Belagavi News In Kannada | News Belgaum

ಬಿಜೆಪಿಗೆ ತೆಲೆ ನೋವಾದ ಬೆಳಗಾವಿ ಬಣ ರಾಜಕಾರಣ

ಬೆಳಗಾವಿ: ಬೆಳಗಾವಿ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸಮರ ಶುರುವಾಗಿದ್ದು, ಎಂಎಲ್‌ ಸಿ ಚುನಾವಣೆಯ ಮೇಲೂ ಕೂಡಾ ಭಿನ್ನಮತದ ಕರಿ ಛಾಯೆ ಬಿರಲಿದೆ. ಇದು ಕೇಸರಿ ಪಕ್ಷದಲ್ಲಿಡೊಡ್ಡ ತೆಲೆನೋವಾಗಿ ಪರಿಣಮಿಸಿದೆ.

ಹೌದು. ಜೂ. 13ಕ್ಕೆ ವಾಯುವ್ಯ ಶಿಕ್ಷಕ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳಿಗೆ ನಾಯಕರ ಭಿನ್ನಮತ ಟೆನ್ಷನ್‌ ಶುರುವಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ  ರವಿಕುಮಾರ ಕರೆದಿದ್ದ ಸಭೆಗೆ 9 ಶಾಸಕರು ಗೈರು ಆಗಿದ್ದರು. ಇದು  ಪಕ್ಷದೊಳಗೆ ಬಿರುಕು ಮೂಡಿರುವುದನ್ನು ಸ್ಪಷ್ಟಪಡಿಸಿತ್ತು.

ಈಗ ಬೆಳಗಾವಿ, ವಿಜಯಪುರ, ಬಾಗಕೋಟೆ ಜಿಲ್ಲೆ ನಾಯಕರ ಜತೆಗೆ ಬೆಳಗಾವಿ ಖಾಸಗಿ ಹೋಟೆಲಿನಲ್ಲಿ ಮಹತ್ವದ ಸಭೆ ಇಂದು ನಡೆದಿದ್ದು,  ಸಭೆಗೆ ಮೂರು ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಹಾಜರಿರಬೇಕೆಂದು ಸೂಚಿಸಲಾಗಿತ್ತು. ಆದರೆ ರವಿಕುಮಾರ ನೇತೃತ್ವದಲ್ಲಿ ನಡೆದ ಸಭೆಗೆ ಶಾಸಕರಾದ ರಮೇಶ ಜಾರಕಿಹೊಳಿ, ಬಸನಗೌಡ ಯತ್ನಾಳ, ಪಿ.ರಾಜೀವ್, ದುರ್ಯೋಧನ ಐಹೊಳೆ, ಅಭಯ ಪಾಟೀಲ ಗೈರಾಗಿರುವುದು ಕೇಸರಿ ಪಕ್ಷದಲ್ಲಿ ತೆಲೆನೋವು ತರಿಸಿದೆ.

ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಜೋಶಿ ಎಂಟ್ರಿ: ಈಗ ಬೆಳಗಾವಿ ಜಿಲ್ಲೆಯ ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ  ಜೋಶಿ ನೇತೃತ್ವದಲ್ಲಿ ಶನಿವಾರ ಸಭೆ ನಡೆದಿದೆ. ಆದರೆ ಈ ಸಭೆಗೆ ಬಿಜೆಪಿ ಶಾಸಕರು ಗೈರಾಗಿರುವುದು ಇದೀಗ ಬಿಜೆಪಿಯಲ್ಲಿ ಬೇಗುದಿ ಮುಂದುವರೆದಂತಾಗಿದೆ.

ಬೆಳಗಾವಿ ಬಣ ರಾಜಕಾರಣ: ಬಾಗಲಕೋಟೆ ಹಾಗೂ ವಿಜಯಪುರ ಪ್ರಭಾವಿ ನಾಯಕ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರು ಸಭೆಗೆ ಗೈರಾಗಿರುವುದು ಬಿಜೆಪಿಯಲ್ಲಿ ಮತ್ತಷ್ಟು ತಳಮಳ ಶುರುವಾದಂತಾಗಿದೆ. ಈ ಭಾಗದ ಪ್ರಭಾರಿ ನಾಯಕ ಶಾಸಕ ರಮೇಶ ಜಾರಕಿಹೊಳಿ ಅವರು ಕೂಡಾ ಸಭೆ ಗೈರಾಗಿರುವುದು ಒಂದೇಡೆ ಈ ಚುನಾವಣೆಗೆ ಹಿನ್ನಡೆ ಆಗುವುದು ಮೆಲ್ನೋಟಕ್ಕೆ ಕಂಡು ಬರುತ್ತಿದೆ. ಇನ್ನೊಂದೆಡೆ  ಬೆಳಗಾವಿ ರಾಜಕಾರಣವು ದೊಡ್ಡ ತೆಲೆ ನೋವಾಗಿ ಪರಿಣಮಿಸಿದರೆ, ಮತ್ತೊಂದೆಡೆ ಸಚಿವ ಮುರಗೇಶ ನಿರಾಣಿ ಕುಟುಂಬದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದು  ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲವೆಂಬುದನ್ನು ಸೂಚಿಸುತ್ತಿದೆ.

ಇಂದು ನಡೆದ  ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಸಂಸದರಾದ ಮಂಗಲಾ ಅಂಗಡಿ, ಅಣ್ಣಾಹಾಸೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, , ಶಾಸಕರಾದ ಆನಂದ ಮಾಮನಿ, ಅನಿಲ್ ಬೆನಕೆ, ಮಹಾದೇವಪ್ಪ ಯಾದವಾಡ, ಶ್ರೀಮಂತ ಪಾಟೀಲ್, ಮಹೇಶ ಕುಮಟಳ್ಳಿ, ಮಹಾಂತೇಶ ದೊಡ್ಡಗೌಡರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಲಕ್ಷಣ ಸವದಿ , ಮಾಜಿ ಶಾಸಕ ಸಂಜಯ ಪಾಟೀಲ ಭಾಗಿಯಾಗಿದ್ದರು./////