ವಿವಿಧ ಕಡೆಗಳಲ್ಲಿ ಮನೆಕಳ್ಳತನ, ಸರಗಳ್ಳತನ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳನೋರ್ವನನ್ನು ಬಂಧಿಸಿ, ಆತನಿಂದ ಚಿನ್ನಾಭರಣ ಸೇರಿ ಒಟ್ಟು ₹ 3ಲಕ್ಷ ಮೌಲ್ಯ ವಸ್ತುಗಳನ್ನು ವಶ

news belagavi

ಬೆಳಗಾವಿ: ನಗರದ ವಿವಿಧ ಕಡೆಗಳಲ್ಲಿ ಮನೆಕಳ್ಳತನ, ಸರಗಳ್ಳತನ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳನೋರ್ವನನ್ನು ಬಂಧಿಸಿ, ಆತನಿಂದ ಚಿನ್ನಾಭರಣ ಸೇರಿ ಒಟ್ಟು ₹ 3ಲಕ್ಷ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಂಡಿರುವ ‌ಘಟನೆ ಭಾನುವಾರ ನಗರದಲ್ಲಿ ನಡೆದಿದೆ.

ಶಾಹುನಗರದ ಜೋಶಿ ಕಾಲನಿಯ ಶಹಬ್ಬಾಜ್ ಪಿರಜಾದೆ(27) ಬಂಧಿತ. ನಗರದ ಹಲವು ಕಿರಾಣಿ ಅಂಗಡಿ ಹಾಗೂ ಮನೆಗಳಲ್ಲಿ ಕಳ್ಳತನ ಮತ್ತು ರಸ್ತೆಯಲ್ಲಿ ಒಬ್ಬಂಟಿಯಾಗಿ ಹೋಗುವ ಸಾರ್ವಜನಿಕರನ್ನು ಬೆದರಿಸಿ ಅವರಲ್ಲಿದ್ದ ಹಣ ಮತ್ತು ಆಭರಣಗಳನ್ನು ಕಿತ್ತುಕೊಳ್ಳುತ್ತಿದ್ದನು. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಕಳ್ಳನ ಬಂಧನಕ್ಕೆ ಜಾಲ ಬೀಸಿದ್ದರು.

ಬಂಧಿತನಿಂದ ₹ 1.80 ಲಕ್ಷ  ಮೌಲ್ಯದ ಚಿನ್ನಾಭರಣ, ₹ 1.15 ಲಕ್ಷ  ಮೌಲ್ಯದ ದ್ವಿಚಕ್ರ ವಾಹನಗಳು ಮತ್ತು₹ 5 ಸಾವಿರ ಬೆಲೆಬಾಳುವ ಮೊಬೈಲ್ ಸೇರಿದಂತೆ ಒಟ್ಟು ₹ 3ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////

Read Latest Kannada News Alerts on Belgaum News (Belagavi News) Follow us on Twitter - Facebook - Instagram - Pinterest & YouTube