Belagavi News In Kannada | News Belgaum

ಕುಡಿದ ಅಮಲಿನಲ್ಲಿ ಬಾವಿಗೆ ಬಿದ್ದು ಯುವಕ ಸಾವು

ಚಿಕ್ಕೋಡಿ: ಕುಡಿದ ಅಮಲಿನಲ್ಲಿ ಬಾವಿಗೆ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ಹೊರವಲಯದ ಬಾವಿಯಲ್ಲಿನಡೆದಿದೆ.

ಸಾಗರ ಹೆರವಾಡೆ (23) ಮೃತಪಟ್ಟ ಯುವಕ. ಈತ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ ನಿವಾಸಿ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ಹೊರವಲಯದ ಬಾವಿಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಈತ ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ಜರುಗುತ್ತಿದ್ದ ಲಕ್ಷ್ಮೀ ಜಾತ್ರೆಗೆ ಆಗಮಿಸಿದ್ದ. ಕುಡಿದ ಅಮಲಿನಲ್ಲಿ ಈತ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈತನ ಜೇಬಿನಲ್ಲಿ ತಂಬಾಕು, ಮಾವಾ ಸಿಕ್ಕಿದೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////