Belagavi News In Kannada | News Belgaum

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿಕಲಚೇತನ ವಿದ್ಯಾರ್ಥಿಗಳು

ಬೆಳಗಾವಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಬೆಳಗಾವಿಯ ಕಿವುಡ ಮಕ್ಕಳ ಸರ್ಕಾರಿ ಶಾಲೆಯ 11 ವಿದ್ಯಾರ್ಥಿನಿಯರಲ್ಲಿ ಎಂಟು ಜನ A  ಗ್ರೇಡ್ ,2 ಜನ  B  ಗ್ರೇಡ್ ಒಬ್ಬರು C  ಗ್ರೇಡ್ ಪಡೆದು ಉತ್ತೀರ್ಣರಾಗಿದ್ದಾರೆ.

ಪ್ರತಿಭಾ ಹಣ ಮಂತ ಹೊನ್ನಾಪುರ ಶೇ. 87 ಪ್ರಥಮ,  ಪವಿತ್ರ ಪರಪ್ಪ ಕಾಪ್ಸೆ ಶೇ. 86. ದ್ವಿತೀಯ ರುದ್ರಾಕ್ಷಿ ಸಂಗೊಳ್ಳಿ ಶೇ. 85 ತೃತೀಯ ಸ್ಥಾನವನ್ನು ಪಡೆದು ಶಾಲೆ ಗೆ ಕೀರ್ತೀ ತಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜು ಎ ಎಂ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ನಾಮದೇವ್ ಬಿಲ್ಕರ್, ಶಾಲೆಯ ಪ್ರಭಾರಿ ಅಧೀಕ್ಷಕ ಡಿ.ಎನ್. ನಂದೇಶ್ವರ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಶುಭಕೋರಿದ್ದಾರೆ./////