Belagavi News In Kannada | News Belgaum

1200 ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಮಾಡಿದ ಕೆಜಿಎಫ್ 2

ಬೆಂಗಳೂರು: ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದೆ. ಯಶ್ ಸಿನಿಮಾ, ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 1200 ಕೋಟಿ ಕಲೆಕ್ಷನ್ ಮಾಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ನ್ಯಾಷನಲ್ ಸ್ಟಾರ್ ಯಶ್ `ಕೆಜಿಎಫ್ 2′ ಮೂಲಕ ದೇಶದ ಎಲ್ಲಾ ಚಿತ್ರಮಂದಿರದಲ್ಲೂ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಇನ್ನು ರಾಕಿಭಾಯ್ ಚಿತ್ರ ಥಿಯೇಟರ್‌ಗೆ ಲಗ್ಗೆಯಿಟ್ಟು 1 ತಿಂಗಳು ಕಳೆದರು, ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇತ್ತೀಚೆಗಷ್ಟೇ ಭಾರತದಲ್ಲಿ 1000 ಸಾವಿರ ಕೋಟಿ ಬಾಚಿತ್ತು. ಈಗ 1200 ಕೋಟಿ ಕಲೆಕ್ಷನ್ ಮಾಡಿ, ನ್ಯೂ ರೆಕಾರ್ಡ್ ಬ್ರೇಕ್ ಮಾಡಿದೆ.
ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬೀನೇಷನ್ ಸಿನಿಮಾಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ ಅನ್ನೋದಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಸಾಕ್ಷಿ. ಇದೀಗ 1200 ಕೋಟಿ ಕಲೆಕ್ಷನ್ ಮಾಡಿ, ಮುನ್ನುಗ್ಗುತ್ತಿದೆ. ಇನ್ನು ಆಮೀರ್ ಖಾನ್ ದಂಗಲ್ ಮತ್ತು ಪ್ರಭಾಸ್ ನಟನೆಯ `ಬಾಹುಬಲಿ 2′ ಚಿತ್ರದ ನಂತರ 1200 ಕೋಟಿ ಗಳಿಕೆ ಮಾಡಿದ ಭಾರತದ ಮೂರನೇ ಸಿನಿಮಾ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.
ಸಾವಿರ ಕೋಟಿ ಕ್ಲಬ್‌ನಲ್ಲಿ ದಂಗಲ್ ಸಿನಿಮಾ ಮೊದಲ ಸ್ಥಾನದಲ್ಲಿದೆ. ಬಾಹುಬಲಿ ಮತ್ತು ಆರ್‌ಆರ್‌ಆರ್ ಸಿನಿಮಾ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದರೆ, ಇದೀಗ ಕನ್ನಡದ `ಕೆಜಿಎಫ್ 2′ ನಾಲ್ಕನೇ ಸ್ಥಾನದಲ್ಲಿದೆ.//////c