Belagavi News In Kannada | News Belgaum

ಪಾನ್ ಮಸಾಲಾ ಜಾಹೀರಾತು: ನಾಲ್ಕು ಬಾಲಿವುಡ್ ನಟರ ವಿರುದ್ಧ ಪ್ರಕರಣ ದಾಖಲು

ಮುಜಾಫರ್‌ಪುರ: ಗುಟ್ಖಾ ಮತ್ತು ಪಾನ್ ಮಸಾಲಾ ಪ್ರಚಾರ ಮಾಡಿದ್ದಕ್ಕಾಗಿ ಮುಜಾಫರ್‌ಪುರ ಮೂಲದ ಹೋರಾಟಗಾರ ತಮನ್ನಾ ಹಶ್ಮಿ ಅವರು ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ವಿರುದ್ಧ ಚೀಫ್​ ಜ್ಯುಡಿಷಿಯಲ್​​ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನ್ಯಾಯಾಲಯವು ಮನವಿಯನ್ನು ಸ್ವೀಕರಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 467, 468, 439, ಮತ್ತು 120 ಬಿ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಾರ್ಯಕರ್ತ ತಮನ್ನಾ ಹಶ್ಮಿ ಹೇಳಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಮೇ 27 ರಂದು ನಿಗದಿಪಡಿಸಿದೆ. ಈ ಸಿನಿಮಾ ನಟರಿಗೆ ಲಕ್ಷಾಂತರ ಅನುಯಾಯಿಗಳಿದ್ದು, ಅವರ ಕಾರ್ಯಗಳಿಂದ ಪ್ರಭಾವಿತರಾಗುತ್ತಾರೆ. ಆದ್ದರಿಂದ ಅವರು ಗುಟ್ಕಾ ತಿನ್ನುವುದನ್ನು ತೋರಿಸಿದಾಗ ಅದನ್ನು ಸೇವಿಸಲು ಪ್ರಾರಂಭಿಸುತ್ತಾರೆ. ಪ್ರತಿ ವರ್ಷ ಗುಟ್ಕಾದಿಂದ ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.

ಮೊದಲು ಕಡಿಮೆ ಸಂಖ್ಯೆಯ ಜನರು ಇದಕ್ಕೆ ವ್ಯಸನಿಯಾಗಿದ್ದರು. ಆದರೆ, ಈಗ ಇದು ಹಲವಾರು ಪಟ್ಟು ಹೆಚ್ಚಾಗಿದೆ ಮತ್ತು ವಿಶೇಷವಾಗಿ ಯುವಜನರು ಬಾಧಿತರಾಗಿದ್ದಾರೆ. ಜನರು ತಮ್ಮ ಅಮೂಲ್ಯವಾದ ಜೀವನವನ್ನು ಕಳೆದುಕೊಂಡರೂ ಸಹ ಈ ನಟರು ಅದನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ./////