Belagavi News In Kannada | News Belgaum

ಮನೆ ಬಾಡಿಗೆ ಕೇಳುವ ನೆಪದಲ್ಲಿ ಮನೆ ಕಳ್ಳತನ: ಮೂವರು ಅರೆಸ್ಟ್‌ ..!

ಬೆಂಗಳೂರು:  ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗೆ ಹೋಗಿ ಮಾಲೀಕರ ಕೈ-ಕಾಲು ಕಟ್ಟಿ ಬಾಯಿಗೆ ಗಮ್‍ಟೇಪ್ ಸುತ್ತಿ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದ ಮೂವರನ್ನು ನಂದಿನಿಲೇಔಟ್ ಠಾಣೆ ಪೊಲೀಸರು ಬಂಧಿಸಿ 1.5ಲಕ್ಷ ರೂ. ಮೌಲ್ಯ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರವಾಹನ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಂದಿನಿಲೇಔಟ್‍ನ 2ನೇ ಕ್ರಾಸ್, 2ನೇ ಬ್ಲಾಕ್ ಮನೆಯನ್ನು ಬಾಡಿಗೆ ಕೇಳುವ ನೆಪದಲ್ಲಿ ಮೇ 9ರಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಮೂವರು ಬಂದಿದ್ದಾರೆ.

ಪಿರ್ಯಾದುದಾರರ ಕಟ್ಟಡದ ಎರಡನೇ ಮಹಡಿಯ ಮನೆ ನೋಡುವ ನೆಪದಲ್ಲಿ ಹೋಗಿ ಮನೆ ಗಲೀಜಾಗಿದೆ ನೋಡಿ ಎಂದು ಅವರನ್ನು ಒಳಗೆ ಕರೆದು ಕೈ-ಕಾಲು ಕಟ್ಟಿಹಾಕಿ, ಬಾಯಿ ಮತ್ತು ಕುತ್ತಿಗೆಗೆ ಗಮ್‍ಟೇಪ್ ಸುತ್ತಿ ಅವರ ಮೈ ಮೇಲಿದ್ದ 48 ಗ್ರಾಂ ಚಿನ್ನದ ಮಾಂಗಲ್ಯ ಸರ, ಮುತ್ತಿನ ಓಲೆ ಕಿತ್ತುಕೊಂಡು ಪರಾರಿಯಾಗಿದ್ದರು. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////