Belagavi News In Kannada | News Belgaum

ಮೂರು ದಿನದಲ್ಲಿ ತೈಲ ಬೆಲೆಯಲ್ಲಿ ವ್ಯತ್ಯಾಸ: ರಾಹುಲ್‌ ಗಾಂಧಿ

ಬೆಂಗಳೂರು: ‘ಮೂರು ದಿನದಲ್ಲಿ  ಪೆಟ್ರೋಲ್‌ ದರದಲ್ಲಿ ದೇಶ ವ್ಯತ್ಯಾಸ ಕಾಣಬಹುದು. 0.8 ರೂ ಮತ್ತು 0.3 ರೂ ಏರಿಕೆಯನ್ನು ನಿರೀಕ್ಷಿಸಬಹುದು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ ₹8 ಮತ್ತು ₹6 ಕಡಿತ ಮಾಡಿದ ಬೆನ್ನಲ್ಲೇ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

‘ಮೇ 1, 2020ರಲ್ಲಿ ಒಂದು ಲೀಟರ್‌ ಪೆಟ್ರೋಲ್‌ ದರ ₹69.5 ಇತ್ತು. ಮಾರ್ಚ್‌ 1, 2020ರಲ್ಲಿ ಪೆಟ್ರೋಲ್‌ ಬೆಲೆ ₹95.4 ಇತ್ತು. ಮೇ 1, 2022ರಲ್ಲಿ ₹105.4 ಇತ್ತು. ಇದೀಗ ಮೇ 22, 2022ರಂದು ₹96.7 ಇದೆ’ ಎಂದು ರಾಹುಲ್‌ ಗಾಂಧಿ ದರ ಪಟ್ಟಿಯನ್ನು ಮಾಡಿದ್ದಾರೆ.

‘ಇದೀಗ ಪೆಟ್ರೋಲ್‌ ದರ ‘ವಿಕಾಸ’ದ ರೂಪದಲ್ಲಿ ಪುನಃ ಪ್ರತಿದಿನವೂ ₹0.8 ಮತ್ತು ₹0.3 ಏರಿಕೆಯನ್ನು ನಿರೀಕ್ಷಿಸಬಹುದು. ಜನರನ್ನು ಮೂರ್ಖರನ್ನಾಗಿಸುವುದನ್ನು ಸರ್ಕಾರ ನಿಲ್ಲಿಸಬೇಕು. ದಾಖಲೆ ಪ್ರಮಾಣದ ಹಣದುಬ್ಬರದಿಂದ ನಿಜವಾದ ನಿರಾಳತೆಗೆ ಜನರು ಅರ್ಹರು’ ಎಂದು ರಾಹುಲ್‌ ಗಾಂಧಿ ಟ್ವೀಟ್‌ನಲ್ಲಿ ಹೇಳಿದ್ದಾರೆ.//////