Belagavi News In Kannada | News Belgaum

ಕಾಶ್ಮೀರ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

ಕಾಶ್ಮೀರ: ಕಾಶ್ಮೀರ ವಿಶ್ವವಿದ್ಯಾಲಯಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಉಪಕುಲಪತಿಯನ್ನು ನೇಮಕ ಮಾಡಲಾಗಿದೆ. ಪ್ರೊಫೆಸರ್ ನಿಲೋಫರ್ ಖಾನ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಕಾಶ್ಮೀರ ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ ನೇಮಕ ಮಾಡಿ ಅಲ್ಲಿನ ಉಪ ರಾಜ್ಯಪಾಲ ಮನೋಜ್ ಸಿನ್ಹಾ ಅವರು ನೇಮಕ ಮಾಡಿದ್ದಾರೆ.

ಖಾನ್ ಅವರು ಮೇ 21, 2022 ರ ಶನಿವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರೊಫೆಸರ್ ತಲಾತ್ ಅಹ್ಮದ್ ಅವರ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿಲೋಫರ್ ಅವರನ್ನು ನೇಮಕ ಮಾಡಲಾಗಿದೆ. ನಿಲೋಫರ್ ಅವರು ಕಳೆದ 30 ವರ್ಷಗಳಿಂದ ಹೋಂ ಸೈನ್ಸ್ ನಲ್ಲಿ ಬೋಧನಾ ವೃತ್ತಿಯಲ್ಲಿ ಅನುಭವ ಹೊಂದಿದ್ದಾರೆ./////