Belagavi News In Kannada | News Belgaum

ಸಮಾಜ ಶೈಕ್ಷಣಿಕ-ಆರ್ಥಿಕವಾಗಿ ಪ್ರಗತಿ ಸಾಧಿಸಲಿ: ಜಗದೀಶ

ಬೆಳಗಾವಿ: ಬಿಲ್ಲವರ ಸಮಾಜವು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಬಿಲ್ಲವರ ಅಸೋಸಿಯೇಷನ್ ಮತ್ತು ಶಿವಗಿರಿ ಸೊಸೈಟಿ ಜಂಟಿಯಾಗಿ ಸಮಾಜದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಾಯ ನೀಡುತ್ತಿರುವುದು ಶ್ಲಾಘನೀಯಕಾರ್ಯ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳಾದ ಜಗದೀಶ ಐ. ಎಚ್. ಅಭಿಪ್ರಾಯ ಪಟ್ಟರು.
ಬಿಲ್ಲವರ ಅಸೋಸಿಯೇಷನ್ ಮತ್ತು ಶಿವಗಿರಿ ಸೊಸೈಟಿ ಇವುಗಳ ಜಂಟಿ ಆಶ್ರಯದಲ್ಲಿ  ‘ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ’ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮದೇಶದ ಸಂವಿಧಾನಾತ್ಮಕ ಸವಲತ್ತುಗಳು ನಮ್ಮ ಸಮಾಜದ ಕಟ್ಟಕಡೆಯಕುಟುಂಬಕ್ಕೆತಲುಪಬೇಕು. ಅದರಕುರಿತುಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸೊಸೈಟಿಯಅಧ್ಯಕ್ಷ ಸುಜನಕುಮಾರ ಮಾತನಾಡಿ, ವಿದ್ಯಾರ್ಥಿಗಳು ಸಂಘದ ಸದುಪಯೋಗ ಪಡೆದುಕೊಂಡು, ಉನ್ನತ ಶಿಕ್ಷಣ ಪಡೆದು, ಸಮಾಜಕ್ಕೆ ಹಾಗೂ ಪೋಷಕರಿಗೆಕೀರ್ತಿತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಒಂದನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ನೋಟ್-ಬುಕ್ ವಿತರಿಸಲಾಯಿತು.
ವೇದಿಕೆಯಲ್ಲಿ ಸೊಸೈಟಿಯಉಪಾಧ್ಯಕ್ಷ ಸುಂದರಎಸ್. ಕೋಟ್ಯಾನ್, ಸೊಸೈಟಿಯಕಟ್ಟಡ ಮಾಲೀಕ ಸುನಿಲ ನಾಯ್ಕರವರು ಉಪಸ್ಥಿತರಿದ್ದರು. ಈ ವೇಳೆ ಸೊಸೈಟಿಯ ನಿರ್ದೇಶಕ ಮಂಡಳಿಯವರು, ಸಂಘದ ಪದಾಧಿಕಾರಿಗಳು,ಮಹಿಳಾ ಮಂಡಳಿಯಯವರು ಸೊಸೈಟಿಯ ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಕರು ಹಾಜರಿದ್ದರು. ಮುಖ್ಯಕಾರ್ಯ ನಿರ್ವಾಹಕ ಸೋಮನಾಥ ಕಡಕೋಳ ಸ್ವಾಗತಿಸಿದರು.  ಚಂದ್ರಎಚ್. ಪೂಜಾರಿಕಾರ್ಯಕ್ರಮ ನಿರ್ವಹಿಸಿದರು.