Belagavi News In Kannada | News Belgaum

ಕೆಎಸ್‌ಆರ್‌ಟಿಸಿಯ ಮೆಕಾನಿಕಲ್ ಅವರ ಪುತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ವಿಭಾಗೀಯ ಕೆ ಎಸ್ ಆರ್ ಟಿಸಿಯಲ್ಲಿ ಉಗ್ರಾಣ ಮೆಕಾನಿಕಲ್ ಆಗಿರುವಂತವರ ಪುತ್ರಿಯೊಬ್ಬರು, ಇಂದು ಪ್ರಕಟಗೊಂಡಂತ ಎಸ್ ಎಸ್ ಎಲ್ ಸಿ ಪರೀಕ್ಷೆ  ಫಲಿತಾಶದಲ್ಲಿ 625ಕ್ಕೆ 625 ಅಂಕ ಗಳಿಸಿದ್ದಾಳೆ. ಈ ಮೂಲಕ ರಾಜ್ಯಕ್ಕೆ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದಾಳೆ.
ಈ ಕುರಿತು ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಸಾರಿಗೆ ಸಚಿವ ಬಿ ಶ್ರೀರಾಮುಲು, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕೃಷಿಕರಾದ ಶ್ರೀ ಆರ್. ರಂಗನಾಥ್ ಹಾಗೂ ಹಿರಿಯೂರು ವಿಭಾಗೀಯ ಉಗ್ರಾಣದ ಮೆಕಾನಿಕ್ ದರ್ಜೆ- 2 ರ  ಎಸ್. ಸರ್ವಮಂಗಳ ದಂಪತಿಗಳ ಪುತ್ರಿಯಾದ ಕು. ಸೃಷ್ಟಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು, 625 ಕ್ಕೆ 625 ಅಂಕ ಪಡೆದಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ./////