Belagavi News In Kannada | News Belgaum

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಬೀದರ್: ಸಹೋದರಿಯನ್ನು ಪ್ರೀತಿಸಿದ್ದಕ್ಕೆ ಸಹೋದರನೊಬ್ಬ ಯುವಕನಿಗೆ ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿದ ಘಟನೆ ನಗರದ ಸಿಂಗಾರ್ ಬಾಗ್‍ನಲ್ಲಿ ನಡೆದಿದೆ.

ಅಮೀರ್ ಖಾನ್ (20) ಕೊಲೆಗೀಡಾದ ಯುವಕ. ಹುಡುಗಿಯ ಅಣ್ಣ ಜೀಷನ್ ಚಾಕುವಿನಿಂದ ಇರಿದು ಕೊಲೆ ಮಾಡಿದ ವ್ಯಕ್ತಿ. ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿವೆ.
ಈಗಾಗಲೇ ಹುಡುಗಿಯ ಮದುವೆಯಾಗಿದ್ದರೂ ಪ್ರೀತಿ ಮಾಡುವಂತೆ ಯುವಕ ಪದೇ ಪದೇ ಪಿಡಿಸುತ್ತಿದ್ದ. ಇದರಿಂದ ರೋಸಿ ಹೋದ ಹುಡುಗಿ ಅಣ್ಣ ಚಾಕುವಿಂದ ಇರಿದು ಕೊಲೆ ಮಾಡಿದ್ದಾನೆ.   ಮಗನ ಕೊಲೆ ಕುರಿತು ತಾಯಿ ಶಾಯಿನ್ ಬೇಗಂ ನಗರದ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ./////