Belagavi News In Kannada | News Belgaum

ಚಿಂಚಲಿ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಬೆಳಗಾವಿ: ಐದು ಸಾವಿರ ರೂ. ಲಂಚ ಸ್ವಿಕರಿಸುವಾಗ  ಚಿಂಚಲಿ ಗ್ರಾಮ ಲೆಕ್ಕಾಧಿಕಾರಿ  ಎಸಿಬಿ ಬಲೆಗೆ ಬಿದ್ದಿದ್ದಾರೆ.

ಚಿಂಚಲಿ ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರು ಎಸಿಬಿಯಿಂದ ಬಂಧಿತ ಗ್ರಾಮ ಲೆಕ್ಕಾಧಿಕಾರಿ. ಸಚೀನ ಶಾಂತಿನಾಥ ಶಿಂಧೆ ಸಾ. ಗಣಕೋಡಿ ತೋಟ ಶಿರಗೂರ ರಸ್ತೆ, ಚಿಂಚಲಿ ತಾ.  ರಾಯಬಾಗ ಎಸಿಬಿ ಪೊಲೀಸ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದರು. ತಮ್ಮ ಜಮೀನಿಗೆ ಸೇರಿದ ರಾಯಬಾಗ ತಹಶೀಲ್ದಾರ್‌ ಕಚೇರಿಯಿಂದ ಬಂದಿರುವ ಜೇ ಫಾರಂಗೆ ಅವರ ಕುಟುಂಬದವರ ಸಹಿ ಪಡೆದು ವರದಿ ಸಲ್ಲಿಸಲು ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರು 5000 ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿದ್ದರು.

ಅದರಂತೆ ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರು 5000 ರೂ. ಹಣವನ್ನು ಫಿರ್ಯಾದಿಯಿಂದ ಸ್ವಿಕರಿಸುವ ಸಂದರ್ಭದಲ್ಲಿ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿಗ್ರಾಮ ಲೆಕ್ಕಾಧಿಕಾರಿ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ./////