Belagavi News In Kannada | News Belgaum

ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ,

ಅಥಣಿ: ಇಲ್ಲಿಯ ಗಚ್ಚಿನಮಠದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ,ಶಿವಬಸವ ಸ್ವಾಮಿಗಳ ಚರಪಟ್ಟಾಧಿಕಾರ ನಿಮಿತ್ಯ ಹಮ್ಮಿಕೊಂಡ ಬಸವಪುರಾಣ ಮಂಗಲೊತ್ಸವ ಹಾಗೂ ಕೃಷಿಕ,ಶಿಕ್ಷಕ ಹಾಗೂ ಸೈನಿಕ ಸಮಾವೇಶ ಅತ್ಯಂತ ಯಶಸ್ವಿಯಾಗಿ ಶುಕ್ರವಾರ ೨೦ರಂದು ಸಂಜೆ ವಿದ್ಯಾಪೀಠದ ಶಾಲಾ ಆವರಣದಲ್ಲಿ ಜರುಗಿತು.
   ಕಾರ್ಯಕ್ರಮದ ಮುಖ್ಯ ಅತಿಥಿ ಮಾಜಿ ಸಂಸದ ಬಸವರಾಜ ಪಾಟೀಲ ಶೇಡಂ ಅವರು ಮಾತನಾಡಿ ಈ ದೇಶದ ಆಸ್ತಿಯಾಗಿರುವ ಕೃಷಿಕ,ಶಿಕ್ಷಕ,ಸೈನಿಕರ ಸೇವೆಯನ್ನ ನಾವೆಲ್ಲರೂ ಗೌರವಿಸುವ ಜತೆಗೆ ಅವರ ಹಿತ ಕಾಪಾಡಲು ಸರ್ಕಾರ ಮತ್ತು ನಾವು ಬದ್ದರಾಗಬೇಕೆಂದ ಅವರು  ದೇಶದ ಅನ್ನದಾತನಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಗಾಂಧೀಜಿಯವರ ಗ್ರಾಮಸ್ವರಾಜ್ಯ,ವಿನೊಭಾ ಬಾವೆಯವರ ಭೂದಾನದ ಗೌರವನ್ನ ನಾವು ಬೆಳೆಸಿಕೊಳ್ಳಬೇಕು. ಅತಿಯಾದ ರಸಾಯನಿಕಗಳ ಬಳಕೆ ಕಡಿಮೆ ಮಾಡಿ ಸತ್ವಯುತ ಆಹಾರ,ಬೆಳೆಗಳನ್ನ ಬೆಳೆಯಲು ರೈತರು ಮುಂದಾಗಬೇಕು ಎಂದರು. ನಮ್ಮ ಮಕ್ಕಳನ್ನ ನಾವು ಹೆಚ್ಚು ಅಂಕ ಪಡೆಯಲು,ನೌಕರಿಗಾಗಿ,ವಿದೇಶಕ್ಕೆ ಹೋಗುವಂತ ಶಿಕ್ಷಣ ನೀಡುವ ಬದಲು ನಮ್ಮ ದೇಶದ ಸುಧಾರಣೆಗೆ ಇಲ್ಲೆ ಇರುವಂತ ಶಿಕ್ಷಣ ನೀಡಿ ಮಕ್ಕಳಿಗೆ ದಾನ ಮಾಡುವ ಗುಣ ಬೆಳಸುವಂತಾಗಬೇಕು ಶಿಕ್ಷಕರ ವೃತ್ತಿ ಅತೀ ಕಠಿಣವಾಗಿದೆ ದೇಶಭಕ್ತರಂತೆ ಮಕ್ಕಳನ್ನ ಬೆಳೆಸಬೇಕು ಅದೇ ರೀತಿ ದೇಶದ ಗಡಿಕಾಯುವ ಸೈನಿಕರಿಗೆ ಹೆಚ್ಚಿನ ಗೌರವ ನೀಡಬೇಕು.
  ವಿಪ ಸದಸ್ಯ ಲಕ್ಷö್ಮಣ ಸವದಿ ಮಾತನಾಡಿ ಬಸವಕಲ್ಯಾಣದಲ್ಲಿ ೬೫೦ ಕೋಟಿ ವೆಚ್ಚದಲ್ಲಿ ಬೃಹತ್ ಅನುಭವ ಮಂಟಪ ನಿರ್ಮಾಣವಾಗಲಿದೆ ಮಾಜಿ ಸಿಎಮ್ ಬಿ.ಎಸ್.ಯಡಿಯೂರಪ್ಪನವರು ಅವರು ಅನುಮೊದನೆ ನೀಡಿದ್ದರು ಅದರಂತೆ  ಈಗೀನ ಸಿಎಮ್ ಬಸವರಾಜ ಬೊಮ್ಮಾಯಿ ಇನ್ನು ೩-೪ವರ್ಷದಲ್ಲಿ ಬೃಹತ ಅನುಭವ ಮಂಟಪ ಲೊಕಾರ್ಪಣೆಗೆ ಸಿದ್ದವಾಗಲಿದೆ  ಪ್ರಜಾಪ್ರಭುತ್ವ ವ್ಯವಸ್ಥೇಯ ಪ್ರತೀಕವಾಗಿದೆ.
       ಸಾನಿಧ್ಯವಹಿಸಿದ ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ ೧೯ನೇ ಶತಮಾನದಿಂದ ೨೦ನೇ ಶತಮಾನದಲ್ಲಿ ಬಸವತತ್ತ÷್ವ ಉಳಿದಿರುವುದು ಅಥಣಿ ಮುರುಘೇಂದ್ರ ಶಿವಯೋಗಿಗಳಿಂದ ಅವರು ಪ್ರಜಾಪ್ರಭುತ್ವದ ಜನಕ ಬಸವಣ್ಣನಾದರೆ ಅವರ ವಚನಗಳನ್ನ ನಾಡಿಗೆ ಪ್ರಸಾರ ಮಾಢುವ ಜತೆಗೆ ಅದರಂತೆ ನಡೆದು ತೋರಿದರು. ತಾಡೊಲಿಯಲ್ಲಿದ್ದ ವಚನ ಸಾಹಿತ್ಯವನ್ನ ೧೯೨೮ರಲ್ಲಿ ವಚನ ಸಾಹಿತ್ಯವನ್ನ ಡಾ.ಫ.ಗು.ಹಳ್ಳಕಟ್ಟಿಯರು ಪ್ರಕಟಿಸಿ ಹೊಸ ಇತಿಹಾಸಕ್ಕೆ ಸಾಕ್ಷಿಯಾದರು ಎಂದರು.
    ಸಾನಿಧ್ಯವಹಿಸಿದ ನಿಡೋಸೊಸಿಯ ಜಗದ್ಗುರು ಪಂದಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ  ಶಿವಯೋಗಿಗಳು ಮಹಾನ ವ್ಯಕ್ತಿಗಳಿಗೆ ಬೆಳಕು ನೀಡಿದ್ದರು. ಅಥಣಿಯನ್ನ ಪಾವನಗೊಳಿಸಿ ಈ ನೆಲವನ್ನ ಪುಣ್ಯದಾಲಯವನ್ನಾಗಿಸಿ ನಾಡಿಗೆ ಬೆಳಕಾದವರು ಶಿವಯೋಗತ್ವಕ್ಕೆ ಹೊಸ ಚೈತನ್ಯ ತಂದುಕೊಟ್ಟವರು ಅವರ ಬದುಕೆ ಒಂದು ಪವಾಡವಾಗಿತ್ತು ಅವರ ಲಿಂಗೈಕ್ಯ ಶತಮಾನೋತ್ಸವ ನಾಡಿಗೆ ಮಾದರಿಯಾಗಲಿದೆ ಎಂದರು.
     ಸಾನಿಧ್ಯವಹಿಸಿದ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ,ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ ಅಥಣಿ ಕೂಡ ಬಸವಕಲ್ಯಾಣವಾಗಿದೆ ಒಂದು ತಿಂಗಳವರೆಗೆ ಬಸವಪುರಾಣ ಕೇಳಿದ ಈ ನೆಲದ ಭಕ್ತರು ಪುನಿತರಾಗಿದ್ದಾರೆ. ಬಸವಪುರಾಣವೆಂದರೆ ಒಂದು ಶತಮಾನದ ಇತಿಹಾಸವಾಗಿದೆ ಎಂದರು.
  ಸಂಗೀತ ಸಂಭ್ರಮ: ಸರಿಗಮಪ ಸ್ಪರ್ಧೇಯ ಪ್ರತಿಭೆಗಳಾದ ಜ್ಞಾನಾ,ಮಹಾನ್ಯ ಮತ್ತು ಸೂರ್ಯಕಾಂತ ಅವರಿಂದ ವಿಶೇಷ ಭಕ್ತಿಗೀತೆಗಳು,ವಚನಗಾಯನ ಜರುಗಿತು.