Belagavi News In Kannada | News Belgaum

ಶಿಕ್ಷಕ ನೇಮಕಾತಿ ಪರೀಕ್ಷಾ ಕೇಂದ್ರಗಳಿಗೆ ಡಿಸಿ ಭೇಟಿ

ಬೆಳಗಾವಿ: ಜಿಲ್ಲಾದ್ಯಂತ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪರೀಕ್ಷಾ ಕೇಂದ್ರಗಳಿಗೆ  ಜಿಲ್ಲಾಧಿಕಾರಿ ನಿತೇಶ  ಪಾಟೀಲ ಅವರು ಶನಿವಾರ  ಭೇಟಿ ನೀಡಿದರು.

ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಹಾಗೂ ಡಿಡಿಪಿಐ ಬಸವರಾಜ ನಾಲತ್ವಾಡ ಅವರೊಂದಿಗೆ ತೆರಳಿ ವೀಕ್ಷಣೆ ಮಾಡಿದರು. ಇಂದು ಹಾಗೂ ನಾಳೆ ಜಿಲ್ಲಾದ್ಯಂತ ಈ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಶಾಂತಿ ಸುವ್ಯವಸ್ಥೆ ಗಮನ ಹರಿಸುವಂತೆ ತಿಳಿಸಿದರು.

ಬೆಳಗಾವಿ ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿ ಸುವ್ಯವಸ್ಥೆ ಪರೀಕ್ಷೆಗಳು ಜರುಗಲಿವೆ ಎಂದು ಡಿಡಿಪಿಐ ಬಸವರಾಜ ನಾಲತ್ವಾಡ ತಿಳಿದರು. 25 ಕೇಂದ್ರಗಳಲ್ಲಿ ಪರೀಕ್ಷೆ ನಡೆಯತ್ತಿದ್ದು, 5965 ಜನರ ಪೈಕಿ 3696 ಜನ ಪರೀಕ್ಷೆ ಬರೆದಿದ್ದು, 2272 ನಜನೆ ಗೈರಾಗಿದ್ದಾರೆ./////