ಶಾಲಾ ನಿರ್ಮಾಣ ದುರಸ್ತಿಗೆ18.53 ಕೋಟಿ ಅನುದಾನ: ಸಿಇಓ ದರ್ಶನ್ ಹೆಚ್.ವ್ಹಿ

ಶಾಲಾ ನಿರ್ಮಾಣ ದುರಸ್ತಿಗೆ18.53 ಕೋಟಿ ಅನುದಾನ: ಸಿಇಓ ದರ್ಶನ್ ಹೆಚ್.ವ್ಹಿ
ಬೆಳಗಾವಿ,ಮೇ.18: 2021-22 ನೇ ಸಾಲಿನಲ್ಲಿ ಜಿಲ್ಲಾ ಮತ್ತು ತಾಲೂಕ ಪಂಚಾಯತ ಅನಿರ್ಬಂಧಿತ ಅನುದಾನ ಹಾಗೂ 15 ನೇ ಹಣಕಾಸು ಯೋಜನೆಯಡಿ ಅಂದಾಜು ರೂ.18.53 ಕೋಟಿ ಅನುದಾನದಲ್ಲಿ ಶಿಕ್ಷಣ ಇಲಾಖೆಯ 621 ಸರ್ಕಾರಿ ಪ್ರಾಥಮಿಕ ಹಾಗೂ 58 ಪ್ರೌಢಶಾಲೆಗಳಿಗೆ ಕೊಠಡಿಗಳ ನಿರ್ಮಾಣ/ದುರಸ್ತಿ, ಡೆಸ್ಕ್ ಮತ್ತು ಸ್ಮಾರ್ಟ ಕ್ಲಾಸ್ ನಿರ್ಮಾಣ, ನೀರಿನ ವ್ಯವಸ್ಥೆ ಕಲ್ಪಿಸುವುದು, ಸಿ.ಸಿ ಟಿ.ವಿ ಅಳವಡಿಕೆ ಹಾಗೂ ಶಾಲಾ ಶೌಚಾಲಯ ನಿರ್ಮಾಣ/ದುರಸ್ತಿ ಇತರೆ ಸುಮಾರು 2156 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಅಂದಾಜು ರೂ.20.04 ಕೋಟಿ ಅನುದಾನದಲ್ಲಿ 794 ಅಂಗನವಾಡಿಗಳಿಗೆ ಸ್ಮಾರ್ಟ ಕ್ಲಾಸ್, ಪಿಠೋಪಕರಣ, ಆಟಿಕೆ ಸಾಮಗ್ರಿ ಮತ್ತು ಕಲಿಕೋಪಕರಣಗಳು, ನೀರಿನ ವ್ಯವಸ್ಥೆ, ವಿದ್ಯುತ್ತೀಕರಣ, ಮಕ್ಕಳ ಆಕರ್ಷಣೆಯ ಚಿತ್ರ ಬಿಡಿಸುವುದು, ಅಂಗನವಾಡಿ ಕಟ್ಟಡ ನಿರ್ಮಾಣ/ದುರಸ್ತಿ ಮುಂತಾದ ಸುಮಾರು 2711 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ, ರೂ.9.02 ಕೋಟಿ ಅನುದಾನದಲ್ಲಿ, 42 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ/ದುರಸ್ತಿ, ನೀರಿನ ವ್ಯವಸ್ಥೆ ಹಾಗೂ ಪ್ಲಂಬಿಗ್ ಹಾಗೂ ಇತರೆ ಸುಮಾರು 334 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ ತಿಳಿಸಿದ್ದಾರೆ.