Belagavi News In Kannada | News Belgaum

ವಿದ್ಯುತ್ ತಂತಿ ತಗುಲಿ ಯುವಕ ಸಾವು

ಗೋಕಾಕ: ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟಿರುವ ಘಟನೆ ಗೋಕಾಕ ತಾಲೂಕಿನ ಊರುಬಿನಹಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ರಮೇಶ ಶಂಕರ ಹುಲೇಪ್ಪಗೋಳ(32) ಸಾವನ್ನಪ್ಪಿರುವ ದುರ್ದೈವಿ. ತಾಲೂಕಿನ ಉರಬನಟ್ಟಿ ಗ್ರಾಮದಲ್ಲಿ ನೂತನ ಟ್ರಾನ್ಸ್​ಫಾರ್ಮ್ (ಟಿಸಿ) ಅಳವಡಿಸುವ ಸಂದರ್ಭದಲ್ಲಿ ರಮೇಶಗೆ ವಿದ್ಯುತ್‌ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಅಂಕಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////