Belagavi News In Kannada | News Belgaum

ಈ ಗ್ರಾಮಸ್ಥರೆಲ್ಲ ಮೂರು ದಿನ ಬಿಡ್ಲೇಬೇಕು ಊರು,ಈ ಗ್ರಾಮದ ಐತಿಹಾಸಿಕ ಘಟನೆ ಕೇಳಿದ್ರೆ ನಿಜಕ್ಕೂ ಇಳಿಯುತ್ತೆ ಬೆವರು!

ರಾಕೇಶ ಮೈಗೂರ
ಇಷ್ಟಾರ್ಥ ಸಿದ್ಧಿಗಾಗಿ ಈ ಗ್ರಾಮಸ್ಥರೆಲ್ಲ ಮೂರು ದಿನ ಬಿಡ್ಲೇಬೇಕು ಊರು,ಈ ಗ್ರಾಮದ ಐತಿಹಾಸಿಕ ಘಟನೆ ಕೇಳಿದ್ರೆ ನಿಜಕ್ಕೂ ಇಳಿಯುತ್ತೆ ಬೆವರು!
ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ಈ ರೀತಿ ಎತ್ತಿನ ಗಾಡಿಗಳ ಮೂಲಕ ತಂಡೋಪತಂಡವಾಗಿ ಹೊರಟಿರುವ ರೈತರು,ಕ್ಯಾಂಟರ್ ,ಟ್ಯಾಕ್ಸಿ ಹೀಗೆ ವಿವಿಧ ವಾಹನಗಳಲ್ಲಿ ತೆರಳುತ್ತಿರುವ ಜನರು ಅಷ್ಟಕ್ಕೂ  ಇವರೆಲ್ಲಿ ಹೀಗೆ ಇಡೀ ಗ್ರಾಮದ ಜನರು ಗೂಳೆ ಹೊರಟಿದ್ದಾರೆ ಅನ್ಕೊಂಡ್ರಾ ನಿಮ್ಮ ಊಹೆ ಸುಳ್ಳಾಗಿದೆ ಇವರು ಹೊರಟಿರುವುದು ತಮ್ಮ ಊರಿನ ಗ್ರಾಮದೇವಿಯ ಉತ್ಸವಕ್ಕಾಗಿ ಎನ್ನುವುದು ಗಮನಾರ್ಹ.
 ಅಥಣಿ ತಾಲೂಕಿನ ಐತಿಹಾಸಿಕ ಹಿನ್ನೆಲೆ ಸಾರುವ ಕಕಮರಿ ಗ್ರಾಮದ ಅಧಿದೇವತೆಯಾದ ಶ್ರೀ ಅಮ್ಮಾಜೇಶ್ವರಿ ಉತ್ಸವಕ್ಕೆ ಇಡೀ ಗ್ರಾಮದ ಜನರೆಲ್ಲ ಮೂರು ದಿನಗಳ ಕಾಲ ಗ್ರಾಮದಿಂದ ಹೊರಗುಳಿದು ಪಕ್ಕದ ಝಂಜರವಾಡ ಗ್ರಾಮದಲ್ಲಿ ಮೂರು ದಿನಗಳ ಕಾಲ ಠಿಕಾಣಿ ಹೂಡಿ ದೇವಿಗೆ  ವೈಶಿಷ್ಟ್ಯ ಪೂರ್ಣ ಹಾಗೂ ವಿದಾಯಕತೆಯ ಭಕ್ತಿ ಸಮರ್ಪಣೆ ಮಾಡುವ ಉತ್ಸವ ಇದಾಗಿದೆ.
 ಕಕಮರಿ ಗ್ರಾಮಸ್ಥರೆಲ್ಲರೂ ಯಾರು ಕೂಡ ಮನೆಗಳಲ್ಲಿ ಉಳಿಯದೆ ಎಲ್ಲರೂ ಅಮ್ಮಾಜೇಶ್ವರಿ ಉತ್ಸವಕ್ಕೆ ಬರುತ್ತಾರೆ ತಮ್ಮ ತಮ್ಮ ಮನೆಗಳಿಗೆ ಬೀಗವನ್ನು ಹಾಕದೆ ಯಾವುದೇ ಮನೆಯಲ್ಲಿ ಯಾರೂ ಇರದೆ ಇಡೀ ಊರಿಗೆ ಊರೇ ಮೂರುದಿನಗಳ ಕಾಲ ಬಿಕೋ ಎನ್ನುತ್ತದೆ.
ಒಂದೊಮ್ಮೆ ಯಾರಾದರೂ ಉಳಿದರೆ ಅವರಿಗೆ ಸಂಕಷ್ಟ ತಪ್ಪಿದ್ದಲ್ಲ
    ಅಷ್ಟಕ್ಕೂ ಈ ಉತ್ಸವದ ಹಿನ್ನೆಲೆ ಹಾಗೂ ಮೂಲದ ಕುರಿತು ಅವಲೋಕಿಸಿದಾಗ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಉತ್ಸವ ಇದಾಗಿದೆ ಎಂಬುದು ಗ್ರಾಮಸ್ಥರ ಮಾತುಗಳಾಗಿವೆ.
ಇನ್ನೂ ಮೂರು ದಿನಗಳ ಉತ್ಸವಕ್ಕೆ ಕಕಮರಿ ಗ್ರಾಮದ 10 ಸಾವಿರಕ್ಕೂ ಹೆಚ್ಚು ಜನರು ಝಂಜರವಾಡ ಗ್ರಾಮಕ್ಕೆ ಆಗಮಿಸಿ ವಿಶೇಷ ಪೂಜೆ ಪುನಸ್ಕಾರ ನೈವೇದ್ಯ ಸಂತರ್ಪಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಉತ್ಸವ ಆಚರಿಸುತ್ತಾರೆ.
 ಕೃಷ್ಣಾ ನದಿಯಲ್ಲಿ ಮಿಂದೆದ್ದು ಮಡಿಯಿದ ಸ್ನಾನ ಮಾಡಿ ದೇವಿಗೆ ಎಲ್ಲರೂ ಸಾಮೂಹಿಕವಾಗಿ ನೈವೈಧ್ಯ ಅರ್ಪಿಸುತ್ತಾರೆಂಬುದು ಈ ಉತ್ಸವದ ಮತ್ತೊಂದು ವಿಶೇಷತೆಯಾಗಿದೆ ಇನ್ನೂ ಕಡುಬು ಶೆಂಡಿಗೆ ಹಪ್ಪಳ ಹೀಗೆ ವಿವಿಧ ಥರಹದ ಖಾದ್ಯಗಳನ್ನು ತಯಾರಿಸಿ ಇಲ್ಲಿ ದೇವಿಗೆ ಅರ್ಪಿಸುತ್ತಾರೆ.
   ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಧರ್ಮ ಸಂಘರ್ಷಕ್ಕೆ ಆಸ್ಪದ ನೀಡದೆ ಇಲ್ಲಿನ ಮುಸ್ಲೀಂ ಕುಟುಂಬಗಳೂ ಸಹ ಎಲ್ಲರಂತೆ ಉತ್ಸವ ಆಚರಣೆಯಲ್ಲಿ ಮುಂದಾಗಿ ಭಾವೈಕ್ಯತೆಯ ಸಂದೇಶ ಸಾರುತ್ತವೆ.
ಅಲ್ಲದೆ ಮಾತೆ ಅಮ್ಮಾಜೇಶ್ವರಿಯು ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಬರುವ ಉತ್ಸವ ಇದಾಗಿದೆ ಇನ್ನೂ ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವ ಈ ಉತ್ಸವದ ಸಂದರ್ಭದಲ್ಲಿ ಕುಲ ಕಸುಬಿಗೆ ಸಂಬಂಧಪಟ್ಟಂತೆ ಕಕಮರಿ ಗ್ರಾಮಸ್ಥರೆಲ್ಲರೂ ಅತ್ಯಂತ ಭಯ ಭಕ್ತಿ ಭಾವದಿಂದ ಉತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎನ್ನುವುದು ಇಲ್ಲಿನ ಮುಸ್ಲೀಂ ಕುಟುಂಬದ ಅನಿಸಿಕೆಯಾಗಿದೆ.
ಇನ್ನೂ ಅತೀ ವೈಶಿಷ್ಟ್ಯ ಪೂರ್ಣವಾಗಿ ಹಾಗೂ ವೈವಿಧ್ಯಮಯತೆಯಿಂದ ಕೂಡಿರುವ ಈ ಅಮ್ಮಾಜೇಶ್ವರಿ ಉತ್ಸವವು ಅರ್ಥಪೂರ್ಣವಾಗಿ ಆಚರಣೆಯಾಗಿತ್ತಲ್ಲದೆ
ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಜಾತ್ರೆ,ಉತ್ಸವಗಳು ಮತ್ತೆ ಆಚರಣೆಯ ಮುನ್ನೆಲೆಗೆ ಬಂದಿರುವುದು ಜನರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.ಇದಕ್ಕೆ ಭಕ್ತಿಯ ಮುಂದೆ ಎಲ್ಲವೂ ನಗಣ್ಯ ದೊಡ್ಡ ಶೂನ್ಯವೆಂದು
 ತಮ್ಮ ತಮ್ಮ ಮನೆಗಳಿಗೆ ಬೀಗವನ್ನು ಹಾಕದೆ ಯಾರೂ ಇರದ ಸನ್ನಿವೇಶದಲ್ಲಿ ಮೂರು ದಿನಗಳ ಕಾಲ ಮನೆಯ ಕಡೆಗೆ ಗಮನ ಹರಿಸದೆ ಭಕ್ತಿಯ ಜಪ ತಪ ದೊಂದಿಗೆ ದೇವಿಗೆ ವಿಧೇಯರಾಗಿ ಗ್ರಾಮವನ್ನು ತೊರೆಯುವ ಕಕಮರಿ ಗ್ರಾಮಸ್ಥರ ಭಕ್ತಿಯನ್ನು ನಿಜಕ್ಕೂ ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಬೇಕಿದೆ.