ಒಂದೇ ಚಾರ್ಜಿಂಗ್ ನಲ್ಲಿ 200 ಕಿ.ಮೀ. ಓಡಿದ ಓಲಾ ಸ್ಕೂಟರ್….

ಮುಂಬೈ: ಕಳೆದ ಹಲವು ತಿಂಗಳಿಂದ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿ, ಸಾಫ್ಟ್ ವೇರ್ ನಲ್ಲಿನ ದೋಷ ಕಂಡು ಬಂದು ಹೈರಾಣಾಗಿದ್ದ ಓಲಾ ಕಂಪನಿಗೆ ಒಂದು ಸಂತಸದ ವಿಚಾರ ಬಂದಿದೆ.
ಕಾರ್ತೀಕ್ ಎಂಬುವರು Ola S1 Pro ಮಾಲೀಕರಾಗಿದ್ದು, ಒಂದೇ ಬಾರಿ ಮಾಡಿದ್ದ ಚಾರ್ಜ್ ನಲ್ಲಿ 202 ಕಿಲೋಮೀಟರ್ ದೂರವನ್ನು ಕ್ರಮಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಇದೊಂದು ಭಾರತದ ಅತ್ಯುತ್ತಮವಾದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ತೀಕ್ ತಾವು ಸಾಧನೆ ಮಾಡಿದ್ದರ ಬಗ್ಗೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಸರಾಸರಿ ಪ್ರತಿ ಗಂಟೆಗೆ 27 ಕಿಲೋಮೀಟರ್ ಮತ್ತು ಪ್ರತಿಗಂಟೆಗೆ 48 ಕಿಲೋಮೀಟರ್ ಅತ್ಯಧಿಕ ವೇಗದೊಂದಿಗೆ ಈ ಸಾಧನೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಟ್ವೀಟ್ ನೋಡುತ್ತಿದ್ದಂತೆಯೇ ಹರ್ಷದಲ್ಲಿ ಮುಳುಗೆದ್ದಿರುವ ಓಲಾ ಎಲೆಕ್ಟ್ರಿಕ್ ನ ಸಿಇಒ ಭವೀಶ್ ಅಗರ್ವಾಲ್ ಅವರು, ಕಾರ್ತೀಕ್ ಅವರ ಟ್ವಿಟರ್ ಪೋಸ್ಟ್ ಅನ್ನು ಹಂಚಿಕೊಂಡಿದ್ದು, “ಕಾರ್ತೀಕ್ ನೀವೊಬ್ಬ ಕ್ರಾಂತಿಕಾರಿ. ಸಿಂಗಲ್ ಚಾರ್ಜ್ ನಲ್ಲಿ ನೀವು 200 ಕಿಲೋಮೀಟರ್ ಗಡಿಯನ್ನು ದಾಟುವ ಮೂಲಕ ಮಹತ್ಸಾಧನೆ ಮಾಡಿದ್ದೀರಿ” ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲ, ಭವೀಶ್ ಅವರು ಕಾರ್ತೀಕ್ ಗೆ ಮತ್ತೊಂದು ಹೊಸ Ola S1 Pro ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿಮಗೆ ಭರವಸೆ ನೀಡಿದಂತೆ ನಿಮಗಾಗಿ ಹೊಸ Ola S1 Pro ಕಾಯುತ್ತಿದೆ ಎಂದು ಹೇಳಿದ್ದಾರೆ./////c