Belagavi News In Kannada | News Belgaum

ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ

ಬೆಂಗಳೂರು: ಪ್ರಸಕ್ತ ವರ್ಷದಿಂದ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಪಿಯು ಬೋರ್ಡ್‌ ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಿದೆ.
2022-23ನೇ‌ ಸಾಲಿನ‌ ಶೈಕ್ಷಣಿಕ ವರ್ಷಕ್ಕೆ ಪಿಯು ಬೋರ್ಡ್‌ ಕಾಲೇಜು ಪ್ರವೇಶ ಸಂಬಂಧ 128 ಪುಟಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕಾಲೇಜು ಅಭಿವೃದ್ಧಿ ಸಮಿತಿ‌ ನಿಗದಿ ಮಾಡಿರುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು. ಒಂದು ವೇಳೆ ಸಮವಸ್ತ್ರ ನಿಯಮ ‌ಇಲ್ಲದೆ ಇದ್ದರೆ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತಹ ವಸ್ತ್ರ ಧರಿಸಬೇಕು ಎಂದು ಹೇಳಿದೆ. ಹೈಕೋರ್ಟ್ ತೀರ್ಪಿನ ಅನ್ವಯ ಸಮವಸ್ತ್ರ ಧರಿಸುವಂತೆ ಸೂಚಿಸಿದೆ.
ಹಿಜಾಬ್‌ ವಿವಾದದ ಹಿನ್ನಲೆಯಲ್ಲಿ ಈ ವರ್ಷ ಮಾರ್ಗಸೂಚಿಯಲ್ಲಿ ಸಮವಸ್ತ್ರದ ಬಗ್ಗೆ ಶಿಕ್ಷಣ ಇಲಾಖೆ ಉಲ್ಲೇಖ ಮಾಡಿದೆ. ಕಳೆದ ವರ್ಷದ ಮಾರ್ಗಸೂಚಿಯಲ್ಲಿ ಸಮವಸ್ತ್ರದ ಬಗ್ಗೆ ಉಲ್ಲೇಖ ಮಾಡಿರಲಿಲ್ಲ. ಈ ವರ್ಷ ಹೈಕೋರ್ಟ್ ಆದೇಶದ ಮೇಲೆ ಮಾರ್ಗಸೂಚಿಯಲ್ಲಿ ಸಮವಸ್ತ್ರ ಕಡ್ಡಾಯದ ಬಗ್ಗೆ ಪಿಯುಸಿ ಬೋರ್ಡ್ ಉಲ್ಲೇಖ ಮಾಡಿದೆ.////