ಆಕಸ್ಮಿಕವಾಗಿ ಕುಸಿದು ಬಿದ್ದು ಐಬಿ ಅಧಿಕಾರಿ ಸಾವು

ಹೈದರಾಬಾದ್: ತೆಲಂಗಾಣದ ಪ್ರದೇಶವೊಂದರಲ್ಲಿ ನೇಮಕಗೊಂಡ ಗುಪ್ತಚರ ಇಲಾಖೆಯ (ಐಬಿ) ಅಧಿಕಾರಿಯೊಬ್ಬರು ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಬಿದ್ದ ಪರಿಣಾಮ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಐಬಿ ಸಹಾಯಕ ನಿರ್ದೇಶಕ ಅಮರೀಶ್ (51) ಮೃತ ಅಧಿಕಾರಿ. ಅಮರೀಶ್ ಅವರು ಬುಧವಾರ ಮಧ್ಯಾಹ್ನ ಹೈದರಾಬಾದ್ನ ಮಾದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿಲ್ಪ ಕಲಾ ವೇದಿಕೆಯಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದಿದ್ದಾರೆ.
ಪ್ರಮುಖ ವ್ಯಕ್ತಿಯೊಬ್ಬರ ಭೇಟಿಗಾಗಿ ಸಭಾಂಗಣದಲ್ಲಿ ಭದ್ರತಾ ತಪಾಸಣೆ ನಡೆಸುತ್ತಿದ್ದ ಅವರು ಆಕಸ್ಮಿಕವಾಗಿ ಮೆಟ್ಟಿಲುಗಳಿಂದ ಜಾರಿಬಿದ್ದು ತಲೆಗೆ ಗಂಭೀರ ಗಾಯಗಳಾಗಿವೆ.
ಈ ವೇಳೆ ಅಧಿಕಾರಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾರೆ./////