Belagavi News In Kannada | News Belgaum

ಪಾಕ್ ಮತ್ತು ಚೀನಾ ದೇಶಕ್ಕೆ ಭಾರತ ದಿಟ್ಟ ಉತ್ತರ ನೀಡಿದೆ: ಪ್ರಲ್ಹಾದ್‌ ಜೋಶಿ

ಚಿಕ್ಕೋಡಿ: ಭಾರತ ಜಗತ್ತಿನಲ್ಲೆ ಆರ್ಥಿಕ ಸದೃಢತೆ ಕಾಯ್ದುಕೊಳ್ಳಲು ಮೋದಿ ನೇತೃತ್ವದ ಸರಕಾರದಲ್ಲಿ ಸಾದ್ಯವಾಗಿದೆ. ಬಯೋತ್ಪಾದನೆ ವಿರುದ್ದ ಪಾಕ್ ಮತ್ತು ಚೀನಾ ದೇಶಕ್ಕೆ ಭಾರತ ದಿಟ್ಟ ಉತ್ತರ ನೀಡಿದೆ  ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಪಟ್ಟಣದ ಕೇಶವ ಕಲಾಭವನದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ಮತಕ್ಷೇತ್ರ ಮತ್ತು ಪದವೀಧರ ಮತಕ್ಷೇತ್ರದ ಬಿಜೆಪಿ  ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಭಾರತ ವಿದೇಶಕ್ಕೆ ದಾಖಲೆಯ ಮಟ್ಟದಲ್ಲಿ ಸಾಮಗ್ರಿ ರಪ್ತು ಮಾಡುವ ಸಾಧನೆ ಗೈದಿದೆ. ತಂತ್ರಜ್ಞಾನದ ಮೂಲಕ ದೇಶದ ಅಭಿವೃದ್ಧಿಗೆ ಮೋಧಿ ನೇತೃತ್ವದ ಬಿಜೆಪಿ ಸರಕಾರದಿಂದ ಹೆಚ್ಚಿನ ಆರ್ಥಿಕ ಲಾಭ ದೇಶಕ್ಕೆ ಆಗಿದೆ ಎಂದರು.

ಮೋದಿ ಸರಕಾರದ  ಆಡಳಿತ ವಿರುದ್ದ ವಿಪಕ್ಷಗಳು ಲಂಚದ ಆರೋಪಮಾಡುವ ಧೈರ್ಯೆ ಇಲ್ಲದಂತಾಗಿದೆ ಎಂದು ತಿಳಿಸಿದರು.  ಈ ಮೋದಲು ಪದ್ಮಶ್ರೀ ಪ್ರಶಸ್ತಿ ಕೆಲ ರಾಜ ಕಾರಣಿಗಳಿಗೆ ನೀಡಲಾಗುತ್ತಿತ್ತು. ಆದರೆ ಇಂದು   ನಿಜವಾದ  ಅರ್ಹ ಸಾಮಾನ್ಯ ಸಾಧನೆ ಗೈದವರು ಪ್ರಶಸ್ತಿ ಪಡೆಯುತ್ತಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಗೊವಿಂದ ಕಾರಜೋಳ ಮಾತನಾಡಿ, ಕೇಂದ್ರದ ಮೋದಿ ಸರಕಾರ, ರಾಜ್ಯದ ಬೊಮ್ಮಾಯಿ ಸರಕಾರ ಅವರ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಇಂದು ನಾವು ಮತ ಕೇಳುತ್ತಿದ್ದೇವೆ.  ಶಿಕ್ಷಣ ರಂಗ, ಪದವಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ವಿಶೇಷ ಯೋಜನೆ ಜಾರಿ ಮಾಡುತ್ತಿದೆ. ಹೆಚ್ವಿನ ಮತ ನೀಡಿ ಎರಡು ಅಭ್ಯರ್ಥಿಗಳನ್ನು ಗೆಲ್ಲಿಸುವದರೊಂದಿಗೆ ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ,ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಉಮೇಶ ಕತ್ತಿ, ಶಾಸಕ ಪಿ.ರಾಜೀವ. ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ  ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಮಹೇಶ ಕುಮಟೋಳಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಎನ್.ರವಿಕುಮಾರ, ವಿಧಾನ ಪರಿಷತ್‍ನ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ, ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ. ರಾಜೇಶ ನೇರ್ಲಿ, ಮಹೇಶ ಭಾತೆ, ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ದುಂಡಪ್ಪ ಬೆಂಡವಾಡೆ, ಅಪ್ಪಾಸಾಬ ಚೌಗಲಾ, ವಿಶ್ವನಾಥ ಕಾಮಗೌಡ, ಅಶೋಕ ಹರಗಾಪೂರೆ, ವಿ.ಬಿ.ಈಟಿ, ಸುರೇಶ ಘರಬುಡೆ ಮುಂತಾದವರು ಉಪಸ್ಥಿತರಿದ್ದರು. ಸತೀಶ ಅಪ್ಪಾಜಿಗೋಳ ಸ್ವಾಗತಿಸಿದರು. ಸುರೇಶ ಉಕ್ಕಲಿ ಮತ್ತು ಚಂದ್ರಶೇಖರ ಅರಭಾಂವಿ ನಿರೂಪಿಸಿದರು.//////