Belagavi News In Kannada | News Belgaum

ವಿಮಾನ ಹಾರುತ್ತಿರುವಾಗಲೇ ಇಂಜಿನ್​ ಆಫ್: ಪ್ರಯಾಣಿಕರಿಗೆ ಹೆಚ್ಚಿದ ಆತಂಕ

ನವದೆಹಲಿ: ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಟಾಟಾ ಗ್ರೂಪ್​ ಒಡೆತನದ ಎ-320ನಿಯೋ ಏರ್​ ಇಂಡಿಯಾ ವಿಮಾನದ ಇಂಜಿನ್​ ಹಾರಾಟದ ಸಂದರ್ಭದಲ್ಲಿಯೇ ‘ಆಫ್’​ ಆಗಿರುವ ಘಟನೆ ನಡೆದಿದೆ.
ಹಾರಾಟದ ಸಮಯದಲ್ಲಿ ಇಂಜಿನ್​ ಆಫ್​ ಆಗಿದೆ. ವಿಮಾನವು ಟೇಕ್​ ಆಫ್​ ಆದ 27 ನಿಮಿಷದಲ್ಲಿ ಇಂಜಿನ್​ ಸ್ಥಗಿತವಾಗಿದ್ದರಿಂದ ಮರಳಿ ಮುಂಬೈ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಬೆಳಗ್ಗೆ 9:43ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕ್​ ಆಫ್​ ಆಗಿತ್ತು. ಮಾರ್ಗಮಧ್ಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಇಂಜಿನ್​ ಸ್ಥಗಿತವಾಗಿದೆ. ಕೂಡಲೇ ಪೈಲಟ್​ ವಿಮಾನವನ್ನು​ ಮುಂಬೈ ಏರ್​ಪೋರ್ಟ್​ನಲ್ಲೇ 10:10ರ ಸಮಯಕ್ಕೆ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.ಈ ಘಟನೆಯ ನಂತರ ಬೇರೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಬೆಂಗಳೂರಿಗೆ ಕರೆ ತರಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯವು ತನಿಖೆಗೆ ಆದೇಶಿಸಿದೆ.//////