಟ, ಉಳ್ಳಾಗಡ್ಡಿ ಖಾನಾಪೂರ, ಗಿರಿನಗರ.ಕೆಎನ್.04-121 ಎಂಆರ್‍ಎಲ್08 ಖಡಕಲಾಟದಿಂದ ಗೌರಾಯಿಮರಡಿ ವ್ಹಾಯಾ ಚಿಕಲವಾಳ.ಕೆಎನ್.04-122 ಎಂಆರ್‍ಎಲ್11-ಗವನದಿಂದ ಎಮ್‍ಎನ್‍ರಸ್ತೆ(ಮಠ ಗೌಡವನ).ಕೆಎನ್04-123 ಎಂಆರ್‍ಎಲ್ 28- ಬಂಬಲವಾಡದಿಂದ ಚನ್ನವೀರಹಟ್ಟಿ ವ್ದಾಯಾ ಖರಗಾಂವ. ಕೆಎನ್04-127ಎಂಆರ್‍ಎಲ್01-ಕುರಬರಹಟ್ಟಿ-ಬಸ್ತವಾಡದಿಂದ ಹಲಗಾ ರಸ್ತೆ. ಕೆಎನ್ 04-142ಎಂಆರ್‍ಎಲ್35 ಮುಚ್ಚಂಡಿ-ಬುದ್ಯಾನೂರದಿಂದ ಕಾರಾವಿ ವರೆಗೆನ ನಿರ್ಮಾಣ ಹಂತ ಮತ್ತು ನಿರ್ಮಾಣಗೊಂಡಿರುವ ರಸ್ತೆಗಳ ಪರಿವೀಕ್ಷಣೆ ಕೈಗೊಳ್ಳಲಿದ್ದಾರೆ ಎಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

110 ಕೆ.ವ್ಹಿ. ಮಚ್ಛೆ ಉಪಕೇಂದ್ರ: ಮೇ.18ರಂದು ವಿದ್ಯುತ್ ವ್ಯತ್ಯಯ

 

ಬೆಳಗಾವಿ,ಮೇ.17: ಹುವಿಸಕಂನಿ ವತಿಯಿಂದ ಬುಧವಾರ(ಮೇ.18) ವಿದ್ಯುತ್ ಪರಿವರ್ತಕ ನಿರ್ವಹಣಾ ಅಭಿಯಾನ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಮಚ್ಛೆ ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್‍ನಲ್ಲಿ ವ್ಯತ್ಯಯ ಆಗಲಿದೆ.

ಬೆಳಗಾವಿ ತಾಲೂಕಿನ ದತ್ತ ನಗರ, ನಾವಗೇಕರ ನಗರ, ಹವಳ ನಗರ, ಗೋಡಸೆ ಕಾಲನಿ, ಓಂಕಾರ ನಗರ, ಮಚ್ಛೆ, ಝಾಡಶಾಪೂರ, ದೇಸೂರ, ಸುಸ್ಗ್ಯಾನಟ್ಟಿ, ಬಳಗಾಮಟ್ಟಿ, ಕುಟ್ಟಲವಾಡಿ, ಬಾಮನವಾಡಿ, ನಾವಗೆ, ಜಾನೇವಾಡಿ, ಬಾದರವಾಡಿ, ರಣಕುಂಡೆ, ಕರ್ಲೇ, ಕಿನಯೇ, ಸಂತಿ ಬಸ್ತವಾಡ, ಕಾಳೇನಟ್ಟಿ, ಸಂಭಾಜಿ ನಗರ, ವಾಘವಾಡೆ, ರಂಗಧೋಳಿ, ಮಾರ್ಕಂಡೇಯ ನಗರ, ವಾಲ್ಮೀಕಿ ನಗರ, ತೀರ್ಥಕುಂಡೆ, ಹುಂಚ್ಯಾನಟ್ಟಿ, ನಾವಗೆ, ವಾಘವಾಡೆ ಹಾಗೂ ಮಚ್ಚೆ ಔದ್ಯೋಗಿಕ ಕ್ಷೇತ್ರಗಳಿಗೆ ಹಾಗೂ ಖಾನಾಪೂರ ತಾಲೂಕಿನ ಉಚವಡಾ, ಕುಸಮಳಿ, ಬೈಲೂರ, ಮೊರಬ, ಜಾಂಬೋಟಿ, ಓಲಮನಿ, ವಡಗಾಂವ, ದಾರೋಳಿ, ಚಾಪೋಲಿ, ಕಾಪೋಲಿ, ಮುಡವಿ, ಹಬ್ಬಾನಟ್ಟಿ, ದೇವಾಚಿಹಟ್ಟಿ, ತೋರಾಳಿ, ಗೋಲ್ಯಾಳಿ, ಬೆಟಗೇರಿ, ತಳೇವಾಡಿ, ಅಮಟೆ, ಕಾಲಮನಿ, ಚಿಕಲೆ, ಕಣಕುಂಬಿ, ಗವಸೆ, ಅಮಗಾಂವ, ಬೇಟ್ನೆ, ಪಾರವಾಡ, ಚಿಗುಳೆ, ಮಾನ, ಸಡಾ, ಚೋರ್ಲಾ, ಹಳೆ ಹಾಗೂ ಹೊಸ ಹುಳಂದ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‍ಸೆಟ್‍ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯ ಮತ್ತು ಪಾಲನಾ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯ ನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಕಾನೂನು ಪದವಿಧರರಿಗೆ ತರಬೇತಿ: ಎಸ್‍ಸಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

 

ಬೆಳಗಾವಿ,ಮೇ.17:2022-23 ನೇ ಸಾಲಿಗೆ ಬೆಳಗಾವಿ ಜಿಲ್ಲೆಯ ಪರಿಶಿಷ್ಟ ಜಾತಿಯ ಕಾನೂನು ಪದವಿಧರರಿಗೆ ಆಡಳಿತ ನ್ಯಾಯಾಧಿಕರಣದಲ್ಲಿ ತರಬೇತಿ ನೀಡುವ ಕುರಿತು ಅರ್ಹ ಅಭ್ಯರ್ಥಿಗಳಿಂದ ಷರತ್ತು/ನಿಬಂಧನೆಗೆ ಒಳಗೊಂಡಂತೆ ಮೊದಲ ತಂಡದಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಸಾಮಾಜಿಕ ವೆಬ್‍ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ. ಭೇಟಿ ನೀಡಬಹುದು. ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಪ್ರಿಟ್ ತೆಗೆದುಕೊಂಡು ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸಮಾಜ ಕಲ್ಯಾಣ ಇಲಾಖೆ 1ನೇ ಮಹಡಿ ನೆಹರುನಗರ ಬೆಳಗಾವಿ-590010 ಇವರಿಗೆ ಖುದ್ದಾಗಿ ಅಥವಾ ಅಂಚೆ ಮುಖಾಂತರ ಜೂನ್ 30 2022ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ದೂರವಾಣ ಸಂಖ್ಯೆ 0831-2407245ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///