Belagavi News In Kannada | News Belgaum

ನೆಲೆಕಚ್ಚಿದ ಮಾವು: ಬೆಳೆಗಾರರಿಗೆ ನೋವು

ಬೆಳಗಾವಿ:  ಜಿಲ್ಲೆಯಲ್ಲಿ ಮಾವು ಇಳುವರಿ ಕಡಿಮೆ ಇರುವ ಕಾರಣ ಉತ್ತಮ ಧಾರಣೆ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮಾವಿನ ಫಸಲಿಗೆ ಅಂಟು, ಕಪ್ಪು ಜಿಗಿ ರೋಗಾಣು ಬಾಧೆ ಕಂಡು ಬಂದಿದ್ದು, ರೈತರಿಗೆ ಹಾಗೂ ಗೇಣಿದಾರರಿಗೆ ಆಘಾತ ನೀಡಿದೆ.

ರೈತರ ತೋಟಗಳನ್ನು ಗೇಣಿ ಪಡೆದ ವರ್ತಕರು ಬಿರುಸಿನ ಮಾವು ಕೊಯ್ಲು ನಡೆಸಿದ್ದಾರೆ. ಆದರೆ ಮಳೆಯಿಂದಾಗಿ ಕಾಯಿಯ ಹೊರ ಭಾಗದಲ್ಲಿ ಕಪ್ಪು ಕಲೆ ಆವರಿಸಿದೆ. ಮಳೆ ಹೆಚ್ಚಾದರೆ ಹುಳು ಬೀಳುವ ಸಾಧ್ಯತೆಯಿದ್ದು, ಇದರಿಂದಾಗಿ ಹೊರ ರಾಜ್ಯಗಳಿಗೆ ರಫ್ತು ಕಳಿಸಿದರೆ ತಿರಸ್ಕೃತಗೊಳ್ಳುತ್ತಿವೆ.
ಮಾವು ಮಾರಾಟಗಾರರು ಕೊಯ್ದ ಮಾವುಗಳನ್ನು ಮುಂಬಯಿ, ಪುಣೆಗೆ ಸರಬರಾಜು ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ಫಸಲು ತಡವಾದ ಕಾರಣ ಮಳೆಗೆ ಸಿಕ್ಕಿವೆ. ರೋಗ ಬಾಧೆಯಿಂದ ಧಾರಣೆ ಕುಸಿದಿದೆ. ಬೇಡಿಕೆಯೂ ಕುಸಿದಿದೆ. ಅಲ್ಲದೇ ರೋಗ ಬಾಧೆಯಿಂದ ಹಣ್ಣು ತಿರಸ್ಕೃತಗೊಳ್ಳುತ್ತಿವೆ. ತಮಿಳುನಾಡು, ಆಂಧ್ರ ಪ್ರದೇಶದ ಜ್ಯೂಸ್ ಫ್ಯಾಕ್ಟರಿಗಳಿಗೆ ರಫ್ತು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಮಾವು ಖರೀದಿ ಮಾಡಿದ ಮಾಲೀಕರು./////